ಉತ್ತರ ಕರ್ನಾಟಕದ ಪ್ರಥಮ ನೋವು ನಿರ್ವಹಣೆ ಕೇಂದ್ರಕ್ಕೆ ಚಾಲನೆ ನೀಡಿ ಹೆಲ್ತ್ ಕಾರ್ಡ್ ಬಿಡುಗಡೆ ಮಾಡಿದ ಮಾಜಿ ಸಚಿವ ಎಂ. ಬಿ. ಪಾಟೀಲ

ವಿಜಯಪುರ: ವಿಜಯಪುರ ಸೇರಿದಂತೆ ಸುತ್ತಮುತ್ತಲಿನ ಏಳೆಂಟು ಜಿಲ್ಲೆಗಳ ಬಡವರಿಗೆ ಕಡಿಮೆ ದರದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಬಿ ಎಲ್ ಡಿ ಇ ಆರೋಗ್ಯ ಕವಚ ಹೆಲ್ತ್ ಕಾರ್ಡ್ ಬಹಳ ಉಪಯೋಗವಾಗಲಿದೆ ಎಂದು ಮಾಜಿ ಸಚಿವ, ಬಬಲೇಶ್ವರ ಕಾಂಗ್ರೆಸ್ ಶಾಸಕ ಮತ್ತು ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ವಿಜಯಪುರದಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಉತ್ತರ ಕರ್ನಾಟಕದ ಪ್ರಥಮ ನೋವು ನಿರ್ವಹಣೆ ಕೇಂದ್ರ ಉದ್ಘಾಟನೆ, ರಕ್ತದಾನ ಶಿಬಿರ ಮತ್ತು “ಬಿ.ಎಲ್.ಡಿ.ಇ ಆರೋಗ್ಯ ಕವಚ”ದ ವತಿಯಿಂದ ಹೆಲ್ತ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದರು.

ಜನ್ಮದಿನದ ಅಂಗವಾಗಿ ಆರೋಗ್ಯ ಸೇವೆ ಒದಗಿಸುವ ಮತ್ತು ಹೆಲ್ತ್ ಕಾರ್ಡ್ ವಿತರಣೆ ಕಾರ್ಯ ತಮಗೆ ಹೆಚ್ಚು ಸಂತಸ ತಂದಿದೆ. ಮೊದಲ ಹಂತದಲ್ಲಿ ಬಿ.ಎಲ್.ಡಿ.ಇ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸಂಸ್ಥೆ ಅಜೀವ ಸದಸ್ಯರಿಗೆ ಹೆಲ್ತ್ ಕಾರ್ಡ್ ವಿತರಿಸುವ ಗುರಿ ಇದೆ. ಎರಡನೇ ಹಂತದಲ್ಲಿ ವಿಜಯಪುರ ಮತ್ತು ಸುತ್ತಮುತ್ತಲಿನ ಏಳೆಂಟು ಜಿಲ್ಲೆಗಳ ನಾನಾ ಕಾರ್ಖಾನೆಗಳು, ಸಂಘ-ಸಂಸ್ಥೆಗಳು ಮತ್ತು ಇತರರಿಗೆ ಹೆಲ್ತ್ ಕಾರ್ಡ್ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳು ಮತ್ತು ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಲಾಭ ರಹಿತವಾಗಿ ಬಡವರಿಗೆ ಆರೋಗ್ಯ ಸೇವೆ ಒದಗಿಸುವ ಮತ್ತು ಇತರ ಆರೋಗ್ಯ ವಿಮೆಗಳಿಗೆ ಮಾದರಿಯಾಗುವ ಯೋಜನೆ ಇದಾಗಲಿ ಎಂಬ ಸದುದ್ದೇಶದಿಂದ “ಬಿ.ಎಲ್.ಡಿ.ಇ ಆರೋಗ್ಯ ಕವಚ” ದಡಿ ಹೆಲ್ತ್ ಕಾರ್ಡ್ ಬಿಡುಗಡೆ ಮಾಡಲಾಗಿದೆ ಎಂದರು.

ನೋವು ನಿರ್ವಹಣಾ ಕೇಂದ್ರ ನಾನಾ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ನೋವು ನಿವಾರಣೆಯಾಗಿ ಆರೋಗ್ಯ ಸುಧಾರಣೆಗೆ ವರದಾನವಾಗಲಿದೆ. ನುರಿತ ತಜ್ಞ ವೈದ್ಯರು ಇಲ್ಲಿದ್ದಾರೆ.  ಇಲ್ಲಿ ಎಲ್ಲ ವೈದ್ಯಕೀಯ ಸೌಲಭ್ಯಗಳಿವೆ. ಇದು ಉತ್ತರ ಕರ್ನಾಟಕದಲ್ಲಿ ಮೊಟ್ಟ ಮೊದಲ ಮತ್ತು ಮಾದರಿ ಕೇಂದ್ರ ಇದಾಗಿದೆ ಎಂದರು.

ಬಿ.ಎಲ್.ಡಿ.ಇ ಡೀಮ್ಡ್ ವಿವಿ ಉತ್ತಮ ಸೇವೆ ಮತ್ತು ಕಾರ್ಯದ ಮೂಲಕ ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ವಿಶ್ವವಿದ್ಯಾಲಯದ ಮಾದರಿಯಲ್ಲಿ ಬೆಳೆಯಲು ಎಲ್ಲರು ಸೇರಿ ಕಾರ್ಯೋನ್ಮುಖರಾಗೋಣ. ಅದೇ ರೀತಿ ತಾಂತ್ರಿಕ ವಿವಿ ಹಾಗೂ ಇತರ ನಿಕಾಯಗಳ ವಿವಿಗಳ ಮಾದರಿಯಲ್ಲಿ ಸಂಸ್ಥೆಯ ಶಾಲಾ-ಕಾಲೇಜುಗಳನ್ನು ಅಭಿವೃದ್ಧಿ ಪಡಿಸಲು ಎಲ್ಲರು ಒಂದು ತಂಡವಾಗಿ ಶ್ರಮಿಸೋಣ ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಉಪಕುಲಪತಿ ಡಾ.ಆರ್.ಎಸ್.ಮುಧೋಳ, ಹೆಲ್ತ್ ಕೇರ್ ಕಾರ್ಡ್ ಸಂಸ್ಥೆಯ ನಿರ್ದೇಶಕ ಬಿ.ಎಂ.ಪಾಟೀಲ(ರಾಹುಲ) ಯೋಜನೆಯಾಗಿದೆ. ಈ ಕಾರ್ಡ್‍ನಿಂದ ಬಡವರಿಗೆ ನೆರವಾಗಲಿದೆ. ರಕ್ತದಾನದ ಶಿಬಿರದಲ್ಲಿ ನಿರೀಕ್ಷೆಗೂ ಮೀರಿ ದಾನಿಗಳು ಬಂದಿದ್ದು, ಎಂ.ಬಿ.ಪಾಟೀಲ್ ಅವರ ಜನಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.

ಡಾ.ಶೋಭಾ ಬೆಣಕಿ, ಲಕ್ಷ್ಮಿ ನಿಟ್ಸೂರೆ, ಮಹಾದೇವ.ಐ. ಮುಖರ್ತಿಹಾಳ, ಪ್ರೊ.ಶ್ರೀಪಾದ ಪೋತದಾರ, ಭಾಸ್ಕರ ಜೋಷಿ, ಶ್ರೀಕಾಂತ ಹಡಪದ ಅವರಿಗೆ ಸಾಂಕೇತಿಕವಾಗಿ ಹೆಲ್ತ್ ಕೇರ್ ಕಾರ್ಡ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ವೈದ್ಯರಾದ ಡಾ.ಅರುಣ ಇನಾಮದಾರ, ಡಾ.ಜೆ.ಜಿ.ಅಂಬೇಕರ, ಡಾ.ವಿಜಯಕುಮಾರ ವಾರದ, ಆಡಳಿತಾಧಿಕಾರಿ ಡಾ.ರಾಘವೇಂದ್ರ ಕುಲಕರ್ಣಿ, ಕೆ.ಜಿ.ಪೂಜಾರಿ, ಹಣಕಾಸು ಅಧಿಕಾರಿ ದೇವೆಂದ್ರ ಅಗರವಾಲ, ಎಂಜಿನಿಯರಿಂಗ ಕಾಲೇಜು ಪ್ರಾಚರ್ಯ ಡಾ.ಅತುಲ್ ಆಯಿರೆ, ಫಾರ್ಮಸಿ ಕಾಲೇಜು ಪ್ರಾಚಾರ್ಯ ಡಾ.ಆರ್.ಬಿ.ಕೊಟ್ನಾಳ, ನಿವೃತ್ತ ಪ್ರಾಚಾರ್ಯ ಎಸ್.ಜಿ.ಗೌಡರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಜೆರಿಯಾಟ್ರಿಕ್ ಕ್ಲಿನಿಕ್‍ನ ಪ್ರಾಧ್ಯಾಪಕ ಡಾ.ಆನಂದ ಅಂಬಲಿ ನಿರೂಪಿಸಿದರು, ಆಡಳಿತಾಧಿಕಾರಿ  ಡಾ.ರಾಘವೇಂದ್ರ ಕುಲಕರ್ಣಿ ಸ್ವಾಗತಿಸಿದರು, ಡಾ.ನೇತ್ರಾ ರೆಡ್ಡಿ ವಂದಿಸಿದರು.

 

Leave a Reply

ಹೊಸ ಪೋಸ್ಟ್‌