ಸಿಂದಗಿ, ಹಾನಗಲ ಬೈ ಎಲೆಕ್ಷನ್ ಗೆ ಉಸ್ತುವಾರಿಗಳನ್ನು ನೇಮಕ ಮಾಡಿದ ಬಿಜೆಪಿ- ಯತ್ನಾಳಗೆ ಜವಾಬ್ದಾರಿ, ವಿಜಯೇಂದ್ರಗಿಲ್ಲ ಉಸ್ತುವಾರಿ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಮತ್ತು ಹಾವೇರಿ ಜಿಲ್ಲೆಯ ಹಾನಗಲ ಬೈ ಎಲೆಕ್ಷನ್ ನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಎರಡೂ ಕ್ಷೇತ್ರಗಳಿಗೆ ಸಚಿವರನ್ನೊಳಗೊಂಡ ಉಸ್ತುವಾರಿಗಳನ್ನು ನೇಮಕ ಮಾಡಿದೆ.

ಈ ಉಸ್ತುವಾರಿಗಳ ಪಟ್ಟಿಯಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಮತ್ತು ಬಿ. ಎಸ್. ಯಡಿಯೂರಪ್ಪ ಕಟ್ಟಾ ವಿರೋಧಿ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ, ಈವರೆಗೆ ಬೈ ಎಲೆಕ್ಷನ್ ಗಳಲ್ಲಿ ಒಂದಿಲ್ಲೋಂದು ಕ್ಷೇತ್ರಗಳ ಉಸ್ತುವಾರಿ ನೀಡಲಾಗುತ್ತಿದ್ದ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರಿಗೆ ಯಾವುದೇ ಉಸ್ತುವಾರಿ ನೀಡದಿರುವುದು ಅಚ್ಚರಿ ಮೂಡಿಸಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಗೆ ಬಿಜೆಪಿ ವಹಿಸಿರುವ ಉಸ್ತುವಾರಿಗಳ ವಿವರ ಇಲ್ಲಿದೆ.

ಸಚಿವರಾದ ಗೋವಿಂದ ಕಾರಜೋಳ, ವಿ. ಸೋಮಣ್ಣ, ಸಿ. ಸಿ. ಪಾಟೀಲ, ಶಶಿಕಲಾ ಜೊಲ್ಲೆ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸೋಮನಗೌಡ ಪಾಟೀಲ, ಎ. ಎಸ್. ಪಾಟೀಲ ನಡಹಳ್ಳಿ, ಪಿ. ರಾಜೀವ, ವಿಧಾನ ಪರಿಷತ ಸದಸ್ಯ ಲಕ್ಷ್ಮಣ ಸವದಿ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ ಮತ್ತು ಬಾಬುರಾವ ಚಿಂಚನಸೂರ.

ಹಾವೇರಿ ಜಿಲ್ಲೆಯ ಹಾನಗಲ ಬೈ ಎಲೆಕ್ಷನ್ ಬಿಜೆಪಿ ವಹಿಸಿರುವ ಉಸ್ತುವಾರಿಗಳ ಮಾಹಿತಿ ಇಲ್ಲಿದೆ.

ಸಚಿವರಾದ ಮರುಗೇಶ ನಿರಾಣಿ, ಜೆ. ಸಿ. ಮಾಧುಸ್ವಾಮಿ, ಬಿ. ಸಿ. ಪಾಟೀಲ, ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ ಸದಸ್ಯ ಎನ್. ರವಿಕುಮಾರ, ಶಾಸಕರಾದ ರಾಜುಗೌಡ, ನೆಹರೂ ಓಲೆಕಾರ, ಎಂ. ಚಂದ್ರಪ್ಪ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ.

 

Leave a Reply

ಹೊಸ ಪೋಸ್ಟ್‌