ಕನ್ನಡ ಆರ್ಥಿಕ ಭಾಷೆಯಾದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ- ಹೆಗ್ಗೋಡಿನ ಹಿರಿಯ ಚಿಂತಕ ಪ್ರಸನ್ನ

ವಿಜಯಪುರ: ಕನ್ನಡ ಆರ್ಥಿಕ ಭಾಷೆಯಾದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ನಿರ್ಲಕ್ಷಿತ ಕ್ಷೇತ್ರಗಳಿಗೆ ಆದ್ಯತೆ ನೀಡಿ ಅಭಿವೃದ್ಧಿ ಪಡಿಸುವುದಯ ಸಧ್ಯದ ಅಗತ್ಯವಾಗಿದೆ ಎಂದು ಹೆಗ್ಗೋಡಿನ ಹಿರಿಯ ಚಿಂತಕ ಪ್ರಸನ್ನ ಹೇಳಿದರು.

ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ ಮತ್ತು ಚಿಂತನ ಸಾಂಸ್ಕೃತಿಕ ಬಳಗ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಗ್ರಾಮೋದ್ಯೋಗ ಮತ್ತು ಆರ್ಥಿಕತೆ ಕುರಿತು ಉಪನ್ಯಾಸ ನೀಡಿದರು.

ಮಹಿಳೆಯರು ಸೇರಿದಂತೆ ನಿರ್ಲಕ್ಷಿತರಾಗಿರುವ ಮತ್ತು ಶೇ. 65 ರಷ್ಟಿರುವ ಜನರ ಗ್ರಾಮೋದ್ಯೋಗಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ತಾವು ಅಭಿಯಾನ ಆರಂಭಿಸಿರುವುದಾಗಿ ಅವರು ತಿಳಿಸಿದರು.

ಕೇಂದ್ರದ ನಿರ್ದೇಶಕ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಮಾತನಾಡಿ, ವಿಜಯಪುರದ ಶ್ರೀಮಂತ ರೈತ ರಾಮಪ್ಪ ಬಾಲಪ್ಪ ಬಿದರಿ ಅವರು ಔಂಧ ಸಂಸ್ಥಾನದ ಪ್ರಧಾನಿಯಾಗಿ ಏಳು ವರ್ಷಗಳಲ್ಲಿ ಗಾಂಧಿಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ತಮ್ಮ ಔಂಧ ಸಂಸ್ಥಾನದಲ್ಲಿ ನನಸು‌ ಮಾಡಿದ್ದರು ಎಂದು ತಿಳಿಸಿದರು.

ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಮಾತನಾಡಿ, ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆ ನನಸಾಗಬೇಕಾದರೆ ನಿಸರ್ಗದ ಸಂರಕ್ಷಣೆ ಮಾಡಬೇಕು. ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡಬೇಕು. ಕೇವಲ ವೃತ್ತಿಪರ ಉದ್ಯೋಗಗಳ ಕಡೆ ಗಮನ ಹರಿಸದೇ, ಸಮಾಜ ಮತ್ತು ಪರಿಸರಕ್ಕೆ ಪೂರಕವಾಗಿರುವ ಕೃಷಿ ಚಟುಚಟಿಕೆಗಳಿಗೂ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ, ಚಿಂತನ ಬಳಗದ ಕಾರ್ಯದರ್ಶಿ ಡಾ. ಮಹಾಂತೇಶ ಬಿರಾದಾರ, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ವಿ. ಸಿ. ನಾಗಠಾಣ, ಶರಣ ಸಾಹಿತ್ಯ ಪರಿಷತ ಮಾಜಿ ಅಧ್ಯಕ್ಷ ಎಂ. ಜಿ. ಯಾದವಾಡ, ಪ್ರೊ. ಎಸ್. ಬಿ. ದೊಡಮನಿ, ಎನ್. ಎಸ್. ಹಳ್ಳಿ, ಆಡಳಿತಾಧಿಕಾರಿ ಐ. ಎಸ್. ಕಾಳಪ್ಪನವರ, ಡಾ. ತರಡಿ, ಜಗದೀಶ ಗಲಗಲಿ, ಪ್ರೊ. ಬಿ. ಎಚ್. ಹಿರೇಮಠ, ಪ್ರೊ. ಡಿ. ಬಿ. ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.

ಎಸ್. ಎಸ್. ಪಿಯು ಕಾಲೇಜಿನ ಪ್ರಾಚಾರ್ಯ ಜಿ. ಡಿ. ಅಕಮಂಚಿ ಸ್ವಾಗತಿಸಿದರು. ಡಾ. ವಿ. ಡಿ. ಐಹೊಳ್ಳಿ ಕಾರ್ಯಕ್ರಮ‌ ನಿರೂಪಿಸಿದರು. ಪ್ರೊ. ಎ. ಬಿ. ಬೂದಿಹಾಳ ವಂದಿಸಿದರು.

Leave a Reply

ಹೊಸ ಪೋಸ್ಟ್‌