ಬಸವ ನಾಡಿನಲ್ಲಿ ಇನ್ನೆರಡು ದಿನ ಮಳೆ ಮುನ್ಸೂಚನೆ- ಕಳೆದ 24 ಗಂಟೆಗಳಲ್ಲಿ ಚಡಚಣದಲ್ಲಿ 35.20 ಮಿ. ಮೀ. ಮಳೆ- ಉಳಿದೆಡೆ ಸುರಿದ ಮಳೆ ಎಷ್ಟು ಗೊತ್ತಾ?

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಇನ್ನೆರಡು ದಿನ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸೆ. 24 ಮತ್ತು 25ರ ವರೆಗೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮಳೆಯ ಸಾಧ್ಯತೆ ಶೇ. 50 ರಿಂದ 75 ರಷ್ಟಿದೆ.

ಸೆ. 27ರ ವರೆಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಮಧ್ಯೆ ಕಳೆದ 24 ಗಂಟೆಯಲ್ಲಿ ವಿಜಯಪುರ ಜಿಲ್ಲೆಯ ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

ವಿಜಯಪುರ ನಗರ- 30.60 ಮಿ. ಮೀ.,
ಭೂತ್ನಾಳ- 11.20 ಮಿ. ಮೀ.,
ಹಿಟ್ನಳ್ಳಿ-23.20 ಮಿ. ಮೀ.,
ತಿಕೋಟಾ- 15 ಮಿ. ಮೀ.,
ಬಸವನ ಬಾಗೇವಾಡಿ- 18.30 ಮಿ. ಮೀ.,
ಢವಳಗಿ- 19 ಮಿ. ಮೀ.,
ಅಗರಖೇಡ- 22.20 ಮಿ. ಮೀ.,
ಹೊರ್ತಿ- 10.20 ಮಿ. ಮೀ.,
ಹಲಸಂಗಿ- 19 ಮಿ. ಮೀ.,
ಚಡಚಣ- 35.20 ಮಿ. ಮೀ.,
ಝಳಕಿ- 15.40 ಮಿ. ಮೀ.,
ಸಿಂದಗಿ- 29 ಮಿ. ಮೀ.,
ಆಲಮೇಲ- 22 ಮಿ. ಮೀ.,
ಸಾಸಾಬಾಳ- 15.30 ಮಿ. ಮೀ.,
ರಾಮನಳ್ಳಿ-30 ಮಿ. ಮೀ.,
ಕಡ್ಲೇವಾಡ ಪಿಸಿಎಚ್- 9.10 ಮಿ. ಮೀ.

 

Leave a Reply

ಹೊಸ ಪೋಸ್ಟ್‌