ಸಿಂದಗಿ ಬೈ ಎಲೆಕ್ಷನ್- ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿ ಚಾಣಾಕ್ಷತೆ ಮೆರೆದ ಜೆಡಿಎಸ್- ಅಭ್ಯರ್ಥಿ ಯಾರು ಗೊತ್ತಾ?

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜೆಡಿಎಸ್ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಚಾಣಾಕ್ಷತೆ ಮೆರೆದಿದೆ.

ಎಂ. ಎಂ. ಬಿ. ಎಡ್. ಪದವೀಧರೆ ಮತ್ತು ಕಲಬುರ್ಗಿಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಯಲ ವಿಭಾಗದಲ್ಲಿ ಪೊಲೀಸ್ ಇನ್ಸಪೆಕ್ಟರ್ ಆಗಿರುವ ಶಕೀಲ್ ಅಂಗಡಿ ಅವರ ಪತ್ನಿ ನಾಜಿಯಾ ಶಕೀಲ್ ಅಹ್ಮದ ಅಂಗಡಿ ಅವರಿಗೆ ಜೆಡಿಎಸಲ್ ಟಿಕೆಟ್ ನೀಡಿದೆ.

ನಾಜೀಯಾ ಶಕೀಲ ಅಹ್ಮದ್ ಅಂಗಡಿ ಅವರ ಮಾವ ದಿ. ಐ. ಬಿ. ಅಂಗಡಿ ಅವರ ಸೊಸೆಯಾಗಿದ್ದಾರೆ. ಐ. ಬಿ. ಅಂಗಡಿ ಅವರು 1983-89ರ ವರಗೆ ಸಿಂದಗಿ ಪುರಸಭೆ ಅಧ್ಯಕ್ಷರಾಗಿದ್ದರು. ಅಲ್ಲದೇ, ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ಸರಕಾರದಲ್ಲಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷಷರಾಗಿದ್ದರು. ಅಷ್ಟೇ ಅಲ್ಲ, ಮಾಜಿ ಮುಖ್ಯಮಂತ್ರಿ ದಿ. ಜೆ. ಎಚ್. ಪಟೇಲ ಸರಕಾರದಲ್ಲಿ ಎಂ ಎಸ್ ಐ ಎಲ್ ಅಧ್ಯಕ್ಷರಾಗಿದ್ದರು. ಈಗ ಇವರ ಸೊಸೆ ನಾಜಿಯಾ ಶಕೀಲ ಅಹ್ಮದ ಅಂಗಡಿ ಅವರಿಗೆ ಟಿಕೆಟ್ ನೀಡುವ ಮೂಲಕ ಜೆಡಿಎಸ್ ವರಿಷ್ಠರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗೆ ಶಾಕ್ ನೀಡಿದ್ದಾರೆ.

ಅಶೋಕ ಮನಗೂಳಿ ಮಾಜಿ ಸಚಿವ ದಿ. ಎಂ. ಸಿ. ಮನಗೂಳಿ ಅವರ ಪುತ್ರರಾಗಿದ್ದು, ತಂದೆ ಜೆಡಿಎಸ್ ನಲ್ಲಿಯೇ ಕೊನೆಯವರೆಗೆ ಇದ್ದರೂ ತಂದೆಯ ನಿಧನದ ಬಳಿಕ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಈಗ ಸಿಂದಗಿ ಮತಕ್ಷೇತ್ರದಲ್ಲಿರುವ ಮುಸ್ಲಿಂ ಮತಗಳನ್ನು ಸೆಳೆದು ಕಾಂಗ್ರೆಸ್ ಅಭ್ಯರ್ಥಿಗೆ ಶಾಕ್ ನೀಡಲು ಜೆಡಿಎಸ್ ವರಿಷ್ಠರು ಪ್ಲಾನ್ ಮಾಡಿದ್ದಾರೆ. ಎಂ. ಸಿ. ಮನಗೂಳಿ ಅವರಿಗೆ ಟಿಕೆಟ್ ನೀಡಿ, ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ನೀಡಿದ್ದರೂ ಅವರ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಸೇರಿರುವುದು ಜೆಡಿಎಸ್ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಮಧ್ಯೆ, ನಾಜಿಯಾ ಶಕೀಲ ಅಹ್ಮದ್ ಅಂಗಡಿ ಸುಶಿಕ್ಷಿತರಾಗಿದ್ದು, ಡಬಲ್ ಗ್ರ್ಯಾಜ್ಯೂವೆಟ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಮುಖಕ್ಕೆ ಮಣೆ ಹಾಕುವ ಮೂಲಕ ಜೆಡಿಎಸ್ ಕಾಂಗ್ರೆಸ್ಸಿಗೆ ಶಾಕ್ ನೀಡಿದೆ.

Leave a Reply

ಹೊಸ ಪೋಸ್ಟ್‌