ಆಕಾಶವಾಣಿ ಕೇಂದ್ರದಲ್ಲಿ ಸಂಸ್ಥಾಪನೆ ದಿನ ಆಚರಣೆ

ವಿಜಯಪುರ: ವಿಜಯಪುರ ಆಕಾಶವಾಣಿ ಕೇಂದ್ರದಲ್ಲಿ 24ನೇ ಸಂಸ್ಥಾಪನೆ ದಿನವನ್ನು ಆಚರಿಸಲಾಯಿತು.

ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಆಕಾಶವಾಣಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಟಾಟಿಸಿದರು.

ನಂತರ ಮಾತನಾಡಿದ ಅವರು, ವಿಜಯಪುರ ಆಕಾಶವಾಣಿ ಕೇಂದ್ರವು1997ರ ಸೆ. 18 ರಂದು ಅಂದರೆ ಇದೇ ದಿನ ಅಸ್ತಿತ್ವಕ್ಕೆ ಬಂದಿದೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೇರಿದಂತೆ ನೆರೆಯ ಜಿಲ್ಲೆಯ ಜನರಿಗೂ ಸಹ ಆಕಾಶವಾಣಿ ನಿಲಯವು ಸೇವೆಯನ್ನು ಒದಗಿಸುತ್ತಿದೆ. ಸಮಾಜದ ಅಭಿವೃದ್ಧಿಗಾಗಿಯೂ ಶ್ರಮಿಸುತ್ತಿದೆ. ಸ್ಥಳೀಯ ಆಕಾಶವಾಣಿ ಕೇಂದ್ರವಾಗಿ ಕಾಲಕಾಲಕ್ಕೆ ಆಗುತ್ತಿರುವ ತಂತ್ರಜ್ಞಾನದ ಬದಲಾವಣೆಗಳನ್ನು ಸ್ವೀಕರಿಸುತ್ತ,
ಇಂದಿನ ಡಿಜಿಟಲ್ ಯುಗದಲ್ಲಿ ‘ ಗ್ಲೋಬಲ್ ಆಗಿ ಪರಿವರ್ತನೆ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಎಫ್. ಎಂ. ರೇಡಿಯೋ ಸ್ಟೇಶನಗಳಲ್ಲಿ ಕೇಳುತ್ತಿದ್ದ ಕಾರ್ಯಕ್ರಮಗಳು ಈಗ ನ್ಯೂಸ್ ಆನ್ ಏರ್‌ ಎಂಬ ಮೊಬೈಲ್ ಆ್ಯಪ್ ಮೂಲಕ ವಿಶ್ವದ ಯಾವುದೇ ಭಾಗದಲ್ಲೂ ಕೇಳಬಹುದಾಗಿದ್ದು. ಈ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಗ್ಲೋಬಲ್ ವ್ಯಾಪ್ತಿ ನೀಡಿ ನಿಜವಾಗಿ ಒಂದು ಶಕ್ತವಾದ ವೇದಿಕೆಯನ್ನು ಕಲ್ಪಿಸಿದೆ. ಹೀಗಾಗಿ ಕೇಳುಗರ ಸಂಖ್ಯೆಯೂ ಮೂರು ಪಟ್ಟಾಗಿದೆ. ಸಶಕ್ತ ಮಾಧ್ಯಮವಾಗಿರುವ ರೇಡಿಯೋಗೆ ಮುಂದಿನ ದಿನಗಳಲ್ಲಿ ಇನ್ನೂ ಉಜ್ವಲ ಭವಿಷ್ಯ ಇದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೃಷಿ ಮಹಾ ವಿದ್ಯಾಲಯದ ಡೀನ್ ಡಾ.ಎಸ್.ಬಿ.ಕಲಘಟಗಿ,
ಬಿ.ಎಲ್.ಡಿ.ಈ ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ ಮಾತನಾಡಿದರು. ವಿಜಯಪುರ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಎಸ್. ಎಸ್. ಶೇಖ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ, ಸೋಮಶೇಖರ ರುಳಿ,
ತಾಂತ್ರಿಕ ವಿಭಾಗದ ಕಬೀರ ಲಮಾಣಿ, ಸಂಜಯ್
ಬಿರಾಜದಾರ, ರಮೇಶ ಮಗದುಮ, ನೀಲೇಶ ಬೇನಾಳ, ರೇವಣಸಿದ್ದಪ್ಪ ಚಾಂದಕೋಟೆ, ಕಿರಣಕುಮಾರ ಶೇಖದಾರ, ಸದಾಶಿವ ಚಲವಾದಿ, ಹನುಮಂತ ಚವ್ಹಾಣ, ಮಹಾಂತೇಶ, ಮುತ್ತುರಾಜ, ಲತಾ, ಅಪೂರ್ವ, ಸೋಮಶೇಖರ, ಸಂತೋಷಿ ಜವಳಿ, ಮಹಾನಂದ ಬೋಳಿಶೆಟ್ಟಿ, ಬಸವರಾಜ ಒಂಟಿಗೋಡಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌