ಸಬ್ ರಜಿಸ್ಟ್ರಾರ್ ಕಾಣೆಯಾಗಿದ್ದಾರೆ ಹುಡುಕಿ ಕೊಡಿ ಎಂದ ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ

  • ವಿಜಯಪುರ: ವಿಜಯಪುರ ಸಬ್ ರಜಿಸ್ಟ್ರಾರ್ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡಿ ಎಂದು ಕೆಪಿಸಿಸಿ ಸದಸ್ಯ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಜಯಪುರದ ಸಬ್ ರಜಿಸ್ಟ್ರಾರ್ ಆಪೀಸ್ ಅವ್ಯವಸ್ಥೆಯ ಆಗರವಾಗಿದೆ. ಅಲ್ಲಿನ ಸಬ್ ರಜಿಸ್ಟ್ರಾರ್ ಬಿರಾದಾರ ಕಚೇರಿಯಲ್ಲಿ ಇರುವುದಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ. ತಾವು ಬೆಳಿಗ್ಗೆ ಕಾರ್ಯ ನಿಮಿತ್ಯ ಆ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿ ಹಿರಿಯ ನಾಗರಿಕರು ವಯೋವೃದ್ಧರು, ಮಹಿಳೆಯರು ಮೊದಲ ಮಹಡಿಗೆ ಬರಲು ಪರದಾಡುತ್ತಿದ್ದರು. ಇದನ್ನೆಲ್ಲಾ ಗಮನಿಸಿ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕಾಗಿದ ಅಲ್ಲಿನ ಅಧಿಕಾರಿ ಬಿರಾದಾರ ಅವರನ್ನು ಭೇಟಿಯಾಗಿ ಈ ಅವ್ಯವಸ್ಥೆಯ ಕುರಿತು ಗಮನ ಸೆಳೆಯಲು ಹೋಗಿ ನಾಲ್ಕು ಗಂಟೆ ಕಾಯ್ದು ವಾಪಸ್ ಬಂದಿದ್ದೇನೆ. ಆದರೂ ಅಧಿಕಾರಿ ಪ್ರತ್ಯಕ್ಷವಾಗಲೇ ಇಲ್ಲ. ಅಪಾರ ಪ್ರಮಾಣದ ಹಣ ಗಳಿಕೆ ಮಾಡಿರುವ ಅವರು ದೇವಲೋಕದಿಂದ ಕೆಳಗಿಳಿದು ಬಂದವರಂತೆ ಮಾತನಾಡುತ್ತಾರೆ. ಅವರಿಗೆ ದೂರಿ ಏನೂ ಪ್ರಯೋಜನವಿಲ್ಲ. ಮನೆಯಿಂದಲೇ ಅವರು ಆಪೀಸನ್ನು ನಿಯಂತ್ರಿಸುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ ಎಂದು ಸಂಗಮೇಶ ಬಬಲೇಶ್ವರ ಆರೋಪಿಸಿದ್ದಾರೆ.

ಇಂಥ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ತಕ್ಷಣ ಕಂದಾಯ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಬಹುಶಃ ಈ ಜಿಲ್ಲೆಯ ಅತ್ಯಂತ ಹಿರಿಯ ರಾಜಕಾರಣಿ ಸಂಸದರಾದ ಗೌರವಾನ್ವಿತ ರಮೇಶ್ ಜಿಗಜಿಣಗಿ ಅವರು ಕೂಡ ಬೆಳಿಗ್ಗೆ ಇದೇ ಕಚೇರಿಗೆ ಬಂದು ಹೋಗಿದ್ದಾರೆ. ಅವರೂ ಕೂಡ ಅಸಮಾಧಾನ ವ್ಯಕ್ತಪಡಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ ಎಂದು ಸಾರ್ವಜನಿಕರು ಚರ್ಚಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ‌

ಸಂಸದರು ಕೆಳಗಿನಿಂದ ಮೇಲೆ ಹತ್ತಿ ಬರುವಾಗ ಅಂದಗೆಟ್ಟ ಗೋಡೆಗಳು, ಎಲ್ಲೆಂದರಲ್ಲಿ ಉಗುಳಿದ ಗುಟಕಾ ನಿರ್ವಹಣೆಯೇ ಇಲ್ಲದ ಈ ಕಾರ್ಯಾಲಯಕ್ಕೆ ಬರುವ ವಯೋವೃದ್ಧ ತಂದೆ- ತಾಯಂದಿರ ಆಕ್ರಂದನ ಅವರ ಕಣ್ಣಿಗೆ ಬಿದ್ದಿದ್ದರೆ ಅದೇ ನಮ್ಮೆಲ್ಲರ ಪುಣ್ಯ ಎಂದು ಭಾವಿಸುತ್ತೇನೆ. ಅವರದೇ ಸರಕಾರ ಇದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾತನಾಡಿ ತಕ್ಷಣ ಈ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತವು ಆಗ್ರಹಿಸುತ್ತೇನೆ ಎಂದು ಸಂಗಮೇಶ ಬಬಲೇಶ್ವರ ಮಾಧ್ಯಮ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌