ಅತ್ಯಂತ ಕಿರಿಯ ವಯಸ್ಸಿನ ಶ್ವಾಸಕೋಶ ತಜ್ಞನಾಗಿ ಹೊರಹೊಮ್ಮಿದ ಕಲಬುರಗಿ ಯುವಕ ಡಾ. ವೈಭವ ಸಿ. ಪಡಶೆಟ್ಟಿ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲು

ಕಲಬುರಗಿ: ಕಲಬುರಗಿ ನಗರದ ಜಿಮ್ಸ್ ನಲ್ಲಿ ಸೇವೆ ಸಲ್ಲಿಸುತ್ತಿರುವ ತಜ್ಞ ವೈದ್ಯ ಡಾ. ವೈಭವ ಸಿ. ಪಡಶೆಟ್ಟಿ ಭಾರತ ಕಂಡ ಅತ್ಯಂತ ಕಿರಿಯ ವಯಸ್ಸಿನ ಶ್ವಾಸಕೋಶ ತಜ್ಞರಾಗಿ ಹೊರ ಹೊಮ್ಮಿದ್ದಾರೆ.

ಕಲ್ಯಾಣ ಕರ್ನಾಟಕ ಕಲಬುರಗಿಯ ವೈದ್ಯ ದಂಪತಿಗಳಾದ ಡಾ. ಸಿ. ವಿ. ಪಡಶೆಟ್ಟಿ ಮತ್ತು ಡಾ. ಮಹಾನಂದಾ ಪಡಶೆಟ್ಟಿ ಅವರ ಕಿರಿಯ ಪುತ್ರರಾಗಿರುವ ಡಾ. ವೈಭವ ಸಿ. ಪಡಶೆಟ್ಟಿ ಈಗ ಗಮನ ಸೆಳೆದಿದ್ದಾರೆ. ಕಲಬುರಗಿಯ ಮಹಾದೇವಪ್ಪ ರಾಂಪೂರೇ ಮೆಡಿಕಲ್ ಕಾಲೇಜನಲ್ಲಿ ಎಂ ಬಿ ಬಿ ಎಸ್ ಪದವಿ ಮುಗಿಸಿ ಮೈಸೂರಿನ ಜೆ ಎಸ್ ಎಸ್ ಮೆಡಿಕಲ್ ಕಾಲೇಜನಲ್ಲಿ ಶ್ವಾಸಕೋಶ ವಿಭಾಗದಲ್ಲಿ ಸ್ನಾತಕೋತ್ತರ ಎಂಡಿ ಪದವಿ ಪಡೆಯುವ ಮೂಲಕ ಭಾರತದ ಅತ್ಯಂತ ಕಿರಿಯ ಶ್ವಾಸಕೋಶ ತಜ್ಞ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಡಾ. ವೈಭಸ ಸಿ. ಪಡಶೆಟ್ಟಿ ಅವರ ಹೆಸರು ಈಗ ಇಂಡಿಯಾ ಬುಕ್ ಆಫ್ ರಿಕಾಡ೯ನಲ್ಲಿ ಸೇರ್ಪಡೆಯಾಗಿದೆ. ಕೇವಲ 25 ವಷ೯ 10 ತಿಂಗಳಲ್ಲಿ ಶ್ವಾಸಕೋಶ ತಜ್ಞ ವೈದ್ಯರಾಗಿ ಹೊರ ಹೊಮ್ಮಿರುವ ಇವರ ಸಾಧನೆ ಪರಿಗಣಿಸಿ ಇಂಡಿಯಾ ಬುಕ್ ಆಫ್ ರಿಕಾಡ೯ ನವರು ಪ್ರಮಾಣ ಪತ್ರ, ಪ್ರಶಸ್ತಿ ಫಲಕಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ.

ಇವರ ಸಾಧನೆಗೆ ಬಸವ ನಾಡು ಕೂಡ ಅಭಿನಂದನೆಗಳನ್ನು ಸಲ್ಲಿಸುತ್ತದೆ.

 

Leave a Reply

ಹೊಸ ಪೋಸ್ಟ್‌