ಡಾ. ರವಿ ಎಸ್. ಕೋಟೆಣ್ಣವರ, ಹೋಮಿಯೋಪಥಿ ಖ್ಯಾತ ವೈದ್ಯರು
ವಿಜಯಪುರ: ಜನ ಸಾಮಾನ್ಯರಲ್ಲಿ ಹೃದಯ ರೋಗಗಳ ಕುರಿತು ಅರಿವು ಮೂಡಿಸಲು ಸೆಪ್ಟೆಂಬರ 29 1999ರಲ್ಲಿ ವರ್ಲ್ಡ್ ಹಾಟ೯ ಫೆಡರೇಶನ್(WHF) ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳ (WHO) ಸಂಯುಕ್ತ ಆಶ್ರಯದಲ್ಲಿ ಆಗಿನ WHF ನ ಅಧ್ಯಕ್ಷರಾಗಿದ್ದ ಅಂಟೋನಿ ಬೆಯ್ಸ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ವಿಶ್ವ ಹೃದಯ ದಿನ ಆಚರಣೆ ಆರಂಭವಾಯಿತು.
ಈ ದಿನ ವಿಶ್ವಾದ್ಯಂತ ಎಲ್ಲ ಸರಕಾರಿ, ಅರೆ ಸರಕಾರಿ ಆರೋಗ್ಯ ಸಂಘ ಸಂಸ್ಥೆಗಳು ಜನರಲ್ಲಿ ಹೃದಯ ಸಂಬಂಧಿತ ಕಾಯಿಲೆಗಳ ಅರಿವು ಮೂಡಿಸಲು ನಾನಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಲಾಗುತ್ತಿದೆ.
ಪ್ರತೀ ವರ್ಚ ಈ ದಿನದಂದು ಒಂದು ಘೋಷ ವ್ಯಾಖ್ಯೆಯನ್ನು ನೀಡುತ್ತಾರೆ. ಈ ಘೋಷ ವ್ಯಾಖ್ಯೆಯನ್ನು ಕಾರ್ತರೂಪಕ್ಕೆ ತರಲು ವಿಶ್ವದ ಮೂಲೆ ಮೂಲೆಗಳಲ್ಲಿ ಅಭಿಯಾನಗಳನ್ನು ಆಯೋಜಿಸಲಾಗುತ್ತಿದೆ. ಈ ವರ್ಷದ ಹೃದಯ ದಿನದ ಘೋಷ ವ್ಯಾಖ್ಯ- ಜಾಗತಿಕ ಮಟ್ಟದಲ್ಲಿ ಹೃದಯ ಕಾಯಿಲೆಗಳ ಜಾಗೃತಿ, ತಡೆಗಟ್ಟುವಿಕೆ ಮತ್ತು ನಿರ್ವಹಣೆಯನ್ನು ಸುಧಾರಿಸಲು ಡಿಜಿಟಲ್ ಆರೋಗ್ಯದ ಶಕ್ತಿಯನ್ನು ಬಳಸಿಕೊಳ್ಳುವುದು ವಿಶ್ವ ಹೃದಯ ದಿನ 2021 ಕ್ಕೆ ನಮ್ಮ ಗುರಿಯಾಗಿದೆ.
ಪಾಶ್ಚಿಮಾತ್ಯರ ಅನುಕರಣೆಯಿಂದ ಬದಲಾದ ಜೀವನ ಶೈಲಿ, ಕೆಲಸದ ಒತ್ತಡ, ದೈಹಿಕ ಶ್ರಮದ ಕೊರತೆಯಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಸಣ್ಣ ವಯಸ್ಸಿನಲ್ಲೇ ಬಹುತೇಕ ಮಂದಿಯನ್ನು ಕಾಡುತ್ತಿರುತ್ತವೆ. ಪ್ರಸ್ತುತ ಆರೋಗ್ಯ ಸಮಸ್ಯೆಗೆ ಕೆಟ್ಟ ಹವ್ಯಾಸಗಳನ್ನು ಮೈಗೂಡಿಸಿಕೊಂಡಿರಬೇಕು ಎಂದೆನಿಲ್ಲ. ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡದೆ ಒತ್ತಡಯುತ ಜೀವನವಿದ್ದರೆ ಸಾಕು. ಇಲ್ಲದ ರೋಗಗಳು ಮನೆ ಸೇರುತ್ತದೆ. ಹೃದಯ ಕಾಯಿಲೆಗಳು ಎಂಬುದು 50ರ ಅನಂತರ ಎಂಬ ಕಾಲವೊಂದಿತ್ತು. ಆದರೆ ಈಗ ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳಲಾರಂಭಿಸಿದೆ. ಹೀಗಾಗಿ ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.
ಕ್ಯಾನ್ಸರ ನಂತರ ಹೆಚ್ಚು ಜನರನ್ನು ಭಾದಿಸಿ ಮರಣಕ್ಕೆ ಕಾರಣವಾಗುವ ವ್ಯಾದಿಗಳಲ್ಲಿ ಹೃದಯ ರೋಗ ಎರಡನೇ ಸ್ಥಾನದಲ್ಲಿದೆ. ಮೊದ ಮೊದಲು ಇದನ್ನು ಉನ್ನತ ವರ್ಗದವರ ರೋಗ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಹೃದಯ ರೋಗ ಅಂತಸ್ತು, ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನು ಭಾದಿಸುವ ರೋಗವಾಗಿ ಪರಿಣಮಿಸಿದೆ.
ಹೃದಯ ರೋಗಗಳಲ್ಲಿ ಅತೀ ಸಾಮಾನ್ಯವಾಗಿ ಕಾಣುವ ಸಮಸ್ಯೆ ಎಂಜೈನಾ ಪೆಕ್ಟೋರಿಸ್, ಇದು ಒಂದು ತುರ್ತು ಸಮಸ್ಯೆಯ ಹೃದಯ ಭಾದೆ. ಇಡೀ ದೇಹಕ್ಕೆ ರಕ್ತ ಪರಿಚಲನೆಯನ್ನು ಸಮರ್ಪಕವಾಗಿ ಮಾಡುವ ಕಾರ್ತ ಹೃದಯದ್ದಾದರೆ, ಹೃದಯದ ಸ್ನಾಯುಗಳಿಗೆ ರಕ್ತ ಪೊರೈಸುವ ಕೆಲಸವನ್ನು ಹೃದಯವನ್ನು ಹಾವಿನಂತೆ ಸುತ್ತುವರಿದ ಕರೋನರಿ ರಕ್ತನಾಳದ್ದಾಗಿದೆ. ಹೃದಯ ಮನುಷ್ಯ ವಿಶ್ರಾಂತಿ ಸ್ಥಿತಿಯಲ್ಲಿದ್ದಾಗ ಪ್ರತಿ ನಿಮಿಷಕ್ಕೆ ಸುಮಾರು 5 ಲೀಟರನಷ್ಟು ರಕ್ತವನ್ನು ಹೊರ ತಳ್ಳುತ್ತದೆ. ಹಾಗೂ ನಿಮಿಷಕ್ಕೆ ಸರಾಸರಿ 72 ಬಾರಿ ಸಂಕುಚನ
ಆಕುಂಚನಗೊಳ್ಳುತ್ತದೆ.
ಕರೋನರಿ ಹೃದ್ರೋಗಕ್ಕೆ ಮುಖ್ಯ ಕಾರಣ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಸುವ ಕರೋನರಿ ರಕ್ತ ನಾಳದಲ್ಲಿ ಕೊಲೆಸ್ಟ್ರಾಲ ಶೇಖರಣೆಯಾಗಿ
ಪೆಡೆಸುತನ(ಆಟ೯ರಿಯೋಸ್ಕ್ಲಿರೋಸಿಸ್) ಉಂಟಾಗಿ ರಕ್ತನಾಳದ ವ್ಯಾಸ ಕಡಿಮೆಯಾಗುವುದು. ಆಗ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆ ಅಸಮರ್ಪಕವಾಗಿ ಹೃದಯ ದುರ್ನಲವಾಗುತ್ತದೆ.
ರಕ್ತನಾಳದ ಪೆಡೆಸುತನಕ್ಕೆ ಕಾರಣವಾಗುವ ಅಂಶಗಳೆಂದರೆ ಮಾನಸಿಕ ಒತ್ತಡ , ದೈಹಿಕ ಶ್ರಮವಿಲ್ಲದಿರುವುದು , ಬೊಜ್ಜು, ಧೂಮಪಾನ, ಮಧ್ಯಪಾನ, ಕರಿದ ಪದಾರ್ಥಗಳ ಸೇವನೆ , ಅಧಿಕ ರಕ್ತದೊತ್ತಡ , ಮಧುಮೇಹದಿಂದ ಬಳಲುವವರಲ್ಲಿ ಕೂಡ ರಕ್ತನಾಳದ ಪೆಡೆಸುತನ ಉಂಟಾಗುತ್ತದೆ.
ಪೆಡೆಸುನದಿಂದ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆಯಲ್ಲಿ ತಡೆ ಉಂಟಾಗಿ ತೀವ್ರವಾದ ಎದೆನೋವು ಕಾಣಿಸಿಕೊಳ್ಳುತ್ತದೆ. ಎದೆನೋವು ಎಡಭುಜ, ಎಡ ತೋಳು, ಎಡ ಕುತ್ತಿಗೆ, ಎಡ ದವಡೆಯತ್ತ ಹಾಗೂ ಹೊಟ್ಟೆಯತ್ತ ಹರಿದಂತಾಗುತ್ತದೆ. ಜೊತೆಗೆ ವಿಪರಿತ ತಲೆನೋವು, ತಲೆ ಸುತ್ತು, ಪ್ರಜ್ಞೆ ತಪ್ಪುವದು. ವಾಕರಿಕೆ-ವಾಂತಿ, ಉಸಿರಾಟದಲ್ಲಿ ಏರುಪೇರು ಮತ್ತು ಮೈಯಲ್ಲ ವಿಪರಿತ ಬೆವರುತ್ತದೆ. ಈ ತರಹದ ನೋವು ತಾತ್ಕಾಲಿಕ .ಹೆಚ್ಚು ಶ್ರಮದ ನಂತರ ಅಥವಾ ಮಾನಸಿಕ ಒತ್ತಡ ಉಂಟಾದಾಗ ಗೋಚರಿಸುತ್ತದೆ. ಕೆಲವೊಂದು ಸಲ ತೀವ್ರ ಅರಕ್ತತೆಯಿಂದ ಹೃದಯ ಕಾರ್ತ ನಿರ್ವಹಿಸಲು ವಿಫಲವಾಗಿ ಹೃದಯಾಘಾತವಾಗಿ ವ್ಯಕ್ತಿ ಸಾವನ್ನಪ್ಪಬಹುದು.
ಈ ತೆರೆನಾದ ತೀವ್ರ ಎದೆನೋವು ಕಾಣಿಸಿಕೊಂಡಾಗ ಅಲಕ್ಷಿಸಿದೆ ತಕ್ಷಣ ಹೃದಯದ
ತುರ್ತು ಚಿಕಿತ್ಸಾ ಘಟಕ ಹೊಂದಿದ ಆಸ್ಪತ್ರೆಗೆ ಸಾಗಿಸಬೇಕು. ಹೀಗಾದಾಗ ವ್ಯಕ್ತಿಯ ನಾಡಿ ಬಡಿತ, ಹೃದಯ ಬಡಿತ, ರಕ್ತದೊತ್ತಡಗಳನ್ನು ಅಭ್ಯಸಿಸಿ ಹೃದಯ ರೋಗವನ್ನು ಖಚಿತಪಡಿಸಿಕೊಳ್ಳಲಾಗುವುದು. ಮುಂದೆ ಹೃದಯರೋಗ ತಜ್ಞರು ಇಸಿಜಿ .ಈಕೋಕಾರ್ಡಿಯೋಗ್ಫಿ. ಎಂಜಿಯೋಗ್ರಫಿ. ಹೃದಯಕ್ಕೆ ಸಂಬಂಧ ಪಟ್ಟ ರಕ್ತ ತಪಾಸಣೆಗಳಾದ ಕೊಲೆಸ್ಟ್ರಾಲ, ಸಿ ಆರ್ ಪಿ, ಪ್ಲಾಸ್ಮಾ ಸಿರಾಮೈಡ್ಸ, ನೆಟ್ರೈಯುರೆಟ್ರಿಕ್ ಪೆಪ್ಟೈಡ್ಸ ಟೆಸ್ಟಗಳನ್ನು ಮಾಡಿ ಹೃದಯ ರೋಗದ ತೀವ್ರತೆಯನ್ನು ಅಭ್ಯಸಿಸಿ ಚಿಕಿತ್ಸೆ ಪ್ರಾರಂಭಿಸಲಾಗುವದು.
ಹೃದಯರೋಗದಿಂದ ಬಳಲುವವರು ಪಾಲಿಸಬೇಕಾದ ನಿಯಮಗಳು:
1. ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು.
2. ದೂಮಪಾನ, ತಂಬಾಕು ಸೇವನೆ, ಮಧ್ಯಪಾನಗಳನ್ನು ತ್ಯಜಿಸಬೇಕು.
3. ಕರಿದ ಪದಾರ್ಥ, ಕೊಬ್ಬಿನಾಂಶ, ಮಾಂಸಾಹಾರ, ಉಪ್ಪು, ಸಕ್ಕರೆಯುಳ್ಳ ಆಹಾರ ಪದಾರ್ಥಗಳನ್ನು ಕೈಬಿಡಬೇಕು.
4. ಮಧುಮೇಹ, ರಕ್ತದೊತ್ತಡವಿದ್ದರೆ ತಜ್ಞ ವೈದ್ಯರ ಸಲಹೆ ಸೂಚನೆ ಪಡೆದು ಚಿಕಿತ್ಸೆ ತೆಗೆದುಕೊಳ್ಳುತ್ತಿರಬೇಕು.
5. ಹೆಚ್ಚು ಪರಿಶ್ರಮದ ಕೆಲಸ ಮಾಡಕೂಡದು ಹಾಗೂ ಊಟವಾದ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಕು.
6. ಕನಿಷ್ಟ ತಿಂಗಳಿಗೊಮ್ಮೆಯಾದರೂ ತಜ್ಞ ಹೃದಯ ರೋಗ ಪರಿಣಿತರನ್ನು ಸಂಪರ್ಕಿಸಬೇಕು.
7. ದಿನನಿತ್ಯ ಲಘು ವ್ಯಾಯಾಮ ಯೋಗಾಸನಗಳನ್ನು ರೂಡಿಸಿಕೊಳ್ಳಬೇಕು.
ಕಳಕಳಿಯ ಮನವಿಯೇನೆಂದರೆ ಜಾಹಿರಾತುಗಳನ್ನು ನೋಡಿ, ನಾಮ ಫಲಕಗಳನ್ನು ನೋಡಿ ನಕಲಿ ವೈದ್ಯರಿಗೆ ಮರುಳಾಗದಿರಿ. ದೂರದ ತಜ್ಞ ವೈದ್ಯರಿಗಿಂತ ನಿಮಗೆ ಸಮೀಪವಿರುವ ತಜ್ಞ ವೈದ್ಯರನ್ನು ಸಂಪಕಿ೯ಸುವುದು ಸೂಕ್ತ.
ಹೃದಯರೋಗಗಳ ನಿರ್ವಹಣೆಯಲ್ಲಿ ಹೋಮಿಯೋಪಥಿ ಪಾತ್ರ
ಅಲೋಪತಿ ವೈದ್ಯ ಪದ್ದತಿಯು
ತುರ್ತು ಸಂಧರ್ಭದಲ್ಲಿ ರಾಮಬಾಣವಾದರೆ, ಹೋಮಿಯೋಪಥಿಯು ಹಳೆಯ ರೋಗಗಳಲ್ಲಿ ಸಂಜೀವಿನಿಯಾಗಿದೆ. ಹೋಮಿಯೋಪತಿ ವೈದ್ಯ ಪದ್ದತಿಯು ಇಂದು ವೇಗವಾಗಿ ಬೆಳೆಯುತ್ತಿರುವ ಮತ್ತು ಪ್ರಪಂಚದ್ಯಂತ ಅತೀ ಹೆಚ್ಚು ಜನ ಉಪಯೋಗಿಸುವ ಎರಡನೇಯ ವೈದ್ಯ ಪದ್ದತಿಯಾಗಿದೆ. ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ದೈಹಿಕ ಮಟ್ಟದಲ್ಲಿ ಆಂತರಿಕ ಸಮತೋಲನವನ್ನು ಉತ್ತೇಜಿಸುವ ಮೂಲಕ ರೋಗಪೀಡಿತ ವ್ಯಕ್ತಿಯ ಕಡೆಗೆ ಸಮಗ್ರವಾದ ಮಾರ್ಗವನ್ನು ತೆಗೆದುಕೊಳ್ಳುವುದರಿಂದ ಅದರ ಶಕ್ತಿಯು ಅದರ ಸ್ಪಷ್ಟವಾದ ಪರಿಣಾಮಕಾರಿತ್ವದಲ್ಲಿದೆ. ಹೃದಯ ವೈಫಲ್ಯಕ್ಕೆ ಸಂಬಂಧಪಟ್ಟಾಗ ಹೋಮಿಯೋಪತಿಯಲ್ಲಿ ಅನೇಕ ಪರಿಣಾಮಕಾರಿ ಔಷಧಗಳು ಲಭ್ಯವಿವೆ. ಆದರೆ ಔಷಧಿಗಳ ಆಯ್ಕೆಯು ಮಾನಸಿಕ ಮತ್ತು ದೈಹಿಕ ಲಕ್ಷಣಗಳನ್ನು ಪರಿಗಣಿಸಿ ವ್ಯಕ್ತಿಯ ಪ್ರತ್ಯೇಕತೆಯನ್ನು ಅವಲಂಬಿಸಿರುತ್ತದೆ. ಈ ರೀತಿಯಾಗಿ ಚಿಕಿತ್ಸೆ ನೀಡಿದಾಗ ಹೋಮಿಯೋಪಥಿಯಲ್ಲಿ ಹೃದಯ ರೋಗಗಳನ್ನು ಸಮರ್ಥವಾಗಿ, ಸಂಪೂರ್ಣವಾಗಿ, ಸೌಮ್ಯವಾಗಿ ನಿರ್ವಹಣೆ ಮಾಡಬಹುದು.