ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಭೇಟಿ ಮಾಡಿದ ಮಾಜಿ ಸಚಿವ ಎಂ. ಬಿ. ಪಾಟೀಲ ನೇತೃತ್ವದ ರೈತರ ನಿಯೋಗ

ಬೆಂಗಳೂರು: ಯುಕೆಪಿ 3ನೇ ಹಂತದಲ್ಲಿ ಮುಳುಗಡೆಯಾಗುವ ಎಲ್ಲಾ ರೈತರ ಜಮೀನುಗಳಿಗೆ ಏಕರೂಪ ಬೆಲೆ ನಿಗದಿ
ಪಡಿಸುವಂತೆ ಆಗ್ರಹಿಸಿ ಬಬಲೇಶ್ವರ ತಾಲೂಕಿನ ರೈತರ ನಿಯೋಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮನವಿ ಸಲ್ಲಿಸಿತು.

ಈ ಹಿಂದೆ ತಾವು ಮುಖ್ಯ ಮಂತ್ರಿಯಾಗಿದ್ದಾಗ ಹಾಗೂ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ನಮ್ಮ ಬೇಡಿಕೆಯನ್ನು ಒಪ್ಪಿ, ಶಿಫಾರಸ್ಸು ಮಾಡಿದ್ದೀರಿ. ಆದರೆ ನಂತರ ಅದು ಕಾರ್ಯಗತಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕರಾದ ತಾವು ಸದನದಲ್ಲಿ ಈ ವಿಷಯವನ್ನು ಚರ್ಚಿಸಿ, ಏಕರೂಪ ಬೆಲೆ ನಿಗದಿ ಪಡಿಸಲು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ರೈತ ಮುಖಂಡರ ನಿಯೋಗ ಕೋರಿತು.

ರೈತರ ಮನವಿ ಸ್ವೀಕರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ನೀರಾವರಿ ಸಚಿವ ಎಂ. ಬಿ. ಪಾಟೀಲ ಅವರೊಂದಿಗೆ ಚರ್ಚಿಸಿ ಈ ವಿಚಾರವನ್ನು ಪ್ರಸ್ತಾಪಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ, ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಉಪಾಧ್ಯಕ್ಷ ಎಚ್. ಆರ್. ಬಿರಾದಾರ, ಜಿ. ಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ತಾ. ಪಂ. ಮಾಜಿ ಅಧ್ಯಕ್ಷ ಶ್ರೀಶೈಲ ಸುಳ್ಳದ, ಭೀಮನಗೌಡ ಪಾಟೀಲ, ರಾಮನಗೌಡ ಪಾಟೀಲ, ವೆಂಕಟೇಶ ನಿಡೋಣಿ, ಸುಭಾಸ ಪಾಟೀಲ, ಸಂಗನಗೌಡ ಪಾಟೀಲ, ಸಂಗಣ್ಣ ಹುಣಸಿಕಟ್ಟಿ, ಶಿವಾನಂದ ಕಳ್ಳಿಗುದ್ದಿ, ಹಣಮಂತ ಮುದಕರೆಡ್ಡಿ, ವೆಂಕಣ್ಣ ಬಿರಾದಾರ, ರಮೇಶ ಗಡದಾನಿ, ವಿಠ್ಛಲ ಶೇಬಾನಿ, ಸುರೇಶ ಪೂಜಾರಿ, ಗೋವಿಂದಪ್ಪ ಶಿರಬೂರ, ಮಹೇಶ ಯರಗಟ್ಟಿ, ಸುರೇಶ ಬಿರಾದಾರ, ಸುರೇಶ ಕೊಡಬಾಗಿ, ಸುನೀಲಗೌಡ ಪಾಟೀಲ,ಸ ಮಹಾದೇವ ಮಾಸರೆಡ್ಡಿ, ವಿಜಯ ಸುತಗುಂಡಿ, ವೆಂಕಪ್ಪ ಚಿಕ್ಕಗಲಗಲಿ, ಅರವಿಂದ ಗುರಡ್ಡಿ, ವಿಠ್ಠಲ ಪೋತರೆಡ್ಡಿ, ಗಿರೀಶ ಪಾಟೀಲ ಸೇರಿದಂತೆ ಚಿಕ್ಕಗಲಗಲಿ, ಜೈನಾಪುರ, ಲಿಂಗದಳ್ಳಿ, ಹಂಗರಗಿ, ಬೆಳ್ಳುಬ್ಬಿ, ಬಬಲಾದ, ದೇವರ ಗೆಣ್ಣೂರ, ಕಣಬೂರ, ಹೊಸೂರ, ಸುತಗುಂಡಿ, ಜಂಬಗಿ, ಶಿರಬೂರ, ಮಂಗಳೂರ, ತಾಜಪೂರ ಗ್ರಾಮದ ರೈತರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌