ಪರಿಸರ ನಷ್ಟ ತುಂಬಲು ಪ್ರತಿ ವರ್ಷ ಪರಿಸರ ಆಯವ್ಯಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

ಬೆಂಗಳೂರು: ರಾಜ್ಯದಲ್ಲಿನ ಪರಿಸರ ಹಾನಿಯನ್ನು ತುಂಬಲು ಪರಿಸರ ಆಯವ್ಯಯವನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.. ಬೆಂಗಳೂರಿನಲ್ಲಿ ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ಹುತಾತ್ಮರಿಗೆ ನಮನ ಸಲ್ಲಿಸಿ ಅವದು ಮಾತನಾಡುತ್ತಿದ್ದರು. ಪ್ರತಿ ವರ್ಷ ರಾಜ್ಯದಲ್ಲಿ ನಾಶವಾಗಿರುವ ಒಟ್ಟು ಹಸಿರು ಪ್ರದೇಶ ಎಷ್ಟು ಎಂಬುದನ್ನು ಅಂದಾಜಿಸುವ ವಿಧಾನ ಪ್ರಾರಂಭಿಸಬೇಕು. ಆಗ ಹಸಿರಿನ ಕೊರತೆ ಎಷ್ಟು ಎಂಬುದು ಸಹ ಗೊತ್ತಾಗುತ್ತದೆ. ‌ಪರಿಸರ ಆಯವ್ಯಯವನ್ನು ಪ್ರಾರಂಭಿಸಿದಾಗ ಮಾತ್ರ ಈ ನಷ್ಟವನ್ನು ತುಂಬಿಸಿಕೊಳ್ಳಬಹುದು ಎಂದು ಅವರು ಹೇಳಿದರು.   ಅರಣ್ಯ ನಮಗಿಂತ […]

ಗಣೇಶೋತ್ಸವಕ್ಕೆ ಸರಕಾರದ ಅನುಮತಿ ವಿಷಯದಲ್ಲಿ ಕ್ರೆಡಿಟ್ ಬೇಡ- ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಗಣೇಶೋತ್ಸವಕ್ಕೆ ಅನುಮತಿ ಮತ್ತು ಈ ಸಂಬಂಧ ಶಾಸಕ‌ ಯತ್ನಾಳ ನೀಡಿರುವ ಹೇಳಿಕೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಟಾಂಗ್ ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶೊತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡುವಂತೆ ವಿಜಯಪುರ ಗಣೇಶ ಮಹಾಮಂಡಳ ಜಿಲ್ಲಾಧಿಕಾರಿ ಮತ್ತು ಮುಖ್ಯಮಂತ್ರಿಗಳಿಗೆ ಮೊದಲು ಮನವಿ ಮಾಡಿದೆ. ತಮ್ಮ ಪರಿಶ್ರಮಕ್ಕೆ ಪ್ರತಿಫಲದಿಂದಾಗಿ ಸರಕಾರದಿಂದ ಮಾರ್ಗಸೂಚಿ ಸಡಿಲಿಕೆ ಮಾಡಿದೆ. ಆದರೆ, ಈ ವಿಷಯದಲ್ಲಿ ಕೆಲವರು ರಾಜಕೀಯ ದುರುದ್ದೇಶದಿಂದ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ‌ […]

ವಿಜಯಪುರದಲ್ಲಿ ಭೂಕಂಪ ದಾಖಲಾಗಿಲ್ಲ ಎಂದ ಜಿಲ್ಲಾಡಳಿತ- ಆಗಿದ್ದಾದರೂ ಏನು?

ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಬೆಳಗಿನ ಜಾವ ಜನರಿಗೆ ಭೂಕಂಪದ ಅನುಭವವಾಗಿತ್ತು. ಕಳೆದ ವಾರ ಮದ್ಯರಾತ್ರಿ ವೇಳೆಗೆ ಉಂಟಾಗಿದ್ದ ಭೂಕಂಪದಿಂದ ಗಾಬರಿಯಾಗಿದ್ದ ಗುಮ್ಮಟ ನಗರಿಯ ಜನತೆ ಈಗ ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವದಿಂದ ಬೆಚ್ಚಿ ಬಿದ್ದಿದ್ದರು. ಬೆಳಿಗ್ಗೆ 8.18 ಮತ್ತು 8.20ರ ಅವಧಿಯಲ್ಲಿ ಎರಡು ಬಾರಿ ಒಂದೆರಡು ಸೆಕೆಂಡ್ ಕಾಲ ಭೂಮಿ ನಡುಗಿದ ಅನುಭವವಾಗಿತ್ತು. ಭೂಕಂಪ‌ ದಾಖಲಾಗಿಲ್ಲ ಎಂದ ಜಿಲ್ಲಾಡಳಿತ ಬೆಳಿಗ್ಗೆ ಭೂಕಂಪ ಉಂಟಾಗಿದೆ ಎಂದು ಮನೆ ಮತ್ತು ಇತರ ಕಟ್ಟಡಗಳ ಮೊದಲ ಮತ್ತು ಎರಡನೆ […]

ಗುಮ್ಮಟ ನಗರಿಯಲ್ಲಿ ಮತ್ತೆ ಕಂಪಿಸಿದ ಭೂಮಿ- ಮೊನ್ನೆ ರಾತ್ರಿ ವೇಳೆ, ಈಗ ಬೆಳಿಗ್ಗೆ ಲಘು ಭೂಕಂಪದ ಅನುಭವ

ವಿಜಯಪುರ: ಕಳೆದ ಕೆಲವು ದಿನಗಳ ಹಿಂದಷ್ಟೇ ಮದ್ಯರಾತ್ರಿ ವೇಳೆಗೆ ಭೂಕಂಪದಿಂದ ಗಾಬರಿಯಾಗಿದ್ದ ಗುಮ್ಮಟ ನಗರಿಯ ಜನತೆ ಈಗ ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವದಿಂದ ಬೆಚ್ಚಿ ಬಿದ್ದಿದ್ದಾರೆ. ಬೆಳಿಗ್ಗೆ 8.18 ಮತ್ತು 8.20ರ ಅವಧಿಯಲ್ಲಿ ಎರಡು ಬಾರಿ ಒಂದೆರಡು ಸೆಕೆಂಡ್ ಕಾಲ ಭೂಮಿ ನಡುಗಿದ ಅನುಭವವಾಗಿದೆ. ಇದು ಮನೆ ಮತ್ತು ಇತರ ಕಟ್ಟಡಗಳ ಮೊದಲ ಮತ್ತು ಎರಡನೆ ಹಾಗೂ ಅದಕ್ಕೂ ಹೆಚ್ಚಿನ ಮಹಡಿಗಳಲ್ಲಿ ವಾಸಿಸುವವರ ಗಮನಕ್ಕೆ ಬಂದಿದೆ. ಏಕಾಏಕಿ ಉಂಟಾದ ಈ ಅನುಭವದಿಂದ ಜನರು ಗಾಬರಿಯಾಗಿದ್ದಾರೆ. ಅಲ್ಲದೇ, […]

ಗ್ರಾಮಸ್ಥರಿಂದ ಒದೆ ತಿನ್ನುವ ಭಯದಲ್ಲಿ ಕಳ್ಳರು ಸಂಚರಿಸುತ್ತಿದ್ದ ಕಾರು ಪಲ್ಟಿ- ಅಲ್ಲಿಯೇ ವಾಹನ ಬಿಟ್ಟು ಪರಾರಿಯಾದ ಖದೀಮರು

ವಿಜಯಪುರ: ಇದು ಗ್ರಾಮಸ್ಥರು ಅಕ್ಷರಶಃ ಕಳ್ಳರು ಜೀವದ ಹಂಗು ತೊರೆದೆ ಪಲಾಯನ ಮಾಡಲು ಕಾರಣವಾದ ಸ್ಟೋರಿ. ಗ್ರಾಮಸ್ಥರಿಂದ ಒದೆ ತಿನ್ನುವ ಭಯದಲ್ಲಿ ಕಳ್ಳರು ಸಂಚರಿಸುತ್ತಿದ್ದ ಕಾರು ಪಲ್ಟಿಯಾದ ತಕ್ಷಣ ಅದರಲ್ಲಿದ್ದ ವಸ್ತುಗಳು ಮತ್ತು ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮುಕರ್ತಿಹಾಳ ಬಳಿ ಕಳ್ಳರು ಕುರಿಗಳನ್ನು ಕದಿಯಲು ಬಂದಿದ್ದರು. ಕಾರಿನಲ್ಲಿ ಬಂದಿದ್ದ ಈ ಕಳ್ಳರನ್ನು ನೋಡಿದ ಕುರಿಗಳನ್ನು ಕದಿಯಲು ಮುಂದಾಗಿದ್ದಾರೆ. ಆಗ ಕುರಿಗಾಹಿ ಚಟ್ಟನೇ ಚೀರಿದ್ದಾನೆ. […]

ಜಿಲ್ಲೆಗಳಲ್ಲಿ ಅಮೃತ ಮಹೋತ್ಸವ ಯೋಜನೆಗಳ ಅನುಷ್ಠಾನಕ್ಕೆ ಸಚಿವರ ನೇಮಕ

ಬೆಂಗಳೂರು: ಭಾರತದ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಘೋಷಿಸಲಾಗಿರುವ ಯೋಜನೆಗಳ ಅನುಷ್ಠಾನಕ್ಕೆ ಹಾಗೂ ಫಲಾನುಭವಿಗಳ ಆಯ್ಕೆ ಮಾಡಲು ನಡೆಯುವ ಸಭೆಯ ಅಧ್ಯಕ್ಷತೆ ವಹಿಸಲು ಜಿಲ್ಲಾವಾರು ಸಚಿವನ್ನು ನೇಮಕ ಮಾಜಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಗಳಲ್ಲಿ ಕೋವಿಡ್ ಮತ್ತು ನೆರೆ ಪರಿಹಾರ ಉಸ್ತುವಾರಿಗಾಗಿ ನೇಮಕ ಮಾಡಿರುವ ಸಚಿವರಿಗೆ ಅಮೃತ ಮಹೋತ್ಸವ ಯೋಜನೆಗಳ ಅನುಷ್ಠಾನದ ಉಸ್ತುವಾರಿ ವಹಿಸಲಾಗಿದೆ. ಸಚಿವರು ಮತ್ತು ಅಮೃತ ಮಹೋತ್ಸವ ಯೋಜನೆಗಳ ಅನುಷ್ಠಾನಕ್ಕೆ ವಹಿಸಲಾಗಿರುವ ಜಿಲ್ಲೆಗಳ ಮಾಹಿತಿ ಇಲ್ಲಿದೆ. 1. ಗೋವಿಂದ ಎಂ.ಕಾರಜೋಳ – ಬೆಳಗಾವಿ 2. […]