ಕೋವಿಡ್ ಲಸಿಕಾ ಅಭಿಯಾನ- ಬಸವ ನಾಡಿನಲ್ಲಿ ಶೇ. 100ಕ್ಕಿಂತಲೂ ಹೆಚ್ಚು ಸಾಧನೆ

ವಿಜಯಪುರ; ರಾಜ್ಯಾದ್ಯಂತ ಶುಕ್ರವಾರ ನಡೆದ ಕೊರೊಬಾ ಲಸಿಕೆ ಮಹಾ ಅಭಿಯಾನದಲ್ಲಿ ಬಸವ ನಾಡಿನಲ್ಲಿ ಗುರಿ ಮೀರಿದ ಸಾಧನೆ ಮಾಡಲಾಗಿದೆ.

ಈ ಲಸಿಕಾ ಅಭಿಯಾನದಲ್ಲಿ ವಿಜಯಪುರ ಜಿಲ್ಲೆಗೆ ಒಂದು ಲಕ್ಷ ಲಸಿಕೆ ಹಾಕುವ ಗುರಿಯನ್ನು ಸರಕಾರ ನೀಡಿತ್ತು. ಆದರೆ, ವಿಜಯಪುರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಗುರಿ ಮೀರಿದ ಸಾಧನೆ ಮಾಡಿದೆ.

ಈ ಲಸಿಕೆ ಅಭಿಯಾನದಲ್ಲಿ 117794 ಲಸಿಕೆಗಳನ್ನು ಹಾಕುವ ಮೂಲಕ ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ತಿಳಿಸಿದ್ದಾರೆ.

ಲಕ್ಷ ಲಸಿಕಾ ಕಾರ್ಯಕ್ರಮದ ಅಂಗವಾಗಿ ಒಂದು ದಿನದಲ್ಲಿ ಒಂದು ಲಕ್ಷ ಲಸಿಕೆಗಳನ್ನು ಹಾಕುವ ಗುರಿ ಹೊಂದಲಾಗಿತ್ತು. ಈ ಪೈಕಿ 117794 ಕೋವಿಡ್ -19 ಲಸಿಕೆಗಳನ್ನು ಹಾಕುವ ಮೂಲಕ ಗುರಿ ಮೀರಿ ಸಾಧನೆ ಮಾಡಲಾಗಿದೆ. ಇದಕ್ಕಾಗಿ ಶ್ರಮಿಸಿದ ನಾನಾ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯದ ಬಗ್ಗೆ ಜಿಲ್ಲಾಧಿಕಾರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜ್ಯದ ಲಸಿಕಾಕರಣ ಪ್ರಮಾಣದಲ್ಲಿ ಜಿಲ್ಲೆಯ 11ನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿನ್ ಪೋರ್ಟಲ್ ನಲ್ಲಿ ಈ ವರೆಗೆ 111533 ಲಸಿಕೆ ನೀಡಿದ ಬಗ್ಗೆ ದಾಖಲು ಮಾಡಲಾಗಿದೆ. ಇನ್ನೂ 6261 ಡೇಟಾ ಎಂಟ್ರಿ ಕಾಯ್ದಿರಿಸಿದ್ದು ಅದೂ ಕೂಡ ಆದಷ್ಟು ಬೇಗ ಪೂರ್ಣಗೊಳ್ಳಲಿದೆ. ಭೌತಿಕವಾಗಿ ಶೇ. 117 ರಷ್ಟು ಪ್ರಗತಿ ಸಾಧಿಸಿದ್ದು, ಕೋವಿನ್ ಪೋರ್ಟಲ್ ನಲ್ಲಿ ಶೇ.111 ರಷ್ಟು ಪ್ರಗತಿ ಸಾಧಿಸಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುನಾರ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌