ಹಿಂದೂಗಳ ದೇವಸ್ಥಾನ ತೆರವು ತಡೆಯಲು ಹಿಂದು ಪ್ರಧಾನಿ, ಹಿಂದು ಸಿಎಂ ಕ್ರಮ ಕೈಗೊಳ್ಳಲಿ- ಮನಗೂಳಿ ಸ್ವಾಮೀಜಿ

ವಿಜಯಪುರ: ಮೈಸೂರು ಭಾಗದಲ್ಲಿ ಹಿಂದೂಗಳ ದೇವಸ್ಥಾನಗಳನ್ನು ತೆರವುಗೊಳಿಸಲು ಮುಂದಾಗಿರುವ ಅಲ್ಲಿನ ಜಿಲ್ಲಾಡಳಿತದ ಕ್ರಮಕ್ಕೆ ಬಸವ ನಾಡಿನ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದ ಶ್ರೀ ಅಭೊನವ ಸಂಗನ ಬಸವ ಶಿವಾಚಾರ್ಯರು ಮೈಸೂರು ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದ್ದಾರೆ.

ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೈಸೂರು ಭಾಗದಲ್ಲಿ ಹಿಂದೂಗಳ ದೇವಸ್ಥಾನ ತೆರವು ಮಾಡುತ್ತಿರುವುದು ಖಂಡನೀಯವಾಗಿದೆ. ಇದು ಇದು ಹಿಂದೂಗಳ ದೇಶ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದುಗಳಾಗಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ವಸವರಾಜ ಬೊಮ್ಮಾಯಿ ಕುಡ ಕೂಡ ಹಿಂದುಗಳಾಗಿದ್ದಾರೆ. ಅದರಲ್ಲೂ ಬಿಜೆಪಿಯವರಿಗೆ ಹಿಂದುಗಳ ಮೇಲೆ ವಿಶೇಷ ಅಭಿಮಾನ ಇದೆ. ಇಂಥ ವ್ಯಕ್ತಿಗಳು ಹಿಂದೂಗಳ ದೇವಸ್ಥಾನ ನೆಲಸಮ ಮಾಡಲು ಅಬಕಾಶ ನೀಡುತ್ತಿರುವುದು ಸರಿಯಲ್ಲ. ಏಕೆಂದರೆ ಒಂದು ವರ್ಷ, ಎರಡು ವರ್ಷ, 10 ವರ್ಷದ ದೇವಸ್ಥಾನ ಅದಲ್ಲ. 600 ರಿಂದ 700 ವರ್ಷಗಳ ಇತಿಹಾಸವಿರುವ ದೇವಸ್ಥಾನವನ್ನು ಇವರು ನೆಲಸಮ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಒಂದು ದೇವಸ್ಥಾನ ನಿರ್ಮಿಸಲು ಎಷ್ಟು ಕಷ್ಟವಾಗುತ್ತದೆ ಎಂಬುದು ದೇವಸ್ಥಾನ ಕೆಡವಲು ಮುಂದಾಗಿರುವ ವ್ಯಕ್ತಿಗಳಿಗೆ ಗೊತ್ತಾಗುವುದಿಲ್ಲ. ಮೈಸೂರು ಭಾಗದಲ್ಲಿ ಕೇವಲ 15 ದಿನಗಳ ಹಿಂದೆ ಅಲ್ಲಿನ ಜನ ವಿಜೃಂಭಣೆಯಿಂದ ತನು, ಮನ, ಧನದಿಂದ ಜಾತ್ರೆ ನಡೆಸಿದ್ದಾರೆ. ಇದು ದೈವ ಭಕ್ತಿಗೆ ಮತ್ತು ದೇವರಲ್ಲಿರು ಶಕ್ತಿಗೆ ಸಾಕ್ಷಿಯಾಗಿದೆ. ಭಕ್ತರು ತಮ್ಮ ಭಾವನೆಗಳನ್ನು ಹೇಳಿಕೊಳ್ಳುವ ಮತ್ತು ತಮ್ಮ ಮತ್ತು ಕಷ್ಟಗಳನ್ನು ಪರಿಹರಿಸಲು ಮೊರೆಯಿಡುವ ದೇವಸ್ಥಾನ ತೆರವು ಮಾಡುವುದು ಸರಿಯಲ್ಲ. ಐತಿಹಾಸಿಕ ದೇವಸ್ಥಾನಗಳ ತೆರವನ್ನು ಮಾಡಬಾರದು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.

ಬಿಜೆಪಿ ಪಕ್ಷದವರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಕೂಡಲೇ ಕೈ ಬಿಡಬೇಕು. ದೇವಸ್ಥಾನಗಳ ಒರ ಕಾಳಜಿ ವಹಿಸಿ ಇವುಗಳ ಬಗ್ಗೆ ಬಗ್ಗೆ ಗಮನ ಹರಿಸಬೇಕು ಎಂದು ಶ್ರೀಗಳು ಒತ್ತಾಯಿಸಿದ್ದಾರೆ.

ಮಠಾಧೀಶರು ತಮಗಾಗಿ ಏನನ್ನೂ ಬಯಸುವಯದಿಲ್ಲ. ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುವುದಿಲ್ಲ. ಜನರಿಗಾಗಿ, ದೇಶಕ್ಕಾಗಿ ಮತ್ತು ರಾಜ್ಯಕ್ಕಾಗಿ ಅಳಿಲು ತಮ್ಮ ಸೇವೆ ಸೇವೆ ಮಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಈಗಲಾದರೂ ಎಚ್ಚೆತ್ತುಕೊಂಡು ಹಿಂದುಗಳ ಮೇಲೆ ವಿಶೇಷ ಅಭಿಮಾನ ಇಟ್ಟುಕೊಂಡು ಹಿಂದೂಗಳ ದೇವಸ್ಥಾನಗಳನ್ನು ಮುಟ್ಟಬೇಡಿ ಎಂಬ ಮಾತನ್ನು ವಿನಂತಿ ಪೂರಕಚಾಗಿ ಹೇಳಲು ಇಷ್ಟಪಡುತ್ತೇನೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಒಂದು ವೇಳೆ ದೇವಸ್ಥಾನಗಳು ರಸ್ತೆಯ ಮಧ್ಯೆ ಬಂದರೆ ಅಥವಾ ಅವುಗಳಿಂದ ತೊಂದರೆ ಆದರೆ ದೇವಸ್ಥಾನವನ್ನು ಮಧ್ಯದಲ್ಲಿ ಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ರಸ್ತೆಗಳನ್ನು ಮಾಡುವ ಕೆಲಸ ಮಾಡಿ ಎಂದು ಶ್ರೀ ಅಭಿನವ ಸಂಗನ ಬಸವ ಶಿವಾಚಾರ್ಯ ಸ್ವಾಮೀಜಿ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

Leave a Reply

ಹೊಸ ಪೋಸ್ಟ್‌