ವಿಜಯಪುರ: ಗಣೇಶೋತ್ಸವ ಆಚರಣೆಗಳಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸರಕಾರ ತಮ್ಮ ಬೇಡಿಕೆಯಂತೆ ಸಡಿಲಗೊಳಿಸಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುದ್ದಾಗಿ ತಮಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ಪೇಸ್ ಬುಕ್ ನಲ್ಲಿ ತಿಳಿಸಿರುವ ಯತ್ನಾಳ, ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು, ವಿಜಯಪುರ ನಗರ ಶಾಸಕರಾದ ಶ್ರೀ ಬಸನಗೌಡ ಪಾಟೀಲ ಯತ್ನಾಳರವರಿಗೆ ಇಂದು ಮದ್ಯಾಹ್ನ ದೂರವಾಣಿ ಕರೆ ಮಾಡಿ, ಗಜಾನನ ಉತ್ಸವ ಸಲುವಾಗಿ ಯತ್ನಾಳರವರೇ ನಿಮ್ಮ ಬೇಡಿಕೆಯ ಪ್ರಕಾರ ಉತ್ಸವಕ್ಕೆ ಹೇರಲಾದ ನಿರ್ಭಂಧನೆಗಳನ್ನು ಸಡಿಲಿಸಿ ನೇರವಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೇರವಾಗಿ ಅಧಿಕಾರ ನೀಡಲಾಗಿದ್ದು, ಇದೊಂದು ಭಾವನಾತ್ಮಕವಾದ ಆಚರಣೆಯಾಗಿರುವದರಿಂದ 5, ದಿವಸಕ್ಕೆ ಸೀಮಿತವಾಗದೇ 7 ದಿವಸ ಅಥವಾ 9 ದಿವಸದವರೆಗೂ ಆಚರಣೆ ಮಾಡಲು, ಮತ್ತು ಇನ್ನಿತರ ಕಠಿಣ ನಿರ್ಭಂಧನೆಗಳನ್ನು ಸಡಿಲಿಸಿ, ಸುಸುತ್ರವಾಗಿ, ಶಾಂತರೀತಿಯಿಂದ ಮತ್ತು ವಿಜ್ರಂಭಣೆಯಿಂದ ಆಚರಣೆ ಮಾಡಲು ಕ್ರಮಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿರುತ್ತೇನೆ. ಯಾವುದೇ ಕಾರಣಕ್ಕೂ ಉತ್ಸವಕ್ಕೆ ಅಡೆತಡೆಯಾಗದಂತೆ ಶೀಘ್ರ ಸೂಚನೆ ನೀಡಲಾಗುವುದು, ನಿಮ್ಮ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಶಾಸಕರಾದ ಯತ್ನಾಳರಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದರು.ಇದರಿಂದ ರಾಜ್ಯಾಂದ್ಯಂತ ನಿರಾತಂಕವಾಗಿ ಹಾಗು ವಿಜ್ರಂಭಣೆಯಿಂದ ಗಣೇಶನ ಉತ್ಸವ ಜರುಗಲಿದೆ. ಇದಕ್ಕಾಗಿ ಶಾಸಕ ಯತ್ನಾಳರವರು ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಸಹ ತಿಳಿಸಿದರು.
ಎಂದು ಯತ್ನಾಳ ಮಾಹಿತಿ ಹಂಚಿಕೊಂಡಿದ್ದಾರೆ.