ಗುರುವಾರ ಯಕ್ಕುಂಡಿಯಲ್ಲಿ ಕೆರೆಗೆ ಬಾಗೀನ, ನಾನಾ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ- ಶಾಸಕ ಎಂ. ಬಿ. ಪಾಟೀಲ ಭಾಗಿ

ವಿಜಯಪುರ: ಕೃಷ್ಣಾ ನದಿ ನೀರಿನಿಂದ ಭರ್ತಿಯಾಗಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಯಕ್ಕುಂಡಿ ಕೆರೆಗೆ ಬಾಗೀನ ಅರ್ಪಣೆ ಕಾರ್ಯಕ್ರಮ ಗುರುವಾರ ನಡೆಯಲಿದ್ದು, ಶಾಸಕ ಎಂ. ಬಿ. ಪಾಟೀಲ ಪಾಲ್ಗೊಳ್ಳಲಿದ್ದಾರೆ.

ಇದೇ ವೇಳೆ, ಬಬಲೇಶ್ವರ ವಿಧಾನ ಸಭೆhu ಕ್ಷೇತ್ರದ ಯಕ್ಕುಂಡಿ ಗ್ರಾಮದ ಕೊಪ್ಪದ ಅವರ ತೋಟದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಚನ್ನಪ್ಪ ಸಿದಗೊಂಡಪ್ಪ ಕೊಪ್ಪದ ಸಹೋದರರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಲಿದ್ದಾರೆ. ಬೆ 11ಕ್ಕೆ ಈ ಕಾರ್ಯಕ್ರಮ ನಡೆಯಲಿದೆ.

ಕಾಂಗ್ರೆಸ್ ಸೇರಲಿರುವ ಚನ್ನಪ್ಪ ಕೊಪ್ಪದ.

ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದ ಕೆರೆಯು ಕೃಷ್ಣಾ ನದಿಯಿಂದ ಮುಳವಾಡ ಏತ ನೀರಾವರಿ ಯೋಜನೆ ಮಲಘಾಣ ಪಶ್ಚಿಮ ಕಾಲುವೆಯಿಂದ ತುಂಬಿಸಲಾಗುತ್ತಿದೆ. ‌ಇದರಿಂದಾಗಿ ಯಕ್ಕುಂಡಿ ಹಾಗೂ ಸುತ್ತಲಿನ ಪ್ರದೇಶ ಹಸಿರಿನಿಂದ ಸಂಪತ್ಭರಿತವಾಗಿದೆ. ‌ಈ ಭಾಗದ ಪ್ರಗತಿಪರ ರೈತರು ಹಾಗೂ ಪ್ರತಿಷ್ಠಿತ ಕೊಪ್ಪದ ಮನೆತನದ ಹಿರಿಯರಾದ ಬಿಜೆಪಿ ಮುಖಂಡ ಚನ್ನಪ್ಪ ಕೊಪ್ಪದ ಸಹೋದರರು ಮತ್ತು ಅವರ ಬೆಂಬಲಿಗರು, ಇಲ್ಲಿನ ನೀರಾವರಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಈಗ ಎಂ. ಬಿ. ಪಾಟೀಲ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ. ಅವರೊಂದಿಗೆ ಯಕ್ಕುಂಡಿ ಹಾಗೂ ಸುತ್ತಲಿನ ಗ್ರಾಮದ ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌