ವಿಜಯಪುರ: ಕಳೆದ ಕೆಲವು ದಿನಗಳ ಹಿಂದಷ್ಟೇ ಮದ್ಯರಾತ್ರಿ ವೇಳೆಗೆ ಭೂಕಂಪದಿಂದ ಗಾಬರಿಯಾಗಿದ್ದ ಗುಮ್ಮಟ ನಗರಿಯ ಜನತೆ ಈಗ ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವದಿಂದ ಬೆಚ್ಚಿ ಬಿದ್ದಿದ್ದಾರೆ.
ಬೆಳಿಗ್ಗೆ 8.18 ಮತ್ತು 8.20ರ ಅವಧಿಯಲ್ಲಿ ಎರಡು ಬಾರಿ ಒಂದೆರಡು ಸೆಕೆಂಡ್ ಕಾಲ ಭೂಮಿ ನಡುಗಿದ ಅನುಭವವಾಗಿದೆ. ಇದು ಮನೆ ಮತ್ತು ಇತರ ಕಟ್ಟಡಗಳ ಮೊದಲ ಮತ್ತು ಎರಡನೆ ಹಾಗೂ ಅದಕ್ಕೂ ಹೆಚ್ಚಿನ ಮಹಡಿಗಳಲ್ಲಿ ವಾಸಿಸುವವರ ಗಮನಕ್ಕೆ ಬಂದಿದೆ. ಏಕಾಏಕಿ ಉಂಟಾದ ಈ ಅನುಭವದಿಂದ ಜನರು ಗಾಬರಿಯಾಗಿದ್ದಾರೆ.
ಅಲ್ಲದೇ, ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕರೆ ಮಾಡಿ ತಾವು ಅನುಭವಿಸಿದ ಭೂಕಂಪದ ಬಗ್ಗೆ ಹೇಳಿ ನಿಮಗೂ ಅನುಭವವಾಗಿದೆಯಾ ಎಂದು ಕೇಳಿದ್ದಾರೆ.
ಇದು ಲಘು ಭೂಕಂಪವಾ? ಈ ಭೂಕಂಪದ ತೀವ್ರತೆ ಎಷ್ಟಿದೆ? ಭೂಕಂಪದ ಕೇಂದ್ರ ಸ್ಥಾನ ಯಾವುದು? ಅಥವಾ ಈ ಕಂಪನದ ಅನುಭವಕ್ಕೆ ಬೇರೆ ಏನಾದರೂ ಕಾರಣವಿದೆಯಾ ಎಂಬುದರ ಕುರಿತು ವಿಜಯಪುರ ಜಿಲ್ಲಾಡಳಿತ ಇನ್ನಷ್ಟೇ ಖಚಿತ ಪಡಿಸಬೇಕಿದೆ.
2 Responses
𝚃𝚒𝚙𝚙𝚞 𝚜𝚞𝚕𝚝𝚊𝚗 𝚔𝚊𝚕𝚞𝚗𝚒 𝚖𝚎 𝚑𝚞𝚠𝚊 𝚑𝚊𝚒
Ok.