ಬೈ ಎಲೆಕ್ಷನ್ ನಲ್ಲಿ ಮತದಾರರು ಬಿಜೆಪಿ ದುರಾಡಳಿತಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ- ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ

ವಿಜಯಪುರ: ಬಿಜೆಪಿಯ ದುರಾಡಳಿತಕ್ಕೆ ಮತದಾರರು ಬೈ ಎಲೆಕ್ಷನ್ ನಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಯಾವ ವರ್ಗಕ್ಕೂ ಅನುಕಾಲವಾಗಿಲ್ಲ.  ಇದನ್ನು ಗಮನದಲ್ಲಿಟ್ಟುಕೊಂಡಿರುವ ಬೈ ಎಲೆಕ್ಷನ್ ನಡೆಯುತ್ತಿರುವ ಎರಡು ಕ್ಷೇತ್ರಗಳ ಜನ ತಕ್ಕ ಉತ್ತರ ನೀಡಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾತನಾಡಿದ ಅವರು, ಸಿಂದಗಿ ಮತ್ತು ಹಾನಗಲ ಮತದಾರರ ಮೇಲೆ ವಿಶ್ವಾಸ ಇಟ್ಟಿದ್ದೇವೆ.  ಅವರ ಭಾವನೆ, ಅವರ ನೋವು, ಅವರಿಗೆ ಆದಂತ ಅನ್ಯಾಯ, ಅವರ ಆಕ್ರೋಶ ತೀರಿಸಲು ಒಂದು ದೊಡ್ಡ ಅವಕಾಶ ಇದಾಗಿದೆ.  ಕಾಂಗ್ರೆಸ್ಸಿನ ಇಬ್ಬರೂ ಅಭ್ಯರ್ಥಿಗಳು ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬ ಆತ್ಮ ವಿಶ್ವಾಸವಿದೆ.  ಎರಡೂ ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ.  ಎಲ್ಲ ವರ್ಗದವರು ಒಪ್ಪಿದ್ದಾರೆ.  ಸಮಾಜ ಒಪ್ಪಿಕೊಂಡಿದೆ.  ಜೊತೆಗೆ ಇಲ್ಲಿ ಪಕ್ಷಕ್ಕಿಂತಲೂ ಹೆಚ್ಚಾಗಿ ಎಲ್ಲರೂ ಕೂಡ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.  ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ 3ನೇ ಸ್ಥಾನ ಪಡೆದಿದ್ದರು.  ಆದರೆ, ಈ ಬಾರಿ ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಂ.ಸಿ. ಮನಗೂಳಿ ಸಾಯುವುದ್ದಕಿಕಂದ 15 ದಿನಗಳ ಮುಂಚಿತವಾಗಿ ನನ್ನ ಮತ್ತು ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ನನ್ನ ಮಗನನ್ನು ನಿಮ್ಮ ವಶಕ್ಕೆ ನೀಡುತ್ತಿದ್ದೇನೆ ಎಂದು ಹೇಳಿ ಹೋಗಿದ್ದರು.  ಯಾಕೆ ಅವರ ಬಾಯಿಂದ ಈ ಮಾತು ಬಂತೋ ಗೊತ್ತಿಲ್ಲ.  ನನಗೆ ಬಹಳ ಆತ್ಮೀಯರಾಗಿದ್ದರು.  ಯಾವುದೇ ಪಕ್ಷದಲ್ಲಿದ್ದರೂ ಬಹಳ ಗೌರವದಿಂದ. ಬಹಳ ಸಜ್ಜನಿಕೆಯಿಂದ ನಡೆದುಕೊಳ್ಳುತ್ತಿದ್ದರು.  ಹೀಗಾಗಿ ಅವರ ಮಾತಿನಂತೆ ನಾವೆಲ್ಲ ಸೇರಿ ಒಮ್ಮತದ ತೀರ್ಮಾನದಿಂದ ಅಶೋಕ ಮನಗೂಳಿ ಅವರಿಗೆ ಟಿಕೆಟ್ ನೀಡಿದ್ದೇವೆ ಎಂದು ಅವರು ತಿಳಿಸಿದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಇಲ್ಲಿ ಸೇರಿದ ಜನಸಾಗರ ಯಾವ ರೀತಿ ಉತ್ಸಾಹದಿಂದ ಭಾಗವಹಿಸಿದ್ದರು ಎಂಬುದನ್ನು ಎಲ್ಲರೂ ನೋಡಿದ್ದಾರೆ.  ಅದರಲ್ಲೂ ಯುವಕರು ಸೇರಿದಂತೆ ಎಲ್ಲ ವರ್ಗದ ಜನ ಸ್ವಯಂ ಪ್ರೇರಿತರಾಗಿ ಬಂದು ನಾಮಪತ್ರ ಸಲ್ಲಿಸುವಾಗ ಆಶೀರ್ವಾದ ಮಾಡಿದ್ದಾರೆ.  ಈ ಚುನಾವಣೆ ಈ ಸರಕಾರದ ವೈಫಲ್ಯ, ಅನುಭವಿಸುತ್ತಿರುವ ನೋವು ಹೇಳಿಕೊಳ್ಳಲು ಒಂದು ಅವಕಾಶ ಬಿಜೆಪಿ ಆಡಳಿತದಲ್ಲಿ ಕೊರೊನಾ ಸಂದರ್ಭದಲ್ಲಿ ತೋರಿದ ನಿರ್ಲಕ್ಷ್ಯಕ್ಕೆ ಚತ್ತ ಪ್ರತ್ಯುತ್ತರ ನೀಡಲು ಅವಕಾಶವಾಗಿದೆ ಎಂದು ಡಿ. ಕೆ. ಶಿವಕುಮಾರ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ, ವಿಧಆನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ, ಮಾಜಿ ಸಚಿವ ಎಂ. ಬಿ. ಪಾಟೀಲ, ಶಿವಾನಂದ ಪಾಟೀಲ, ಶಾಸಕ ಯಶವಂತರಾಯಗೌಡ ಪಾಟೀಲ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌