ಸಿಎಂ ಭೇಟಿಯಾದ ಮಾಜಿ ಸಚಿವ ಎಂ. ಬಿ. ಪಾಟೀಲ ನೇತೃತ್ವದ ಕೃಷ್ಣಾ ತೀರದ ರೈತರ ನಿಯೋಗ- ಯಾಕೆ ಗೊತ್ತಾ?

ಬೆಂಗಳೂರು: ಯುಕೆಪಿ 3ನೇ ಹಂತದಲ್ಲಿ ಮುಳುಗಡೆಯಾಗಲಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಎಲ್ಲಾ ಜಮೀನುಗಳಿಗೆ ಏಕರೂಪ ಪರಿಹಾರ ಒದಗಿಸಲು ಆಗ್ರಹಿಸಿ ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿತು.

ತಮ್ಮನ್ನು ಭೇಟಿ ಮಾಡಿದ ರೈತರ ನಿಯೋಗದ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಕಾರಾತ್ಮಕವಾಗಿ ಸ್ಪಂದಸುದರು.

ಸಿಎಂ ಭೇಟಿ ಬಳಿಕ ಮಾತನಾಡಿದ ರಾಜ್ಯ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷ ರಾಜೇಂದ್ರ ದೇಸಾಯಿ, ನಮ್ಮ ಬೇಡಿಕೆ ಈಡೇರಿಸುವ ಕುರೊತು ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

 

ಆಲಮಟ್ಟಿ ಆಣೆಕಟ್ಟನ್ನು 524.256ಮೀ ಎತ್ತರಿಸಿ ನೀರು ನಿಲ್ಲಿಸಿದಾಗ ಈ ಭಾಗದ ಸುಮಾರು 75 ಸಾವಿರ ಎಕರೆ ಜಮೀನು ಮುಳುಗಡೆಯಾಗಲಿದೆ. ಇದರಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ 14 ಗ್ರಾಮಗಳು ಮುಳುಗಡೆಯಾಗಲಿವೆ. ಈ ಹಿಂದೆ 2015-16ರಲ್ಲಿ ಮುಳುಗಡೆಯಾಗುವ ಜಮೀನಿನ ಮಾರ್ಗಸೂಚಿ ಬೆಲೆಯನ್ನು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಗ್ರಾಮಗಳಿಗೆ ನಿಗದಿಪಡಿಸಿದ್ದಾರೆ‌. ಆದರೆ ಬಾಗಲಕೋಟೆಯ ಜಮಖಂಡಿ ಮತ್ತು ಬೀಳಗಿ ತಾಲೂಕಿನ ಮಾರ್ಗಸೂಚಿ ಮಾತ್ರ ಪರಿಷ್ಕರಣೆ ಮಾಡಿದ್ದಾರೆ. ಅದೇ ರೀತಿ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ 14 ಗ್ರಾಮಗಳ ಜಮೀನುಗಳ ಮಾರ್ಗಸೂಚಿ ಪರಿಷ್ಕರಣೆ ಮಾಡಿ ಎಲ್ಲಾ ರೈತರಿಗೆ ನ್ಯಾಯ ದೊರಕಿಸಲು ಕೋರಿ ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಅವರ ನೇತೃತದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ ಸಿಎಂ ಅವರಿಂದ ಸಕಾರಾತ್ಮಕ ಭರವಸೆ ದೊರೆತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಎಂ. ಬಿ. ಪಾಟೀಲ ಅವರು ರೈತರ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಉಪಸ್ಥಿತರಿದ್ದು, ರೈತರ ಮನವಿಯನ್ನು ಆಲಿಸಿದರು.

ಈ ಸಂದರ್ಭದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಉಪಾಧ್ಯಕ್ಷ ಎಚ್. ಆರ್. ಬಿರಾದಾರ, ಜಿ. ಪಂ. ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಶೈಲ ಸುಳ್ಳದ, ಭೀಮನಗೌಡ ಪಾಟೀಲ, ರಾಮನಗೌಡ ಪಾಟೀಲ, ವೆಂಕಟೇಶ ನಿಡೋಣಿ, ಸುಭಾಸ ಪಾಟೀಲ, ಸಂಗನಗೌಡ ಪಾಟೀಲ, ಸಂಗಣ್ಣ ಹುಣಸಿಕಟ್ಟಿ, ಶಿವಾನಂದ ಕಳ್ಳಿಗುದ್ದಿ, ಹಣಮಂತ ಮುದಕರೆಡ್ಡಿ, ವೆಂಕಣ್ಣ ಬಿರಾದಾರ, ರಮೇಶ ಗಡದಾನಿ, ವಿಠ್ಠಲ ಶೇಬಾನಿ, ಸುರೇಶ ಪೂಜಾರಿ, ಗೋವಿಂದಪ್ಪ ಶಿರಬೂರ, ಮಹೇಶ ಯರಗಟ್ಟಿ, ಸುರೇಶ ಬಿರಾದಾರ, ಸುರೇಶ ಕೊಡಬಾಗಿ, ಸುನೀಲಗೌಡ ಪಾಟೀಲ, ಮಹಾದೇವ ಮಾಸರೆಡ್ಡಿ, ವಿಜಯ ಸುತಗುಂಡಿ, ವೆಂಕಪ್ಪ ಚಿಕ್ಕಗಲಗಲಿ, ಅರವಿಂದ ಗುರಡ್ಡಿ, ವಿಠ್ಠಲ ಪೋತರೆಡ್ಡಿ, ಗಿರೀಶ ಪಾಟೀಲ ಸೇರಿದಂತೆ ಚಿಕ್ಕಗಲಗಲಿ, ಜೈನಾಪುರ, ಲಿಂಗದಳ್ಳಿ, ಹಂಗರಗಿ, ಬೆಳ್ಳುಬ್ಬಿ, ಬಬಲಾದ, ದೇವರಗೆಣ್ಣೂರ, ಕಣಬೂರ, ಹೊಸೂರ, ಸುತಗುಂಡಿ, ಜಂಬಗಿ, ಶಿರಬೂರ, ಮಂಗಳೂರ, ತಾಜಪೂರ ಗ್ರಾಮದ ರೈತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌