ಪ್ರಧಾನಿಯವರಿಂದ ಸರ್ವವ್ಯಾಪಿ. ಸರ್ವಸ್ಪರ್ಶಿ ಆಡಳಿತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘನೆ

ದಾವಣಗೆರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಕ್ಷರಶಃ ಸರ್ವವ್ಯಾಪಿ, ಸರ್ವಸ್ಪರ್ಶಿ ಆಡಳಿತ ನೀಡುವ ಮೂಲಕ ದೇಶವನನ್ನು ಜೋಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ದೇಶಕ್ಕಾಗಿ ತ್ಯಾಗ ಮಾಡಬೇಕೆಂನ್ನುವ ಮನೋಭಾವ ಸಂಪೂರ್ಣವಾಗಿ ಮರೆತು ಹೋಗಿರುವ ಸಂದರ್ಭದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಜೋಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ನಮ್ಮ ನಾಯಕರಾದ ಬಿ. ಎಸ್. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ನಮ್ಮ ಸರಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದಿದೆ. ಜನರ ಸಮಸ್ಯೆಗಳನ್ನು ತಿಳಿದುಕೊಂಡು, ಜನರ ಧ್ವನಿಯಾಗಿ, ಒಬ್ಬರೇ ಇದ್ದಾಗಲೂ 104 ಜನ ಇದ್ದಾಗಲೂ ಜನರ ಧನ್ವಿಯನ್ನು ಗಟ್ಟಿಗೊಳಿಸುತ್ತ ಬಂದಿದ್ದರಿಂದ ಪ್ರತಿಯೊಂದು ಹಳ್ಳಿಯಲ್ಲಿ ಯುವಕರು, ರೈತರು ಭಾರತೀಯ ಜನತಾ ಪಕ್ಷದೊಂದಿಗೆ ಗುರುತಿಸಿಕೊಳ್ಳುತ್ತಾ ಬಂದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವ ಹಲವಾರು ಯೋಜನೆಗಳನ್ನು ನಮ್ಮ ರಾಜ್ಯ ಸರಕಾರ ಕೈಜೋಡಿಸಿ ಮುನ್ನಡೆಸಿಕೊಂಡು ಹೋಗುವ ಕೆಲಸ ಮಾಡಲಿದೆ ಎಂದು ಅವರು ಹೇಳಿದರು.

ಇಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಂದ ನಾವು ಪ್ರೇರಣೆ ಪಡೆದು ಇಡೀ ಭಾರತದಲ್ಲಿಯೇ ಪ್ರಥಮ ರಾಜ್ಯವಾಗಿ ಎಲ್ಲಾ ರೈತರ ಮಕ್ಕಳಿಗೆ ಪಿಯುಸಿ ಯಿಂದ ಉನ್ನತ ಶಿಕ್ಷಣದವರೆಗೂ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಇದರಿಂದ ಸುಮಾರು ರೂ. 20 ಲಕ್ಷ ರೈತ ಕುಟುಂಬಗಳಿಗೆ ಇದರ ಪ್ರಯೋಜನವಾಗಲಿದೆ ಹಾಗೂ ಅದರ ಜೊತೆಗೆ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರಿಗೆ ಮಾಶಾಸನದ ಮೊತ್ತವನ್ನು ಹೆಚ್ಚಿಸಲಾಗಿದೆ. ಜನಸ್ಪಂದನ ಹಾಗೂ ಜನಪರವಾಗಿ ಸರಕಾರ ಇರಬೇಕೆನ್ನುವ ಕಾರಣಕ್ಕಾಗಿ ಟಿ. ಎಂ. ವಿಜಯ ಭಾಸ್ಕರ್ ಅವರ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ವರದಿಯನ್ನು ಅಧ್ಯಯನ ಮಾಡಿ ನ. 1 ರಿಂದ ಅದರಲ್ಲಿರುವ ಪ್ರಮುಖ ವಿಚಾರಗಳನ್ನು ಅನುಷ್ಠಾನ ಮಾಡಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಇದು ನಿಮ್ಮ ಸರಕಾರ, ಭಾರತೀಯ ಜನತಾ ಪಕ್ಷದ ನೇತೃತ್ವದ ಸರಕಾರ ಜನರ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತೇವೆ, ಭಾರತೀಯ ಜನತಾ ಪಕ್ಷದ ಆದರ್ಶಗಳನ್ನು ಅಷ್ಟೇ ಅಲ್ಲದೇ, ಜನಪರವಾಗಿರುವ ಮತ್ತು ಜನಮೆಚ್ಚುಗೆಯಾಗುವ ಒಂದು ಸರಕಾರವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು.

 

Leave a Reply

ಹೊಸ ಪೋಸ್ಟ್‌