ಆರ್ ಎಸ್ ಎಸ್ ಬಗ್ಗೆ ಮಾತನಾಡುವುದನ್ನು ಬಿಡಿ- ಬೇಕಿದ್ದರೆ ನಮ್ಮ ಜೊತೆ ಕುಸ್ತಿಗೆ ಬನ್ನಿ- ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಯತ್ನಾಳ ವಾಗ್ದಾಳಿ

ವಿಜಯಪುರ: ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಪ್ರಚಾರ ಸಭೆಯಲ್ಲಿ ಪಾಲ್ಗೋಂಡು ಮಾತನಾಡಿದ ಅವರು, ಕುಮಾರಸ್ವಾಮಿ ಅವರದು ತಾಲಿಬಾನ್ ಪಾರ್ಟಿ.  ಆರ್ ಎಸ್ ಎಸ್ ಬಗ್ಗೆ ಏನು ಬೇಕಾದರೂ ಮಾತನಾಡುತ್ತಾರೆ.  ಆರ್ ಎಸ್ ಎಸ್ ನವರೇನು ಎಕೆ-47 ಕೊಟ್ಟು ಭಯೋತ್ಪಾದಕರನ್ನು ರೆಡಿ ಮಾಡಿದ್ದಾರಾ? ಎಂದು ಪ್ರಶ್ನಿಸಿದ ಅವರು, ಆರ್ ಎಸ್ ಎಸ್ ದೇಶಭಕ್ತಿಯ. ಪಾಠ ಮಾಡುತ್ತದೆ.  ಸಂಸ್ಕಾರ ಮಾಡುತ್ತದೆ.  ದೇಶದ ಸಂಸ್ಕೃತಿ ಬಗ್ಗೆ ಹೇಳುತ್ತದೆ.  ಸುಮ್ಮನೆ ಯಾಕೆ ಆರ್ ಎಸ್ ಎಸ್ ಬಗ್ಗೆ ಮಾತನಾಡುತ್ತೀರೀ? ಬೇಕಿದ್ದರೆ ಬಿಜಿಪಿಯ ಬಗ್ಗೆ, ನಮ್ಮ ಬಗ್ಗೆ ಮಾತನಾಡಿ.  ಬೇಕಿದ್ದರೆ ನಮ್ಮ ಬಗ್ಗೆ ಮಾತನಾಡಿ, ಲಕ್ಷ್ಮಣ ಸವದಿ ಅವರ ಬಗ್ಗೆ ಮಾತನಾಡಿ.  ತಾಕತ್ತು ಇದ್ದರೆ ನಮ್ಮ ಜೊತೆಗೆ ಕುಸ್ತಿಗೆ ಬನ್ನಿ.  ಅದನ್ನು ಬಿಟ್ಟು ಆರ್ ಎಸ್ ಎಸ್ ಬಗ್ಗೆ ಯಾಕೆ ಚಕಾರ ಎತ್ತುತ್ತೀರಿ?  ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ದಿಕ್ಕು ದಿವಾಳಿಯಾಗಿ ಹೋಗಿದೆ.  ಬಿಜೆಪಿಯಲ್ಲಿ ವಿಶ್ವನಾಯಕ ನರೇಂದ್ರ ಮೋದಿ ಇದ್ದರೆ ಕಾಂಗ್ರೆಸ್ಸಿನಲ್ಲಿ ವಿಶ್ವದ ಜೋಕರ ರಾಹುಲ್ ಗಾಂಧಿ ಇದ್ದಾರೆ.  ಬಟಾಟಿ ಹಾಕಿ ಬಂಗಾರ  ಮಾಡುತ್ತೇನೆ ಅಂತಾರೆ.  ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ ಮತ್ತು ಮಾಜಿ ಸಿಎಂ ಎಸ್.ಸಿದ್ಧರಾಮಯ್ಯ ರಾಹುಲ್ ಜೀ ಅಂತಾರೆ.  ಅವರಿಬ್ಬರಲ್ಲಿಯೂ ತಾಳ-ಮೇಳ ಇಲ್ಲ.  ಸಿದ್ಧರಾಮಯ್ಯ ಅವರನ್ನು ಮುಗಿಸಲು ಡಿ. ಕೆ. ಶಿವಕುಮಾರ ಪ್ರಯತ್ನಿಸುತ್ತಿದ್ರೆ, ಡಿ. ಕೆ. ಶಿವಕುಮಾರ ಅವರನ್ನು ಮುಗಿಸಲು ಸಿದ್ಧರಾಮಯ್ಯ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಪಂಜಾಬಿನಲ್ಲಿ ಕಾಂಗ್ರೆಸ್ ಕಥೆ ಮುಗಿದಿದೆ.  ಛತ್ತಿಸಗಢ ಕೂಡ ಕೈ ತಪ್ಪಲಿದೆ.  ರಾಜಸ್ಥಾನದಲ್ಲಿಯೂ ಕಾಂಗ್ರೆಸ್ ಅಂತ್ಯವಾಗಲಿದೆ. ಎಲ್ಲೂ ಕಾಂಗ್ರೆಸ್ ಉಳಿಯುವುದಿಲ್ಲ.  ಗ್ರಾಮ ಪಂಚಾಯಿತಿಯಲ್ಲಿಯೂ ಆರಿಸಿ ಬರದಷ್ಟು ಕಾಂಗ್ರೆಸ್ ದುರ್ಬಲವಾಗಿದೆ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

ಪೆಟ್ರೋಲ್ ಮತ್ತು ಡಿಸೈಲ್ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ.  ಮೋದಿ ಪ್ರಧಾನಿಯಾಗಿದ್ದರಿಂದಲೇ ನಮ್ಮ ದೇಶ ಉಳಿದಿದೆ.  ಪ್ರತಿಪಕ್ಷದವರು ತೈಲ ಬೆಲೆ ಏರಿಕೆ ಖಂಡಿಸಿ ಹೋರಾಟ ಮಾಡುತ್ತಾರೆ.  ಎತ್ತಿನ ಗಾಡಿ ಏರಿ ಪ್ರತಿಭಟನೆ ಮಾಡುತ್ತಾರೆ.  ಇವರು ಎಂದಾದರೂ ಎತ್ತಿನ ಗಾಡಿಯಲ್ಲಿ ಕುಳಿತಿದ್ದಾರಾ? ಬೆಂಚ್ ಕಾರಲ್ಲಿ ಅಡ್ಡಾಡುತ್ತಾರೆ.  ಗಂಡಸ್ಥನ ಇದ್ದರೆ ಮೋದಿ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿ ಎಂದು ವಾಗ್ದಾಳಿ ಅವರು ನಡೆಸಿದರು.

Leave a Reply

ಹೊಸ ಪೋಸ್ಟ್‌