ಬಿಜೆಪಿ ಸರಕಾರ ಅನೈತಿಕ- ಗೋವಿಂದ ಕಾರಜೋಳ ಪಾಪದ ಮಂತ್ರಿ- ಮಾಜಿ ಸಚಿವ ಎಂ. ಬಿ. ಪಾಟೀಲ ವಾಗ್ದಾಳಿ

ವಿಜಯಪುರ: ಹಾಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ಮಾಜಿ ಜಲಸಂಫನ್ಮೂಲ ಸಚಿವ ಎಂ. ಬಿ. ಪಾಟೀಲ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಕೆಪಿ ಕಾಂಗ್ರೆಸ್ಸಿನ ಪಾಪದ ಕೂಸು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಆದರೆ, ಬಿಜೆಪಿ ಸರಕಾರ ಪಾಪದ ಕೂಸು. ಅನೈತಿಕ ಸರಕಾರದಲ್ಲಿ ಗೋವಿಂದ ಕಾರಜೋಳ ಪಾಪದ ನೀರಾವರಿ ಮಂತ್ರಿಯಾಗಿದ್ದಾರೆ ಎಂದು ಎಂ. ಬಿ. ಪಾಟೀಲ ಹರಿಹಾಯ್ದರು.

ಕಾರಜೋಳ ಅವರಿಗೆ ಈ ವಯಸ್ಸಿನಲ್ಲಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಜಲಸಂಪನ್ಮೂಲ ಸಚಿವರಿಗೆ ಇದು ಶೋಭೆ ತರುವುದಿಲ್ಲ. ಲಾಲ್ ಬಹಾದ್ದೂರ್ ಶಾಸ್ತ್ರಿ ಅಂದು ಆಲಮಟ್ಟಿ ಜಲಾಷಯಕ್ಕೆ ಬುನಾದಿ ಹಾಕದಿದ್ದರೆ ನಾನು, ತಾವು ಈಗ ಈ ಕೆಲಸ‌ ಮಾಡಬೇಕಾಗಿರಲಿಲ್ಲ
ಎಂದು ಅವರು ಹೇಳಿದರು.

2013 ರಿಂದ 2019ರ ವರೆಗೆ ಗೋವಿಂದ ಕಾರಜೋಳ ಅವರು ಮಾತನಾಡಿರುವ ಎಲ್ಲ ಮಾಹಿತಿ ನಮ್ಮ ಬಳಿ ಇದೆ. ಈ ಬಗ್ಗೆ ನಾನು ಅಧಿವೇಶನದಲ್ಲಿ ಮಾತನಾಡಲು ಸಮಯ ಸಿಗಲಿಲ್ಲ. ‌ಮುಂದೆ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.

ಭೂಪರಿಹಾರದ ಕುರಿತು ಕಾರಜೋಳ ಅವರು ಕಾಳಜಿಯಿಂದ ಮಾತನಾಡಿದ್ದಾರೆ. ಆದರೆ, ಈಗ ಅವರ11 ತಿಂಗಳು ಮಾತ್ರ ಸಮಯಾವಕಾಶವಿದೆ ಎನ್ನುತ್ತಾರೆ. ಆದರೆ, ನಾಲ್ಕು ವರ್ಷ ಇವರು ಅಧಿಕಾರದಲ್ಲಿದ್ದರೂ ಬಚಾವತ್ ಐ ತೀರ್ಪಿನ ಬಗ್ಗೆ ಯಾಕೆ ಗೆಜೆಟ್ ನೊಟಿಫಿಕೇಶನ್ ಮಾಡಿಲ್ಲ? ಮಹಾದಾಯಿ ಗೆಜೆಟ್ ನೋಟಿಫಿಕೇಶನ್ ಮಾಡಿದ್ದಾರೆ. ಇದು ಯಾಕೆ ಸಾಧ್ಯವಾಗಿಲ್ಲ‌ ಎಂದು ಪ್ರಶ್ನಿಸಿದರು.

ನಾನು ಜಲಪನ್ಮೂಲ ಸಚಿವನಾಗಿದ್ದಾಗ ಗೆಜೆಟ್ ಗಾಗಿ ಕಾಯಲಿಲ್ಲ. ನೀರಾವರಿಗೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಮಾಡಿದ್ದೇನೆ. 1000 ಕಿ. ಮೀ. ಕಾಲುವೆ ಮಾಡಿ ನೀರು ಕೊಟ್ಟಿದ್ದೇನೆ. ಅಂತರ್ಜಲ ಹೆಚ್ಚಿದೆ. ರೈತರು ಉತ್ತಮ ಬೆಳೆ ಬೆಳೆದು ಸುಖ ಸಂಸಾರ ಸಾಗಿಸುತ್ತಿದ್ದಾರೆ. ಗುಳೆ ಹೋಗುವವರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದು ನಮ್ಮ ಮುಂದಾಲೋಚನೆಯ ಫಲ ಎಂದು ಎಂ. ಬಿ. ಪಾಟೀಲ ಸಧ್ಯದ ರೈತರ ಬದುಕು ಹಸನಾಗಿರುವ ಉದಾಹರಣೆ ನೀಡಿದರು.

ಕಾರಜೋಳ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಯೋಜನೆ ಅನುಷ್ಠಾನದ ವಿಚಾರದಲ್ಲಿಯೂ ವಾಸ್ತವ ಮಾಹಿತಿ ಮರೆ ಮಾಚುತ್ತಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಸರಕಾರದಲ್ಲಿ ಭೂಸ್ವಾಧಿನಕ್ಕೆ ರೂ. 17620 ಕೋ. ಭೂಸ್ವಾಧಿನಕ್ಕೆ ಮೀಸಲಿಟ್ಟು ಒಟ್ಟು ರೂ. 30 ಸಾವಿರ ಕೋ. ಹಣವನ್ನು ಯೋಜನೆಗೆ ಉಪಯೋಗಿಸಿದ್ದೇವೆ. ಆದರೆ, ಕಾರಜೋಳ ಇದನ್ನು ಮರೆಮಾಚಿ ತಿರುಚಿ ಹೇಳುವುದರಲ್ಲಿ ನಿಸ್ಸಿಮರಾಗಿದ್ದಾರೆ. ಅದೇ ರೀತಿ ನಿಜಲಿಂಗಪ್ಪ ಮತ್ತು ಇಂದಿರಾ ಗಾಂಧಿ ಅವರನ್ನು ನೀರಾವರಿಗಾಗಿ ಬಂಗಾರದಲ್ಲಿ ತೂಗಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಅಂದು ಯುದ್ಧದ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಜನ ಈ ನಾಯಕರನ್ನು ಚಿನ್ನದಲ್ಲಿ ತೂಗಿದ್ದಾರೆ. ಇದೂ ಕೂಡ ಅವರ ಸುಳ್ಳುತನಕ್ಕೆ ಸಾಕ್ಷಿಯಾಗಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಸಧ್ಯದ ಪಾಪದ ಅನೈತಿಕ ಬಿಜೆಪಿ ಸರಕಾರಕ್ಕಿಂತಲೂ ಹೆಚ್ಚು ಹಣವನ್ನು ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಯುಕೆಪಿಗಾಗಿ ಖರ್ಚು ಮಾಡಿದೆ. ಈಗ ಕಾರಜೋಳರು ತಮ್ಮ‌ ಕಾಲಾವಧಿ ಕಡಿಮೆ ಇದೆ ಎಂದು ನುಣುಚಿಕೊಳ್ಳುತ್ತಿದ್ದಾರೆ ಎಂದು ಎಂ. ಬಿ. ಪಾಟೀಲ ವಾಗ್ದಾಳಿ ಹೇಳಿರು.

ಬಿ. ಎಸ್. ಯಡಿಯೂರಪ್ಫ ಸಿಎಂ ಆಗಿದ್ದಾಗ ಯುಕೆಪಿಗೆ ಏನೂ ಮಾಡಲಿಲ್ಲ. ಜಾರಕಿಹೊಳಿ ಒಂದು ಸಭೆ ನಡೆಸಿದ್ದು ಹೊರತು ಪಡಿಸಿ ಬೇರಾವ ಸಭೆಯನ್ನೂ ನಡೆಸಿಲ್ಲ ಎಂದು ನೆನಪಿಸಿದ ಎಂ. ಬಿ. ಪಾಟೀಲ ಇನ್ನೂ ಬಹಳ ಮಾತನಾಡಬೇಕಿದೆ. ಅದನ್ನು ಸಮಯ ಸಿಕ್ಕಾಗ ಹೇಳುತ್ತೇನೆ ಎಂದು ತಿಳಿಸಿದರು.

ಕಾರಜೋಳ ಅವರು ತಾವು ಸದನದಲ್ಲಿ ಮಾತನಾಡಿದ್ದನ್ನು ಮಾಡಿ ತೋರಿಸಲಿ. ಈ ಭಾಗದವರೇ ಆಗಿ ಸದನದಲ್ಲಿ ಕಣ್ಣೀರು ಹಾಕಿದ್ದೀರಿ, ವ್ಯಂಗ್ಯವಾಗಿ‌ ಮಾತನಾಡಿದ್ದೀರಿ. ಸದನದ ಹೊರಗೂ ಮಾತನಾಡಿದ್ದೀರಿ. ಮುಂಬರುವ ಬಜೆಟ್ ನಲ್ಲಿಯಾದರೂ ಈ ಭಾಗದ ನೀರಾವರಿ ಯೋಜನೆಗಳಿಗೆ ಅಗತ್ಯವಾಗಿರುವ ಸಂಪೂರ್ಣ ಹಣ ಮೀಸಲಿಡಿ. ಮುಂದಿನ ಈ ಯೋಜನೆಗೆ ಬೇಕಾದ ರೂ. 70 ಸಾವಿರ ಕೋ. ಹಣ ಮೀಸಲಿಡಲು ಸಾಧ್ಯವಿದೆಯೇ? ಎಂದು ಪ್ರಶ್ನಿಸಿದ ಮಾಜಿ ಸಚಿವರು, ತಮ್ಮ ಕ್ಷೇತ್ರದ ಮಾಚಕನೂರು, ಆಲಗುಂಡಿ ಸೇರಿದಂತೆ ಗ್ರಾಮಗಳ ಮುಳುಗಡೆಯಾಗುತ್ತವೆ. ಹಾವು, ಚೇಳು, ಕಪ್ಪೆಗಳು ಜನರ ಮನೆಗಳಿಗೆ ಬರುತ್ತವೆ. ಸಾಕಷ್ಟು ಭೂಮಿ ಇದೆ. ಪುನರ್ವಸತಿ ಕಲ್ಪಿಸಿ ಎಂದು 2018ರಲ್ಲಿ ಇದೇ ಕಾರಜೋಳ ಹೇಳಿದ್ದರು. ಈಗ ಇವರು ಅಧಿಕಾರಕ್ಕೆ ಬಂದು ಎರಡು ವರ್ಷಗಳಲ್ಲಿ ತಮ್ಮ ಸ್ವಂತ ಕ್ಷೇತ್ರದ ಗ್ರಾಮಗಳನ್ನೇ ಸ್ಥಳಾಂತರ ಮಾಡಿಲ್ಲ. ಉದು ಇವರ ಮಾತು ಮತ್ತು ಕೃತಿಯಲ್ಲಿರುವ ವ್ಯತ್ಯಾಸಕ್ಕೆ ಸಾಕ್ಷಿಯಾಗಿದೆ. ಈಗ ಎಲ್ಲ 20 ಗ್ರಾಮಗಳನ್ನು ಸ್ಥಳಾಂತರ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.

71 ವಯಸ್ಸಿನ ಕಾರಜೋಳ ಅವರಿಗೆ ಮುಂದಿನ ಚುನಾವಣೆ ವೇಳೆಗೆ 73 ವಯಸ್ಸಾಗುತ್ತೆ. ಮುಂದೆ ಬಿ. ಎಸ್. ಯಡಿಯೂರಪ್ಪ ಅವರಂತೆ ಮಾರ್ಗದರ್ಶಕ ಮಂಡಳಿಯಲ್ಲಿ ಇರಬೇಕಾಗಬಹುದು. ಈಗಲೇ ಕೆಲಸ ಮಾಡಿ ತೋರಿಸಿ ಎಂದು ಅವರು ಹೇಳಿದರು.

ಕೆ ಬಿ ಜೆ ಎನ್ ಎಲ್ ಕಚೇರಿಗಳ ಸ್ಥಳಾಂತರಿಂದ ಭೂಸ್ವಾಧೀನ, ಸ್ಥಳಾಂತರಕ್ಕೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಹೆಚ್ಚೆಂದರೆ ಕಚೇರಿ ಕೆಲಸಗಳಿಗೆ ಅನುಕೂಲವಾಗಲಿದೆ. ಭೂಸ್ವಾಧೀನ ಪರಿಹಾರ ವಿಚಾರದಲ್ಲಿ ರೈತರ ಸಮ್ಮತಿಯೊಂದಿಗೆ ಪರಿಹಾರ ಕಂಡುಕೊಂಡು‌ ಯೋಜನೆ ಪೂರ್ಣಗೊಳಿಸಿ ಎಂದು ಹೇಳಿದ ಅವರು, ಕಾರಜೋಳ ಅವರು ಸದನದ ಒಳಗೆ‌ ಮತ್ತು ಹೊರಗೆ ಕಳೆದ ಆರು ವರ್ಷಗಳಲ್ಲಿ ಆಡಿರುವ ಮಾತಿನಂತೆ ಈಗ ಉಳಿದಿರುವ ಅಧಿಕಾರಾವಧಿಯಲ್ಲಿ ಮಾಡಿ ತೋರಿಸಲಿ. ಈಗ ಉಳಿದಿರುವ ಒಂದೇ ಬಜೆಟ್ ನಲ್ಲಿ ನೀರಾವರಿ ಕೆಲಸ ಮಾಡಿ ತೋರಿಸಲಿ ಎಂದು ಆಗ್ರಹಿಸಿದರು.

ಸಿಂದಗಿ ಬೈ ಎಲೆಕ್ಷನ್

ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ ಮನಗೂಳಿ ಅವರನ್ನು ಮುಂದುವರೆಸುವ ಕುರಿತು ಕೆಪಿಸಿಸಿ ಅಧ್ಯಕ್ಷರು, ಮುಖಂಡರು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಜೆಪಿಯ ಹಣದ ಬಲ, ಅಧಿಕಾರದ ಬಲದ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇಂಡಿ ತಾಲೂಕಿನ ರೇವಣ ಸಿದ್ಧೇಶ್ವರ ಏತ ನೀರಾವರಿ ಯೋಜನೆ ಜಾರಿಯಾಗಬೇಕು ಎಂದು ಎಂ. ಬಿ. ಪಾಟೀಲ‌‌‌ ಇದೇ ಸಂದರ್ಭದಲ್ಲಿ ಆಗ್ರಹಿಸಿದಅ

Leave a Reply

ಹೊಸ ಪೋಸ್ಟ್‌