ಶ್ರವಣ ದೋಷ ಉಂಟಾಗದಂತೆ ಮಕ್ಕಳು, ಹಿರಿಯರು ಮುನ್ನೆಚ್ಚರಿಕೆ ವಹಿಸಬೇಕು- ಡಾ. ಆರ್. ಎಸ್. ಮುಧೋಳ

ವಿಜಯಪುರ: ಶ್ರವಣ ದೋಷವುಂಟಾಗದಂತೆ ಮಕ್ಕಳು, ವಯಸ್ಕರು ಹಾಗೂ ಹಿರಿಯ ನಾಗರಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಮೂಢನಂಬಿಕೆಗಳಿಗೆ ಒಳಗಾಗದೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು ಎಂದು ಬಿ ಎಲ್ ಡಿ ಇ ಡಿಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ಹೇಳಿದರು.

ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಕಿವುಡುತನದ ಬಗ್ಗೆ ಚಿಕಿತ್ಸೆ ಜಾಗೃತಿ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು ಜಗತ್ತು ಕೋರೊನಾ ಮಹಾಮಾರಿಗೆ ನಲುಗಿದಾಗ ಸಂಸ್ಥೆಯ ಅಧ್ಯಕ್ಷರು ಮತ್ತು ಮಾಜಿ ಸಚಿವರಾದ ಎಂ. ಬಿ. ಪಾಟೀಲ ಅವರು ಮಾನವೀಯತೆ ಮೆರೆದು ನಮ್ಮ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ಅನಕೂಲ ಕಲ್ಪಿಸಿದ್ದಾರೆ. ವಾಕ್, ಶ್ರವಣ ತಜ್ಞರು ದಿನದ 24 ಗಂಟೆ ಆಸ್ಪತ್ರೆಯ ಕೋಠಡಿ ಸಂಖ್ಯೆ 9 ರಲ್ಲಿ ಓ ಪಿ ಡಿಯಲ್ಲಿ ಕೆಲಸ ಮಾಡಿದ್ದಾರೆ. ಇಂದಿಗೂ ಅಲ್ಲಿ ಅತ್ಯಾಧುನಿಕ ಉಪಕರಣಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಹಿರಿಯ ನಾಗರಿಕರಲ್ಲಿ ಕಂಡು ಬರುವಂಥ ಕಿವುಡುತನ ಕುಟುಂದವರೊಂದಿಗೆ ಹಾಗೂ ಸಾಮಾಜಿಕವಾಗಿ ಬೆರೆಯಲು ಶ್ರವಣ ಸಾಧನಗಳು ಅತ್ಯಾವಶ್ಯಕ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅವರು ವಾಕ್, ಶ್ರವಣ ವಿಭಾಗದಲ್ಲಿ ಲಭ್ಯವಿರುವ ಆಧುನಿಕ ಉಪಕರಣಗಳು ಮತ್ತು ನೆರವುಗಳ ಬಗ್ಗೆ ಕೈಪಿಡಿ ಬಿಡುಗಡೆ ಮಾಡಿದರು.

ಇ ಎನ್ ಟಿ ವಿಭಾಗದ ಮುಖ್ಯಸ್ಥೆ ಡಾ. ಎಚ್. ಟಿ. ಲತಾದೇವಿ ಮಾತನಾಡಿ, ಕಿವುಡುತನದ ರಕ್ಷಣೆಯ ಕುರಿತು ಉಪನ್ಯಾಸ ನೀಡಿದರು. ಶ್ರವಣ ದೋಷದ ಕಾರಣಗಳು, ಜನ್ಮಜಾತ ಶಿಶುಗಳಿಗೆ ತಕ್ಷಣ ಚಿಕಿತ್ಸೆ ನೀಡವುದು, ವಯಸ್ಕರಲ್ಲಿ, ಹಿರಿಯ ನಾಗರಿಕರಲ್ಲಿ ಕಿವುಡುತದ ಕುರಿತು ವಿವರವಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಆರ್. ಎಂ. ಹೊನ್ನುಟಗಿ,ಸ ಜಿರಿಯಾಟ್ರಿಕ್ ಕ್ಲಿನಿಕ್ ಪ್ರಾಧ್ಯಾಪಕ ಡಾ. ಆನಂದ ಅಂಬಲಿ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಡಾ. ಈಶ್ವರ ಭಾಗೋಜಿ ಸೇರಿದಂತೆ ವೈದ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಡಾ. ನಿತೀನ ಭಟ್ ಕಾರ್ಯಕ್ರಮ ನಿರೂಪಿಸಿದರು. ಡಾ. ಶಶಿಕುಮಾರ ವಂದಿಸಿದರು.

Leave a Reply

ಹೊಸ ಪೋಸ್ಟ್‌