ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಸಪ್ಟೆಂಬರ್ 14, 16, 18 ಮತ್ತು 20 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಆದೇಶ ಹೊರಡಿಸಿದ್ದಾರೆ.
ಗಣೇಶ ಮೂರ್ತಿಗಳ ವಿಸರ್ಜನೆ ದಿನಗಳಂದು ಈ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚನೆ ನೀಡಿದ್ದಾರೆ.
ನಗರ, ಪಟ್ಟಣಗಳ ಹೆಸರು ಮತ್ತು ನೇಮಿಸಲಾದ ಅಧಿಕಾರಿಗಳ ಮಾಹಿತಿ
ವಿಜಯಪುರ ನಗರ- ವಿಜಯಪುರ ಉಪವಿಭಾಗಾಧಿಕಾರಿ, ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡುಗಳ ಉಪವಿಭ ಉಪವಿಭಾಗಾಧಿಕಾರಿಗಳು
ವಿಜಯಪುರ ಗ್ರಾಮೀಣ ಭಾಗ- ವಿಜಯಪುರ ತಹಸೀಲ್ದಾರರು
ಇಂಡಿ ನಗರ- ಇಂಡಿ ಉಪವಿಭಾಗಾಧಿಕಾರಿಗಳು
ಇಂಡಿ ಗ್ರಾಮೀಣ- ಇಂಡಿ ತಹಸೀಲ್ದಾರರು
ಬಬಲೇಶ್ವರ- ಬಬಲೇಶ್ವರ ತಹಸೀಲ್ದಾರರರು
ತಿಕೋಟಾ- ತಿಕೋಟಾ ತಹಸೀಲ್ದಾರರು
ಸಿಂದಗಿ- ಸಿಂದಗಿ ತಹಸೀಲ್ದಾರರು
ದೇವರ ಹಿಪ್ಪರಗಿ- ದೇವರ ಹಿಪ್ಪರಗಿ ತಹಸೀಲ್ದಾರರು
ನಿಡಗುಂದಿ- ನಿಡಗುಂದಿ ತಹಸೀಲ್ದಾರರು
ಕೊಲ್ಲಾರ- ಕೊಲ್ಹಾರ ತಹಸೀಲ್ದಾರರು
ಚಡಚಣ- ಚಡಚಣ ತಹಸೀಲ್ದಾರರು
ಬಸವನ ಬಾಗೇವಾಡಿ- ಬಸವನ ಬಾಗೇವಾಡಿ ತಹಸೀಲ್ದಾರರು
ಮುದ್ದೇಬಿಹಾಳ- ಮುದ್ದೇಬಿಹಾಳ ತಹಸೀಲ್ದಾರರು
ತಾಳಿಕೋಟೆ- ತಾಳಿಕೋಟೆ ತಹಸೀಲ್ದಾರರು
ಈ ಅಧಿಕಾರಿಗಳು ಗಣೇಶ ವಿಸರ್ಜನೆಯ ದಿನ ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸರು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಆದೇಶದಲ್ಲಿ ಸೂಚನೆ ನೀಡಿದ್ದಾರೆ.