ಅರಣ್ಯ ಪರಿಸರ ವೀಕ್ಷಣೆ ಗೋಪುರಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಕಿಡಿಗೇಡಿಗಳು

ವಿಜಯಪುರ: ಅರಣ್ಯ ಪರಿಸರ ವೀಕ್ಷಣಾ ಗೋಪುರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಅಟ್ಟಹಾಸ ಮೆರೆದ ಘಟನೆ ವಿಜಯಪುರ ನಗರದ ಹೊರ ವಲಯದ ಭೂತ್ನಾಳ ಕೆರೆಯ ಹಿಂಭಾಗದಲ್ಲಿ ನಡೆದಿದೆ‌.

ಕೋಟಿ ವೃಕ್ಷ ಅಭಿಯಾನದಡಿ ಮಾಜಿ ಸಚಿವ ಎಂ. ಬಿ. ಪಾಟೀಲ‌ ಸಚಿವರಾಗಿದ್ದಾಗ ಕರಾಡೆದೊಡ್ಡಿ ಬಳಿ 500 ಎಕರೆ ಪ್ರದೇಶದಲ್ಲಿ ಅರಣ್ಯ ಬೆಳೆಸಲು ನಾಂದಿ ಹಾಡಿದ್ದರು.

ಸರಕಾರದ ನಾನಾ ಇಲಾಖೆಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಮತ್ತು ರೈತರು ಇದಕ್ಕೆ ಕೈ ಜೋಡಿಸಿದ್ದರು. ವರ್ಷದಿಂದ ವರ್ಷಕ್ಕೆ ಈ ಕೋಟಿ ವೃಕ್ಷ ಅಭಿಯಾನ ಯಶಸ್ಸು ಪಡೆಯುತ್ತಿದೆ.

ಬರಡು ಭೂಮಿಯಲ್ಲಿ ಅರಣ್ಯ ಬೆಳೆಸಿ ಆ ಸುಂದರ ಪರಿಸರ ವೀಕ್ಷಿಸಲು ಅಲ್ಲಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ ವೀಕ್ಷಣೆ ಗೋಪುರಗಳನ್ನು ನಿರ್ಮಿಸಲಾಗಿದೆ. ಇತ್ತೀಚೆಗೆ ನೀರಾವರಿ ಇಲಾಖೆ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗದ ವಿಭಾಗದಿಂದ ಅಲ್ಲಿನ ಕಾವಲುಗಾರರನ್ನು ಹಿಂಪಡೆದಿದ್ದಾರೆ. ಈಗ ಕಾವಲುಗಾರರು ಇರದ ಹಿನ್ನೆಲೆಯಲ್ಲಿ ಕಿಡಿಗೇಡಿಗಳಿ ವೀಕ್ಷಣಾ ಗೋಪುರಕ್ಕೆ ಬೆಂಕಿ ಹಚ್ಚಿದ್ದಾರೆ. ‌ಪರಿಣಾಮ ಆ ವೀಕ್ಷಣಾ ಗೋಪುರ ಬೆಂಕಿಗೆ ಆಹುತಿಯಾಗಿದೆ.

ಈ ವಿಷಯವನ್ನು ಪರಿಸರ ಪ್ರೇಮಿ ಡಾ. ಮಹಾಂತೇಶ ಬಿರಾದಾರ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://m.facebook.com/story.php?story_fbid=4947794561915699&id=100000556126706&scmts=scwsplos

ನಮ್ಮ ಜನರಿಗೆ ಒಳ್ಳೆಯದನ್ನು ಮಾಡಿ ಬಹುಶಃ ಗೊತ್ತಿಲ್ಲ. ಅತ್ಯಂತ ಕಡಿಮೆ ಅರಣ್ಯ ಇಲ್ಲಿದೆ ಎನ್ನುವ ಕಾರಣಕ್ಕೆ ಕೋಟಿ ವೃಕ್ಷ ಅಭಿಯಾನ ಆರಂಭಿಸಿ ಎಲ್ಲೆಡೆ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸುವ ಕೆಲಸವನ್ನು ನಮ್ಮ ಎಂ. ಬಿ. ಪಾಟೀಲರು ಮಂತ್ರಿಯಾಗಿದ್ದಾಗ ಮಾಡಿದ್ದರು.
ಸರ್ಕಾರದ ನಾನಾ ಇಲಾಖೆಗಳು ಸಂಘ ಸಂಸ್ಥೆಗಳು ಸಾರ್ವಜನಿಕರು ರೈತರು ಇದಕ್ಕೆ ಕೈ ಜೋಡಿಸಿದ್ದು ವರ್ಷದಿಂದ ವರ್ಷಕ್ಕೆ ಈ ಅಭಿಯಾನ ಯಶಸ್ಸು ಪಡೆಯುತ್ತಿದೆ.

ಭೂತನಾಳ ಕೆರೆ ಪಕ್ಕದ 5ನೂರು ಎಕರೆ ಪ್ರದೇಶದಲ್ಲಿರುವ ಬರಡು ಭೂಮಿಯಲ್ಲಿ ಅರಣ್ಯ ಬೆಳೆಸಿ ಆ ಸುಂದರ ಪರಿಸರ ವೀಕ್ಷಿಸಲು ಅಲ್ಲಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ.
ಇತ್ತೀಚೆಗೆ ನೀರಾವರಿ ಇಲಾಖೆ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗದ ವಿಭಾಗದಿಂದ ಅಲ್ಲಿನ ಕಾವಲುಗಾರರನ್ನು ಹಿಂಪಡೆದಿದ್ದಾರೆ. ಕಾವಲುಗಾರರು ಇರದಿದ್ದರೆ ನಮ್ಮವರ ಸ್ವೇಚ್ಛೆಗೆ ಮಿತಿಯೇ ಇಲ್ಲ.
ಇಂದು ಸಂಜೆ ಕಿಡಿಗೇಡಿಗಳು ಆ ವೀಕ್ಷಣಾ ಗೋಪುರಕ್ಕೆ ಬೆಂಕಿ ಇಟ್ಟಿದ್ದಾರೆ.. ಸಾಕಲ್ಲ. ಬೇಸಿಗೆಯಲ್ಲಿ ಈ ಅರಣ್ಯಕ್ಕೆ ಬೆಂಕಿ ಇಟ್ಟರೆ ?

ಎಂದು ಡಾ. ಮಹಾಂತೇಶ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌