ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯಿಂದ ಪ್ರತಿಭಟನೆ

ವಿಜಯಪುರ: ವಿಜಯಪುರ ಜಿಲ್ಲೆಯಾದ್ಯಂತ ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚು ಮಳೆಯಾಗಿ ರೈತರು ಬೆಳೆದ ಬೆಳೆ ಹಾನಿಯಾಗಿವೆ. ಕೂಡಲೇ ರಾಜ್ಯ ಸರಕಾರ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ರಾಷ್ಟ್ರೀ ಬಸವ ಸೈನ್ಯ ಸಂಘಟನೆಯಿಂದ ಬಸವನ ಬಾಗೇವಾಡಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಂಕರಗೌಡ ಬಿರಾದಾರ, ರೈತರು ಬೆಳೆದ ತೊಗರಿ, ಈರುಳ್ಳಿ, ದ್ರಾಕ್ಷಿ, ಮೆಕ್ಕೆಜೋಳ ಮತ್ತು ಅಜಿವಾನ ಬೆಳೆಗಳು ಅತೀ ಹೆಚ್ಚು ಹೆಚ್ಚು ಮಳೆಯಾಗಿ ಬೆಳೆಗಳು ನೀರಿನಲ್ಲಿ ನಿಂತು ರೋಗ ತಗುಲಿವೆ. ಆದ್ದರಿಂದ ಸರಕಾರ ವಿಜಯಪುರ ಜಿಲ್ಲೆಯನ್ನು ಅತಿವೃಷ್ಟಿ ಜಿಲ್ಲೆಯೆಂದು ಘೋಷಣೆ ಮಾಡಿ ಶೀಘ್ರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದಹರು.

ಈ ಸಂದರ್ಭದಲ್ಲಿ ಮುಖಂಡರಾದ ಸಂಗಮೇಶ್ ಓಲೆಕಾರ, ಬಸವರಾಜ ಹಾರಿವಾಳ ಮಾತನಾಡಿದರು

ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಶಿರಸ್ತೇದಾರ್ ಶ್ರೀನಿವಾಸ್ ಕಲಾಲ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಪ್ರತಿಭಟನೆಯಲ್ಲಿ ಬಸಣ್ಣ ದೇಸಾಯಿ ಕಲ್ಲೂರ, ಉಪಾಧ್ಯಕ್ಷ ಸುನೀಲಗೌಡ ಚಿಕ್ಕೋಂಡ, ತಾಲೂಕು ಅಧ್ಯಕ್ಷ ಸಂಜು ಬಿರಾದಾರ, ಶ್ರೀಕಾಂತ್ ಕೊಟ್ರಶೆಟ್ಟಿ, ಸಂಗಪ್ಪ ವಾಡೆದ, ಗುರುಲಿಂಗ ಬಸರಕೋಡ, ಜಟ್ಟಿಂಗರಾಯ ಮಾಲಗಾರ, ನಿಂಗಪ್ಪ ಅವಟಿ, ಶಂಕರಸಿಂಗ ರಜಪೂತ, ಗುರುರಾಜ ವಂದಾಲ, ವಿನೋದ ಗಬ್ಬೂರ, ಮಹಾಂತೇಶ ಹೆಬ್ಬಾಳ, ವಿಜಯ ರಗಟಿ, ಅಮೃತ ಬಾಗೇವಾಡಿ, ಶ್ರವಣ ಕೊಡೆಕಲಮಠ, ಸಂಗಮೇಶ ಜಾಲಗೇರಿ ಮುಂತಾದವರು ಉಪಸ್ಥಿತರಿದ್ದರು

Leave a Reply

ಹೊಸ ಪೋಸ್ಟ್‌