ಗುಮ್ಮಟ ನಗರಿಯಲ್ಲಿ ಮಧ್ಯರಾತ್ರಿ ಮತ್ತೆ ಕಂಪಿಸಿದ ಭೂಮಿ- ಆತಂಕದಲ್ಲಿ ಜನತೆ

ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಗುರುವಾರ ಮಧ್ಯರಾತ್ರಿ ವೇಳೆಗೆ ಭೂಕಂಪದ ಅನುಭವವಾಗಿದೆ.

ಮಧ್ಯರಾತ್ರಿ 12.20 ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಬಹುತೇಕ ಜನರು ಈ ಸಂದರ್ಭದಲ್ಲಿ ನಿದ್ದೆಯಲ್ಲಿದ್ದರು.  ಆದರೆ, ಎಚ್ಚರವಿದ್ದವರಿಗೆ ಮತ್ತು ಕಟ್ಟಡಗಳ ಮೊದಲ ಮತ್ತು ಎರಡನೇ ಮಹಡಿಯಲ್ಲಿದ್ದ ಬಹುತೇಕರಿಗೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.

ಭೂಮಿ ಕಂಪಿಸಿದ ಕುರಿತು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.  ಆದರೆ, ಈ ಕಂಪನದ ಕೇಂದ್ರ ಮತ್ತು ತೀವ್ರತೆ ಹಾಗೂ ಇದು ಭೂಕಂಪ ಹೌದು ಅಥವಾ ಅಲ್ಲ ಎಂಬುದರ ಕುರಿತು ವಿಜಯಪುರ ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಇನ್ನಷ್ಟೇ ಮಾಹಿತಿ ನೀಡಬೇಕಿದೆ.

ಕಳೆದ ಹಲವಾರು ದಿನಗಳಿಂದ ಆಗಾಗ ವಿಜಯಪುರ ಜಿಲ್ಲೆಯ ನಾನಾ ಭಾಗಗಳಲ್ಲಿ ಭೂಮಿಯೊಳಗಿನಿಂದ ಸದ್ದು ಹೊರ ಬರುತ್ತಿದ್ದು ಭೂಮಿ ಕಂಪಿಸಿದ ಅನುಭವವೂ ಉಂಟಾಗುತ್ತಿದೆ.  ಆದರೆ, ಇದಕ್ಕೆ ನಿಜವಾದ ಕಾರಣ ಏನು ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.

Leave a Reply

ಹೊಸ ಪೋಸ್ಟ್‌