ವಿಜಯಪುರದಲ್ಲಿ ಭೂಕಂಪ ದಾಖಲಾಗಿಲ್ಲ ಎಂದ ಜಿಲ್ಲಾಡಳಿತ- ಆಗಿದ್ದಾದರೂ ಏನು?

ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಬೆಳಗಿನ ಜಾವ ಜನರಿಗೆ ಭೂಕಂಪದ ಅನುಭವವಾಗಿತ್ತು. ಕಳೆದ ವಾರ ಮದ್ಯರಾತ್ರಿ ವೇಳೆಗೆ ಉಂಟಾಗಿದ್ದ ಭೂಕಂಪದಿಂದ ಗಾಬರಿಯಾಗಿದ್ದ ಗುಮ್ಮಟ ನಗರಿಯ ಜನತೆ ಈಗ ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವದಿಂದ ಬೆಚ್ಚಿ ಬಿದ್ದಿದ್ದರು. ಬೆಳಿಗ್ಗೆ 8.18 ಮತ್ತು 8.20ರ ಅವಧಿಯಲ್ಲಿ ಎರಡು ಬಾರಿ ಒಂದೆರಡು ಸೆಕೆಂಡ್ ಕಾಲ ಭೂಮಿ ನಡುಗಿದ ಅನುಭವವಾಗಿತ್ತು.

ಭೂಕಂಪ‌ ದಾಖಲಾಗಿಲ್ಲ ಎಂದ ಜಿಲ್ಲಾಡಳಿತ

ಬೆಳಿಗ್ಗೆ ಭೂಕಂಪ ಉಂಟಾಗಿದೆ ಎಂದು ಮನೆ ಮತ್ತು ಇತರ ಕಟ್ಟಡಗಳ ಮೊದಲ ಮತ್ತು ಎರಡನೆ ಹಾಗೂ ಅದಕ್ಕೂ ಹೆಚ್ಚಿನ ಮಹಡಿಗಳಲ್ಲಿ ವಾಸಿಸುವ ಜನರು ಅನುಭವ ಹಂಚಿಕೊಂಡಿದ್ದರು. ಅಲ್ಲದೇ, ಏಕಾಏಕಿ ಉಂಟಾದ ಈ ಅನುಭವದಿಂದ ಜನರು ಗಾಬರಿಯಾಗಿ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕರೆ ಮಾಡಿ ತಾವು ಅನುಭವಿಸಿದ ಭೂಕಂಪದ ಬಗ್ಗೆ ಹೇಳಿ ನಿಮಗೂ ಅನುಭವವಾಗಿದೆಯಾ ಎಂದು ಕೇಳಿದ್ದರು.

ಇದನ್ನೂ ಓದಿ-

https://basavanadu.com/2021/09/11/vijayapura-mild-earthquake-felt-in-city-people-in-phobia/

ಆದರೆ, ಈ ಕುರಿತು ಮಾಹಿತಿ ನೀಡಿರುವ ವಿಜಯಪುರ ಜಿಲ್ಲಾಡಳಿತ, ಜನರಿಗಾದ ಭೂಕಂಪದ ಅನುಭವದ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ(KNMDC) ಗಮನಕ್ಕೆ ತರಲಾಗಿತ್ತು. ಆದರೆ, ಭೂಮಿ ಕಂಪಿಸಿದ ಬಗ್ಗೆ ರಿಜ್ಚರ್ ಮಾಪಕದಲ್ಲಿ ಯಾವುದೇ ಕಂಪನ ದಾಖಲಾಗಿಲ್ಲ ಎಂದು ಮಾಹಿತಿ ನೀಡಿದೆ. ಹೀಗಾಗಿ ವಿಜಯಪುರ ಜಿಲ್ಲೆಯಲ್ಲಿ ಯಾವುದೇ ಭೂಕಂಪವಾಗಿಲ್ಲ ಎಂದು ವಿಜಯಪುರ ಜಿಲ್ಲಾಡಳಿತಿ ತಿಳಿಸಿದೆ.

ಇದು ಗುಮ್ಮಟ ನಗರಿಯ ಜನರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ್ದು, ಭೂಮಿ ಕಂಪಿಸಿದ ಅನುಭವ ಭೂಕಂಪ ಅಲ್ಲ ಎನ್ನುವುದಾದರೆ ಧರೆಯಲ್ಲಿ ಉಂಟಾದ ಅನುಭವಕ್ಕೆ ಮತ್ತೇನು ಕಾರಣ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಸುರಿದ ಮಳೆಯಿಂದಾಗಿ ಭೂಪದರದಲ್ಲಿ ಜಲಸಂಚರಿಸಿ ಈ ರೀತಿ ಆಗಿದಯಾ ಅಥವಾ ಇನ್ನೇನು ಕಾರಣ ಎಂಬುದನ್ನು ವಿಜ್ಞಾನಿಗಳು ಮತ್ತು ವಿಜಯಪುರ ಜಿಲ್ಲಾಡಳಿತ ಮಾಹಿತಿ ನೀಡಬೇಕಿದೆ.

ಇದು ಲಘು ಭೂಕಂಪವಾ? ಈ ಭೂಕಂಪದ ತೀವ್ರತೆ ಎಷ್ಟಿದೆ? ಭೂಕಂಪದ ಕೇಂದ್ರ ಸ್ಥಾನ ಯಾವುದು? ಅಥವಾ ಈ ಕಂಪನದ ಅನುಭವಕ್ಕೆ ಬೇರೆ ಏನಾದರೂ ಕಾರಣವಿದೆಯಾ ಎಂಬುದರ ಕುರಿತು ವಿಜಯಪುರ ಜಿಲ್ಲಾಡಳಿತ ಇನ್ನಷ್ಟೇ ಖಚಿತ ಪಡಿಸಬೇಕಿದೆ.

Leave a Reply

ಹೊಸ ಪೋಸ್ಟ್‌