ಅಥಣಿಯಲ್ಲಿ ಪೊಲೀಸರ ಅಂಧಾ ದರ್ಬಾರ? ಪೊಲೀಸ್ ERSS 112 ಕಾರು ಢಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡ ತಾಯಿ ಮಗನ ವಿರುದ್ಧವೇ ಕೇಸ್- ಗಾಯಾಳುಗಳಿಂದ ದೂರು ಪಡೆಯಲು ಹಿಂದೇಟು ಆರೋಪ

ಅಥಣಿ: ಇದು ಸಾರ್ವಜನಕರಿಗೆ ರಕ್ಷಣೆ ನೀಡಬೇಕಾದ ಪೊಲೀಸರ ಇನ್ನೋಂದು ಮುಖವಾಡಕ್ಕೆ ಸಾಕ್ಷಿಯಾಗಿರುವ ಘಟನೆ. ಈ ಘಟನೆಯಲ್ಲಿ ಪೊಲೀಸರ ಕಾರು ಬೈಕಿಗೆ ಢಿಕ್ಕಿ ಹೊಡೆದು ತಾಯಿ-ಮಗ ಗಂಭೀರವಾಗಿ ಗಾಯಗೊಂಡಿದ್ದರೂ ಪೊಲೀಸರು ಗಾಯಾಳುಗಳ ವಿರುದ್ಧವೇ ಕೇಸ್ ದಾಖಲಿಸಿ ಕೈತೊಳೆದುಕೊಂಡಿದ್ದಾರೆ.   ಅಷ್ಟಕ್ಕೂ ಆಗಿದ್ದೇನೆಂದರೆ, ಸೋಮವಾರ ಮ. 12.30 ಸುಮಾರಿಗೆ ಸಂಕೋನಟ್ಟಿ ಗ್ರಾಮದ ತೋಟದ ವಸ್ತಿಯಿಂದ ತಾಯಿ ಸುಮಾರು 60 ವರ್ಷದ ವತ್ಸಲಾ ಶಂಕರ ಮುಗ್ದುಮ ಮತ್ತು ಸುಮಾರು 45 ವರ್ಷದ ಮಗ ಗುರುಲಿಂಗ ಮುಗ್ದುಮ ಬೈಕಿನಲ್ಲಿ ಅಥಣಿಯ ಕಡೆಗೆ ಹೊರಟಿದ್ದರು. […]

ಕರ್ನಾಟಕ ಮಾಧ್ಯಮ ಅಕಾಡೆಮಿಗೆ 40 ವರ್ಷ ಪೂರ್ಣ- ಲಾಂಛನ ಬಿಡುಗಡೆ ಮಾಡಿ, ಕ್ಲಬ್ ಹೌಸ್ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ 40 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಾಂಛನ ಬಿಡುಗಡೆ ಮಾಡಿ ಕ್ಲಬ್ ಹೌಸ್ ಉದ್ಘಾಟಿಸಿದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟನೆ ಬಳಿಕ ನನ್ನ ಕನಸಿನ ಕರ್ನಾಟ ವಿಷಯ ಕುರಿತು ಸಿಎಂ ಮಾತನಾಡಿದರು. ಕೈಗಾರಿಕೆಗಳ ಮೂಲಕ ಹೆಚ್ಚಿನ ಉದ್ಯೋಗ ಸೃಜನೆಗೆ ಅವಕಾಶವಿರುವುದರಿಂದ ರಾಜ್ಯದಲ್ಲಿ ಹೂಡಿಕೆ ಮಾಡುವ ಕೈಗಾರಿಕೋದ್ಯಮಗಳಿಗೆ ಉದ್ಯೋಗ ಸೃಜನೆ ಆಧಾರದಲ್ಲಿ ಪ್ರೋತ್ಸಾಹಕ ನೀಡುವ ಕುರಿತು ನೀತಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು. ಕರ್ನಾಟಕದಲ್ಲಿ ಕೈಗಾರಿಕೆ, ಉದ್ಯಮಗಳಿಗೆ ಸ್ವಾತಂತ್ರ್ಯ ಪೂರ್ವ […]

ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯಿಂದ ಪ್ರತಿಭಟನೆ

ವಿಜಯಪುರ: ವಿಜಯಪುರ ಜಿಲ್ಲೆಯಾದ್ಯಂತ ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚು ಮಳೆಯಾಗಿ ರೈತರು ಬೆಳೆದ ಬೆಳೆ ಹಾನಿಯಾಗಿವೆ. ಕೂಡಲೇ ರಾಜ್ಯ ಸರಕಾರ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ರಾಷ್ಟ್ರೀ ಬಸವ ಸೈನ್ಯ ಸಂಘಟನೆಯಿಂದ ಬಸವನ ಬಾಗೇವಾಡಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಂಕರಗೌಡ ಬಿರಾದಾರ, ರೈತರು ಬೆಳೆದ ತೊಗರಿ, ಈರುಳ್ಳಿ, ದ್ರಾಕ್ಷಿ, ಮೆಕ್ಕೆಜೋಳ ಮತ್ತು […]

ಕೆಎಂಎಫ್ ದೇಶದ ನಂ. 1 ಸಂಸ್ಥೆಯಾಗಿ ಬೆಳೆಯಬೇಕು- ನಂದಿನಿ‌ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಮಾಡಿ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕೆಎಂಎಫ್ ದೇಶದ ನಂ. 1 ಸಂಸ್ಥೆಯಾಗಿ ಬೆಳೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ಹಾಲು ಮಹಾಮಂಡಲದ ನೂತನ ಯೋಜನೆಗಳಿಗೆ ಚಾಲನೆ ನೀಡಿದ ಅವರು, ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.   ಕೆಎಂಎಫ್ ಸಂಸ್ಥೆ ಇಡೀ ದೇಶದಲ್ಲಿ ನಂಬರ್ 1 ಸಂಸ್ಥೆಯಾಗಬೇಕು. ಹೊಸ ತಂತ್ರಜ್ಞಾನ ಬಳಸುವ ಮೂಲಕ ಹಾಲು ಉತ್ಪಾದನೆ ಹೆಚ್ಚಿಸಿ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರಬೇಕು. ಉತ್ತರ ಕರ್ನಾಟಕದಲ್ಲಿಯೂ ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ದಕ್ಷಿಣ ಕರ್ನಾಟಕದ ಮಾದರಿಯಲ್ಲಿಯೇ […]