ಸಬ್ ರಜಿಸ್ಟ್ರಾರ್ ಕಾಣೆಯಾಗಿದ್ದಾರೆ ಹುಡುಕಿ ಕೊಡಿ ಎಂದ ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ
ವಿಜಯಪುರ: ವಿಜಯಪುರ ಸಬ್ ರಜಿಸ್ಟ್ರಾರ್ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡಿ ಎಂದು ಕೆಪಿಸಿಸಿ ಸದಸ್ಯ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಜಯಪುರದ ಸಬ್ ರಜಿಸ್ಟ್ರಾರ್ ಆಪೀಸ್ ಅವ್ಯವಸ್ಥೆಯ ಆಗರವಾಗಿದೆ. ಅಲ್ಲಿನ ಸಬ್ ರಜಿಸ್ಟ್ರಾರ್ ಬಿರಾದಾರ ಕಚೇರಿಯಲ್ಲಿ ಇರುವುದಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ. ತಾವು ಬೆಳಿಗ್ಗೆ ಕಾರ್ಯ ನಿಮಿತ್ಯ ಆ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿ ಹಿರಿಯ ನಾಗರಿಕರು ವಯೋವೃದ್ಧರು, ಮಹಿಳೆಯರು ಮೊದಲ ಮಹಡಿಗೆ ಬರಲು ಪರದಾಡುತ್ತಿದ್ದರು. ಇದನ್ನೆಲ್ಲಾ ಗಮನಿಸಿ ಸರಿಯಾದ […]
ಬಿಜೆಪಿ ಸಂಸದ ರಮೇಶ ಜಿಗಜಿಣಗಿ ನೋವಿನ ಮಾತು- ಎಲ್ಲಿ ಮತ್ತು ಯಾಕೆ ಗೊತ್ತಾ?
ವಿಜಯಪುರ: ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೆಚ್ಚು ಮಾತನಾಡುವುದಿಲ್ಲ. ಅದರೆ, ಮಾತನಾಡಿದರೆ ಅದರ ಹಿಂದೆ ಉದ್ದೇಶವಂತೂ ಇದ್ದೇ ಇರುತ್ತದೆ. ಕೇಂದ್ರದಲ್ಲಿ ಸಚಿವ ಸ್ಥಾನ ತಪ್ಪಿದರೂ ಕ್ಯಾರೆ ಎನ್ನದ ರಮೇಶ ಜಿಗಜಿಣಗಿ ಈಗ ಮಾತ್ರ ಬಹಳ ಸೂಕ್ಷ್ಮವಾಗಿಯೇ ಬಿಜೆಪಿ ಹಿರಿಯ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಅವರು ಮಾತನಾಡಿರುವ ಶಬ್ದಗಳು ಸೂಕ್ಷವಾಗಿದ್ದರೂ ಹಿರಿಯ ಮತ್ತು ದಲಿತ ಸಂಸದರಾಗಿ ಇವರು ಆಡಿರುವ ಮಾತುಗಳು ಬಿಜೆಪಿಗೆ ಬಿಸಿತುಪ್ಪ ಆಗುವುದಂತೂ ಸುಳ್ಳಲ್ಲ. ವಿಜಯಪುರದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ […]
ಅ. 30ಕ್ಕೆ ಸಿಂದಗಿ, ಹಾನಗಲ್ ಬೈ ಎಲೆಕ್ಷನ್ ಮುಹೂರ್ತ ಫಿಕ್ಸ್
ನವದೆಹಲಿ: ವಿಜಯಪುರ ಜಿಲ್ಲೆಯ ಸಿಂದಗಿ ಮತ್ತು ಹಾವೇರಿ ಜಿಲ್ಲೆಯ ಹಾನಗಲ್ ಬೈ ಎಲೆಕ್ಷನ್ ಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಕರ್ನಾಟಕದ ಸಿಂದಗಿ ಮತ್ತು ಹಾನಗಲ್ ವಿಧಾನಸಭೆ ಸೇರಿದಂತೆ ದೇಶದ ಒಟ್ಟು 30 ವಿಧಾನಸಭೆ ಮತ್ತು ಮೂರು ಲೋಕಸಭೆ ಬೈ ಎಲೆಕ್ಷನ್‍ಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಅ.1ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು, ಅ.8 ರವೆರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಅ.11ರಂದು ನಾಮಪತ್ರಗಳ ಪರಿಷ್ಕರಣೆ ನಡೆಯಲಿದ್ದು, ಅ.13 ರಂದು ನಾಮಪತ್ರ ಹಿಂಪಡೆಯಲು ಕೊನೆಯದಿನವಾಗಿದೆ. ಅ.30 ರಂದು ಮತದಾನ […]
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಂದ ರೂ. 1 ಕೋ.ವೆಚ್ಚದ ಕಾಲೇಜ ಕಲಿಕಾ ಕೊಠಡಿಗಳನ್ನು ಉದ್ಘಾಟನೆ
ವಿಜಯಪುರ: ರೂ. 1 ಕೋ. ವೆಚ್ಚದ ಕಾಲೇಜು ಕಲಿಕಾ ಕೊಠಡಿಗಳನ್ನು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಿದರು. ವಿಜಯಪುರ ನಗರದ ಗಾಂಧಿಚೌಕ್ ಬಳಿ ಸರಕಾರಿ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಆರು ಕೊಠಡಿಗಳನ್ನು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ ನಬಾರ್ಡ ಯೋಜನೆ ಅನುದಾನದಲ್ಲಿ ನಿರ್ಮಿಸಲಾಗಿದೆ. ಈ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಶಾಲೆ- ಕಾಲೇಜುಗಳಿಗೂ ಸಹ ಖಾಸಗಿ ಶಾಲಾ ಕಾಲೇಜುಗಳಂತೆ ಹೈಟೆಕ್ ಸ್ಪರ್ಶ ಕೊಡುವದರೊಂದಿಗೆ ಈ ಭಾಗದ ಎಲ್ಲ ಬಡ […]
ವಿಜಯಪುರವನ್ನು ರಫ್ತು ನಗರ ಮಾಡುವ ಗುರಿಯಿದೆ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ
ವಿಜಯಪುರ: ವಿಜಯಪುರವನ್ನು ರಫ್ತು ನಗರವನ್ನಾಗಿಸುವ ಗುರಿ ಹೊಂದಲಾಗಿದೆ. ಇಲ್ಲಿನ ಉದ್ದಿಮೆಗಳು ಕೂಡ ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಹೇಳಿದರು. ವಿಜಯಪುರ ನಗರದ ಶಿಕಾರಖಾನೆ ಬಳಿಯ ಜಿಲ್ಲಾ ಕೈಗಾರಿಕೆ ಕೇಂದ್ರದ ಆವರಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕೆ ಕೇಂದ್ರಸ ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಆಶ್ರಯದಲ್ಲಿ ಅಮೃತ ಮಹೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ವಾಣಿಜ್ಯ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪಕ್ಕದ ಜಿಲ್ಲೆಗಳಾದ ಬೆಳಗಾವಿ, ಕಲಬುರಗಿ ಸೇರಿದಂತೆ ಗಡಿ […]