ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಂದ ರೂ. 1 ಕೋ.ವೆಚ್ಚದ ಕಾಲೇಜ ಕಲಿಕಾ ಕೊಠಡಿಗಳನ್ನು ಉದ್ಘಾಟನೆ

ವಿಜಯಪುರ: ರೂ. 1 ಕೋ. ವೆಚ್ಚದ ಕಾಲೇಜು ಕಲಿಕಾ ಕೊಠಡಿಗಳನ್ನು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಿದರು.

ವಿಜಯಪುರ ನಗರದ ಗಾಂಧಿಚೌಕ್ ಬಳಿ ಸರಕಾರಿ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಆರು ಕೊಠಡಿಗಳನ್ನು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ ನಬಾರ್ಡ ಯೋಜನೆ ಅನುದಾನದಲ್ಲಿ ನಿರ್ಮಿಸಲಾಗಿದೆ. ಈ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಶಾಲೆ- ಕಾಲೇಜುಗಳಿಗೂ ಸಹ ಖಾಸಗಿ ಶಾಲಾ ಕಾಲೇಜುಗಳಂತೆ ಹೈಟೆಕ್ ಸ್ಪರ್ಶ ಕೊಡುವದರೊಂದಿಗೆ ಈ ಭಾಗದ ಎಲ್ಲ ಬಡ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕ ವಾತಾವರಣ ಸೃಷ್ಟಿಸುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲಾಗುವದು, ಅಲ್ಲದೇ, ಸರಕಾರಿ ಶಾಲೆ- ಕಾಲೇಜುಗಳನ್ನು ಉನ್ನತ ದರ್ಜೆಗೆ ಏರಿಸಲು ಎಲ್ಲ ಅಗತ್ಯ ಸಹಕಾರ ನೀಡಲಾಗುವದು ಎಂದು ತಿಳಿಸಿದರು.

Leave a Reply

ಹೊಸ ಪೋಸ್ಟ್‌