ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಗೌರವಧನ ಹೆಚ್ಚಳಕ್ಕೆ ಪರಿಶೀಲನೆ-ಎಂ ಎಲ್ ಸಿ ಸುನೀಲಗೌಡ ಪಾಟೀಲ ಪ್ರಶ್ನೆಗೆ ಸಚಿವ ಕೋಟ ಹೇಳಿಕೆ

ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರಿಗೆ ಸಧ್ಯಕ್ಕೆ ನೀಡಲಾಗುತ್ತಿರುವ ಗೌರವ ಧನವನ್ನು ಹೆಚ್ಚಿಸುವ ಕುರಿತು ಸರಕಾರ ಪರಿಶೀಲಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಅವರ ಪರವಾಗಿ ಸಮಾಜ ಕಲ್ಯಾಣ ಸಚಿವ ಮತ್ತು ವಿಧಾನ ಪರಿಷತ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಈ ಕುರಿತ ವಿಜಯಪುರ- ಬಾಗಲಕೋಟೆ ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ಸದನದಲ್ಲಿ ಪ್ರಸ್ತಾಪಿಸಿದರು. ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ನೀಡುತ್ತಿರುವ ಗೌರವಧನ ತುಂಬಾ ಕಡಿಮೆಯದೆ. ಅಲ್ಲದೇ, ಅವರ ಗೌರವಧನ ಪರಿಷ್ಕರಿಸಿ ಐದು ವರ್ಷಗಳು ಕಳೆದಿವೆ. ಆದ್ದರಿಂದ ಈಗ ನೀಡುತ್ತಿರುವ ಗೌರವಧನ ಬೆಲೆ ಏರಿಕೆಯಿಂದಾಗಿ ಯಾವುದಕ್ಕೂ ಸಾಕಾಗುತ್ತಿಲ್ಲ. ಆಗದ್ದರಿಂದ ಕೂಡಲೇ ಸರಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಿಗೆ ರೂ. 5000, ಉಪಾಧ್ಯಕ್ಷರಿಗೆ ರೂ. 4000 ಮತ್ತು ಸದಸ್ಯರಿಗೆ ರೂ.
3000 ಗೌರವ ಧನವನ್ನು ಹೆಚ್ಚಿಸಬೇಕು ಎಂದು ಹೇಳಿದರು.

ಈ ಕುರಿತು ವಿಧಾನ ಪರಿಷತ್‍ನಲ್ಲಿ ಚರ್ಚೆ ನಡೆದಾಗ ಉಳಿದ ಸದಸ್ಯರ ಕೂಡ ಸುನೀಲಗೌಡ ಪಾಟೀಲ ಅವರು ಕೇಳಿದ ಪ್ರಶ್ನೆಯನ್ನು ಪ್ರಶಂಸಿಸಿ, ಇಡೀ ರಾಜ್ಯದ ಗ್ರಾಮ ಪಂಚಾಯಿತಿ ಸದಸ್ಯರ ಪರವಾಗಿ ಯುವ ಸದಸ್ಯ ಸುನೀಲಗೌಡ ಪಾಟೀಲರು ಈ ಪ್ರಶ್ನೆ ಕೇಳಿದ್ದು, ನಾವೇಲ್ಲ ಇವರನ್ನು ಬೆಂಬಲಿಸುತ್ತೇವೆ. ಗ್ರಾ. ಪಂ. ಸದಸ್ಯರಿಗೆ ಗೌರವಧನ ಹೆಚ್ಚಿಸುವದು ಅತ್ಯವಶ್ಯಕವಾಗಿದೆ ಎಂದು ಪಕ್ಷಾತೀತವಾಗಿ ಹೇಳಿದರು.

ಈ ಸಂದರ್ಭದಲ್ಲಿ ಸರಕಾರದ ಪರವಾಗಿ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುತ್ತಿರುವ ಗೌರವ ಧನ ಅತ್ಯಂತ ಕಡಿಮೆಯಾಗಿರುವದನ್ನು ಒಪ್ಪಿಕೊಂಡರು. ಅಲ್ಲದೇ, ಗ್ರಾ. ಪಂ. ಅಧ್ಯಕ್ಷರಿಗೆ ರೂ. 5000, ಉಪಾಧ್ಯಕ್ಷರಿಗೆ ರೂ. 4000 ಮತ್ತು ಸದಸ್ಯರಿಗೆ 3000 ಗೌರವಧನ ಹೆಚ್ಚಿಸುವ ಕುರಿತು ಸರಕಾರ ಪರಿಶೀಲಿಸುತ್ತಿದೆ. ಗೌರವ ಧನವನ್ನು ಹೆಚ್ಚಿಸುವ ಕುರಿತು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

ಹೊಸ ಪೋಸ್ಟ್‌