ಕೈಮಗ್ಗವನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕಿದೆ- ಆಶಾ ಎಂ. ಪಾಟೀಲ

ವಿಜಯಪುರ: ನಾವೆಲ್ಲರೂ ಕೈಮಗ್ಗವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ಆಶಾ ಎಂ. ಪಾಟೀಲ ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಗ್ರಾಮ ಸೇವಾ ಸಂಘ ಹೆಗ್ಗೋಡು ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪವಿತ್ರ ವಸ್ತ್ರ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ನಮಗ್ಯಾರಿಗೂ ಕೈಮಗ್ಗಗಳ ಬಗ್ಗೆ ಅರಿವು ಇಲ್ಲ. ನಮ್ಮ ಹಿರಿಯರು ನಮಗೆ ಇದರ ಬಗ್ಗೆ ಹೇಳಿಕೊಟ್ಟಿಲ್ಲ. ಕೇವಲ ರಾಜಕಾರಣಿಗಳು ಮಾತ್ರ ಈ ಖಾದಿ ಬಟ್ಟೆಗಳನ್ನು ತೊಡುವುದನ್ನು ನೋಡಿದ್ದೇವೆ. ಕೈಮಗ್ಗದ ಬಗ್ಗೆ ವಿಜಯಪುರದ ಜನಕ್ಕೆ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.

ಕೈಮಗ್ಗಗಳು ಹೋಗಿ ಅದಕ್ಕೆ ಪರ್ಯಾಯವಾಗಿ ಪವರ್ ಲ್ಯೂಮ್ ಗಳು ಬಂದಿವೆ. ನಮ್ಮ ವಿಜಯಪುರದ ಬಂಜಾರಾ ಸಮಾಜದ ಹೆಣ್ಣು ಮಕ್ಕಳು ಅತ್ಯಂತ ಸುಂದರವಾಗಿರುವ ಕಸೂತಿ ಬಟ್ಟೆಗಳನ್ನು ಬಳಸುತ್ತಾರೆ. ಚರಕ ಸಂಸ್ಥೆ ಕೈಮಗ್ಗ ವಸ್ತ್ರಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ನಾವೆಲ್ಲರೂ ಸೇರಿ ಕೈಮಗ್ಗವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.

ಸಿಡಾಕ್ ಜಂಟಿ ನಿರ್ದೇಶಕಿ ಸುಪ್ರೀಯಾ ಬಿ. ಬಳ್ಳಾರಿ ಸಸಿಗೆ ನಿರೂಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲಪ್ಲಿ ಬಿ ಎಲ್ ಡಿ ಇ ಎಂಜನಿಯರಿಂಗ್ ಕಾಲೇಜಿನ ಉಪಪ್ರಾಚಾರ್ಯೆ ಡಾ. ಗೀತಾಂಜಲಿ ಪಾಟೀಲ, ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಬಂದನಾ ಬ್ಯಾನರ್ಜಿ ಮುಂತಾದವರು ಉಪಸ್ಥಿತರಿದ್ದರು.

 

 

Leave a Reply

ಹೊಸ ಪೋಸ್ಟ್‌