ರಾಜ್ಯಾದ್ಯಂತ ಶೇ. 71 ರಷ್ಟು ಜನರಿಗೆ ಕೊರೊನಾ ಲಸಿಕೆ ಮೊದಲ ಡೋಸ್ ಪೂರ್ಣ- ಸೆ. 17 ರಂದು ಬೃಹತ್ ಲಸಿಕೆ ಅಭಿಯಾನ- ಸಿಎಂ

ಬೆಂಗಳೂರು: ಸೆ. 17 ರಂದು ಶುಕ್ರವಾರ ರಾಜ್ಯಾದ್ಯಂತ ಬೃಹತ್ ಕೋವಿಡ್ ಲಸಿಕೆ ಅಭಿಯಾನ ಆಯೋಜಿಸಿದ್ದು, ಈ ಕಾರ್ಯಕ್ರಮದಡಿ 30 ಲಕ್ಷ ಜನರಿಗೆ ಕೊರೊನಾ ಲಸಿಕೆ ಹಾಕಲು ನಿರ್ಧರಿಸಲಾಗಿದೆ.  ಆ ಹಿನ್ನಲೆಯಲ್ಲಿ ಅದಕ್ಕೆ ಬೇಕಾದ ಸೂಕ್ತ ತಯಾರಿ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಬೃಹತ್ ಲಸಿಕೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಅವರು ಮಾತನಾಡಿದರು.   ರಾಜ್ಯದಲ್ಲಿ ಲಸಿಕೆ ಕಾರ್ಯಕ್ರಮ ಚುರುಕಾಗಿ ಸಾಗಿದ್ದು, ಉತ್ತರ ಪ್ರದೇಶದ ನಂತರ ಅತಿ […]

ಗಣೇಶ ಮೂರ್ತಿ ವಿಸರ್ಜನೆ ಕಾಲಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳನ್ನು ನೇಮಕ ಮಾಡಿದ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಸಪ್ಟೆಂಬರ್ 14, 16, 18 ಮತ್ತು 20 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಆದೇಶ ಹೊರಡಿಸಿದ್ದಾರೆ. ಗಣೇಶ ಮೂರ್ತಿಗಳ ವಿಸರ್ಜನೆ ದಿನಗಳಂದು ಈ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚನೆ ನೀಡಿದ್ದಾರೆ. ನಗರ, ಪಟ್ಟಣಗಳ ಹೆಸರು ಮತ್ತು ನೇಮಿಸಲಾದ ಅಧಿಕಾರಿಗಳ ಮಾಹಿತಿ ವಿಜಯಪುರ ನಗರ- ವಿಜಯಪುರ […]

ಪ್ರಸಕ್ತ ವರ್ಷದಿಂದಲೇ ಹೊಸ ಕೋರ್ಸುಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ- ಐಟಿಐ ಗೆ ಆರು ಹೊಸ ಸಂಯೋಜನೆ ಸೇರ್ಪಡೆ- ರಾಜ್ಯ ವೃತ್ತಿ ಶಿಕ್ಷಣ ಪರಿಷತ್ ಅನುಮೋದನೆ

ಬೆಂಗಳೂರು: ಟಾಟಾ ಕಂಪನಿಯ ಸಹಯೋಗದಲ್ಲಿ ರಾಜ್ಯದ 150 ಕೈಗಾರಿಕೆ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸುವ ಕಾರ್ಯಕ್ರಮದಡಿ ಈಗಿನ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಆರು ಹೊಸ ಕೋರ್ಸ್ ಗಳಿಗೆ ರಾಜ್ಯ ವೃತ್ತಿ ಶಿಕ್ಷಣ ಪರಿಷತ್ (ಎಸ್ ವಿ ಸಿ ಟಿ) ಅನುಮೋದನೆ ನೀಡಿದೆ. ಉನ್ನತ ಶಿಕ್ಷಣ ಸಚಿವ ಹಾಗೂ ಕೌಶಾಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯಗಳ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಣಯ ಎಲ್ಲಾ 150 ಐಟಿಐ ಗಳಿಗೆ ಅನ್ವಯವಾಗುತ್ತದೆ.  […]

ಡಿ. ಆರ್. ಮಮದಾಪುರ ಪರಿವಾರದವರಿಂದ ಗುಮ್ಮಟ ನಗರಿಯ ಪೌರ ಕಾರ್ಮಿಕರಿಗೆ ಸನ್ಮಾನ, ಆಹಾರ ಧಾನ್ಯಗಳ ಕಿಟ್ ವಿತರಣೆ

ವಿಜಯಪುರ: ವಿಜಯಪುರ ನಗರದ ಪೌರ ಕಾರ್ಮಿಕರಿಗೆ ಸರಕಾರದಿಂದ ಮತ್ತು ಮಹಾನಗರ ಪಾಲಿಕೆಯಿಂದ  ಸಿಗಬಹುದಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ  ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ‌. ವಿಜಯಪುರ ನಗರದ ಎಲ್ ಐ ಸಿ(ಭಾರತೀಯ ಜೀವ ವಿಮೆ ನಿಗಮ) ಆವರಣದಲ್ಲಿ ಡಿ. ಆರ್. ಮಮದಾಪುರ ಪರಿವಾರದ ವತಿಯಿಂದ  ವಿಜಯಪುರ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಜನರು ಆರೋಗ್ಯಕರವಾಗಿರಲು  ಪೌರ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಇಂಥ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಒಡಿತರ ಕೀಟ್ ಗಳನ್ನು […]

ಹಿಂದೂಗಳ ದೇವಸ್ಥಾನ ತೆರವು ತಡೆಯಲು ಹಿಂದು ಪ್ರಧಾನಿ, ಹಿಂದು ಸಿಎಂ ಕ್ರಮ ಕೈಗೊಳ್ಳಲಿ- ಮನಗೂಳಿ ಸ್ವಾಮೀಜಿ

ವಿಜಯಪುರ: ಮೈಸೂರು ಭಾಗದಲ್ಲಿ ಹಿಂದೂಗಳ ದೇವಸ್ಥಾನಗಳನ್ನು ತೆರವುಗೊಳಿಸಲು ಮುಂದಾಗಿರುವ ಅಲ್ಲಿನ ಜಿಲ್ಲಾಡಳಿತದ ಕ್ರಮಕ್ಕೆ ಬಸವ ನಾಡಿನ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದ ಶ್ರೀ ಅಭೊನವ ಸಂಗನ ಬಸವ ಶಿವಾಚಾರ್ಯರು ಮೈಸೂರು ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೈಸೂರು ಭಾಗದಲ್ಲಿ ಹಿಂದೂಗಳ ದೇವಸ್ಥಾನ ತೆರವು ಮಾಡುತ್ತಿರುವುದು ಖಂಡನೀಯವಾಗಿದೆ. ಇದು ಇದು ಹಿಂದೂಗಳ ದೇಶ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದುಗಳಾಗಿದ್ದಾರೆ. […]

ಇದು ಹೊಸ ಸ್ಪರ್ಧೆ- ಜಗ್ಗಾಟವಾದರೂ ಹಗ್ಗ ಜಗ್ಗಾಟವಲ್ಲ- ಮತ್ತೇನು?

ವಿಜಯಪುರ: ಉತ್ತರ ಕರ್ನಾಟಕದಲ್ಲಿ ಜಾತ್ರೆಗಳು ಬಂತೆಂದರೆ ಸಾಕು ತರಹೇವಾರಿ ಗ್ರಾಮೀಣ ಸಾಹಸ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತವೆ. ಅದರಲ್ಲೂ ಶ್ರಾವಣ ಮಾಸದ ಸಂದರ್ಭದಲ್ಲಿ ಈ ಜಾತ್ರೆಗಳು ಯುವಜನತೆಯಲ್ಲಿರುವ ಚಾಕಚಕ್ಯತೆಗೆ ಸಾಕ್ಷಿಯಾಗುತ್ತೆ. ಇಂಥದ್ದೆ ಒಂದು ಜಾತ್ರೆ ಮತ್ತು ಅದರ ಅಂಗವಾಗಿ ನಡೆದ ಈ ಸ್ಪರ್ಧೆಯೊಂದು ನೆರೆದ ಜನ ಸೋಜಿಗದಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಅಂದಹಾಗೆ, ಈ ಜಾತ್ರೆ ನಡೆದಿದ್ದು ಬಸವ ನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದಲ್ಲಿ. ಸಾಮಾನ್ಯವಾಗಿ ಇಂದು ವಿಷಯ ಅಥವಾ ಕೆಲಸದಲ್ಲಿ ಚರ್ಚೆ, ವಿಮರ್ಶೆ […]