ವಿಧಾನ ಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಎರಡು ಹೋಳಾದರೆ ಅಚ್ಚರಿಯಿಲ್ಲ- ಸಚಿವ ಕೆ. ಎಸ್. ಈಶ್ವರಪ್ಪ

ವಿಜಯಪುರ: ಮುಂಬರುವ ವಿಧಾನ ಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಎರಡು ಹೋಳಾದರೆ ಅಚ್ಚರಿಯಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಸಿಂದಗಿ ಮತ್ತು ಹಾವೇರಿ ಜಿಲ್ಲೆಯ ಹಾನಗಲ ಬೈ ಎಲೆಕ್ಷನ್ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪ ಚುನಾವಣೆ ಬಳಿಕ ಕಾಂಗ್ರೆಸ್ ಒಡೆದು ಎರಡು ಹೋಳಾಗಲಿದೆ ಎಂದು ಕಾಂಗ್ರೆಸ್ ಬಗ್ಗೆ ಭವಿಷ್ಯ ನುಡಿದ ಕೆ. ಎಸ್. ಈಶ್ವರಪ್ಪ, ಕಾಂಗ್ರೆಸ್ ನಲ್ಲಿ ಡಿಕೆಶಿ ಒಂದು ಕಡೆ ಮತ್ತು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಇನ್ನೋಂದು ಕಡೆ ಎಳೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕರ್ನಾಟಕ ರಾಜ್ಯದ ಜನ ಸಿಂದಗಿ ಮತ್ತು ಹಾನಗಲ ಬೈ ಎಲೆಕ್ಷನ್ ಬಗ್ಗೆ ಗಮನ ಹರಿಸುತ್ತಿದ್ದಾರೆ.  ಬಿಜೆಪಿ ಸಂಘಟನೆಯ ಏಕತೆ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ನಡೆದಿರುವ ಅಭಿವೃದ್ಧಿ ಕಾರ್ಯಗಳು, ವಿಶ್ವ ನಾಯಕ ನರೇಂದ್ರ ಮೋದಿ ಅವರ ಬಗ್ಗೆ ಇರುವ ವಿಶ್ವಾಸ, ಎರಡೂ ಕ್ಷೇತ್ರಗಳಲ್ಲಿರುವ ಅಭ್ಯರ್ಥಿಗಳ ಮೇಲಿರುವ ವಿಶ್ವಾಸ, ಬಿಜೆಪಿ ಭೂತ್ ಮಟ್ಟದ ಕಾರ್ಯಕರ್ತರ ಸಂಘಟನೆ ಬಗ್ಗೆ ತಿಳಿದುಕೊಂಡಿದ್ದಾರೆ.  ಮಹಾ ಜನತೆ ಬಿಜೆಪಿ ಜೊತೆಗಿದ್ದಾರೆ ಎಂಬುದು ವಿಜಯಪುರ ಜಿಲ್ಲೆಯ ಸಿಂದಗಿ ಮತ್ತು ಹಾವೇರಿ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸಾಬೀತು ಪಡಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಂತೆ ಕಾಂಗ್ರೆಸ್ಸನ್ನೂ ಜನ ಹೋಲಿಕೆ ಮಾಡುತ್ತಾರೆ.  ಕಾಂಗ್ರೆಸ್ಸಿನಲ್ಲಿ ಡಿ. ಕೆ. ಶಿವಕುಮಾರ ಮತ್ತು ಎಸ್. ಸಿದ್ಧರಾಮಯ್ಯ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಎತ್ತುಗಳನ್ನು ಎಳೆದುಕೊಂಡು ಹೋಗುತ್ತಿದ್ದಾರೆ.  ಕಾಂಗ್ರೆಸ್ಸಿನ ಪರಿಸ್ಥಿತಿ ಕಾಂಗ್ರೆಸ್ಸಿನ ಕಾರ್ಯಕರ್ತರಿಗೆ ಆಶ್ಚರ್ಯ ಮೂಡಿಸುತ್ತಿದೆ.  ಮೊನ್ನೆಯವರೆಗೂ ನಾನು ಸಿಎಂ, ನಾನು ಸಿಎಂ ಎಂದು ಬಡಿದಾಡಿಕೊಂಡಿದ್ದರು.  ದೆಹಲಿಯಲ್ಲಿ ಅವರನ್ನು ಕರೆದ ಕಾಂಗ್ರೆಸ್ ಹಿರಿಯ ನಾಯಕರು ಬೈದು ಬುದ್ದಿವಾದ ಹೇಳಿದ ಮೇಲೆ ಡಿ. ಕೆ. ಶಿವಕುಮಾರ ಮತ್ತು ಎಸ್. ಸಿದ್ಧರಾಮಯ್ಯ ವಿಧಿಯಿಲ್ಲದೇ ಒಟ್ಟಾಗಿ ಹೋಗುತ್ತಿದ್ದಾರೆ.  ಇಡೀ ರಾಜ್ಯದಲ್ಲಿ ಸಿದ್ಧರಾಮಯ್ಯ ನವರದು ಒಂದು ಗುಂಪು.  ಡಿ. ಕೆ. ಶಿವಕುಮಾರ ಅವರದು ಒಂದು ಗುಂಪುಗಳಿವೆ. ನನಗನಿಸುತ್ತೆ, ಬರುವ ವಿಧಾನ ಸಭೆ ಚುನಾವಣೆಗೂ ಮುಂಚೆಯೇ ಕಾಂಗ್ರೆಸ್ ಎರಡು ಹೋಳಾದರೂ ಆಶ್ಯರ್ಯವಿಲ್ಲ.  ಕಾಂಗ್ರೆಸ್ಸಿನ ಲ್ಪಲಿ ಗುಂಪುಗಾರಿಕೆ ಕಾಂಗ್ರೆಸ್ಸಿನಲ್ಲಿ ಮಿತಿ ಮೀರಿದೆ.   ಹೋಗಿದೆ.  ಸಂಘಟನೆ ಪ್ರಶ್ನೆಯೇ ಇಲ್ಲ.  ಅಭಿವೃದ್ಧಿ ತೋರಿಸಬೇಕೆಂದರೆ ಇಡೀ ದೇಶದಲ್ಲಿ ಕಾಂಗ್ರೆಸ್ ಇಲ್ಲ.  ಕರ್ನಾಟಕ ರಾಜ್ಯದಲ್ಲಿ ಅವರು ಸೋತಿದ್ದಾರೆ.  ಏನು ಅಭಿವೃದ್ಧಿ ತೋರಿಸುತ್ತಾರೆ? ಅಭಿವೃದ್ಧಿ, ನಾಯಕತ್ವ ಮತ್ತು ಸಂಘಟನೆ ಎಲ್ಲವೂ ಬಿಜೆಪಿಯಲ್ಲಿ ಚನ್ನಾಗಿದೆ.  ಈ ಎರಡು ಬೈ ಎಲೆಕ್ಷನ್ ಗೆದ್ದು, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲು ಸಿಂದಗಿ ಮತ್ತು ಹಾನಗಲ್ ಬೈ ಎಲೆಕ್ಷನ್ ಫಲಿತಾಂಶ ಸ್ಪೂರ್ತಿ ನೀಡುತ್ತದೆ ಎಂದು ಅವರು ತಿಳಿಸಿದರು.

ಐಟಿ ಧಾಳಿ ಕುರಿತು ಪ್ರತಿಕ್ರಿಯೆ

ಐಟಿ ಧಾಳಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ಸಿನವರ ಮನೆ ಮೇಲೆ ರೇಡ್ ಆದಾಗ ಆ ಪಕ್ಷದವರು ಕಾಂಗ್ರೆಸ್ಸಿಗರನ್ನು ಹುಡುಕಿ ಹುಡುಕಿ ರೇಡ್ ಮಾಡಲಾಗುತ್ತಿದೆ.  ಬಿಜೆಪಿಯವರನ್ನು ಮುಟ್ಟುತ್ತಿಲ್ಲ ಎಂದು ಅವರೇ ಆರೋಪಿಸಿದ್ದರು.  ಈಗ, ಕಾಂಗ್ರೆಸ್ಸಿನವರಿಗೆ ಉತ್ತರವೇ ಇಲ್ಲ.  ಐಟಿ ಸಂಸ್ಥೆ ಸ್ವಾಯತ್ತ ಸಂಸ್ಥೆ.  ಯಾರ ನಿಯಂತ್ರಣದಲ್ಲಿಲ್ಲ.  ಅವರಿಗೆ ಅನುಮಾನ ಬಂದವರ ಮೇಲೆ ಧಾಳಿ ನಡೆಸುತ್ತಾರೆ.  ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ.  ಯಾರು ತಪ್ಪಿತಸ್ಥರಿರುತ್ತಾರೆ ಅವರಿಗೆ ಶಿಕ್ಷೆಯಾಗುತ್ತೆ.  ತಪ್ಪಿತಸ್ಥರಲ್ಲದವರು ಬಿಡುಗಡೆಯಾಗಿ ಬರುತ್ತಾರೆ.  ಇಲ್ಲಿ ರೇಡ್ ಆಗಿರುವುದಕ್ಕೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ.  ಪ್ರತಿಪಕ್ಷದವರು ಆಪಾದನೇ ಮಾಡಲೇ ಇದ್ದಾರೆ.  ಅವರು ವಿಜಯೇಂದ್ರ ಮತ್ತು ಯಡಿಯೂರಪ್ಪ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು ಐಟಿಯನ್ನು ಹೋಗಳುತ್ತಾರಾ ಎಂದು ಪ್ರಶ್ನಿಸದ ಕೆ. ಎಸ್. ಈಶ್ವರಪ್ಪ ಅವರು, ಕರ್ನಾಟಕ ರಾಜ್ಯದ ಜನ ಸಿಂದಗಿ ಮತ್ತು ಹಾನಗಲ ಬೈ ಎಲೆಕ್ಷನ್ ಬಗ್ಗೆ ಗಮನ ಹರಿಸುತ್ತಿದ್ದಾರೆ.  ಬಿಜೆಪಿ ಸಂಘಟನೆಯ ಏಕತೆ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ನಡೆದಿರುವ ಅಭಿವೃದ್ಧಿ ಕಾರ್ಯಗಳು, ವಿಶ್ವ ನಾಯಕ ನರೇಂದ್ರ ಮೋದಿ ಅವರ ಬಗ್ಗೆ ಇರುವ ವಿಶ್ವಾಸ, ಎರಡೂ ಕ್ಷೇತ್ರಗಳಲ್ಲಿರುವ ಅಭ್ಯರ್ಥಿಗಳ ಮೇಲಿರುವ ವಿಶ್ವಾಸ, ಬಿಜೆಪಿ ಭೂತ್ ಮಟ್ಟದ ಕಾರ್ಯಕರ್ತರ ಸಂಘಟನೆ ಬಗ್ಗೆ ತಿಳಿದುಕೊಂಡಿದ್ದಾರೆ.  ಮಹಾ ಜನತೆ ಬಿಜೆಪಿ ಜೊತೆಗಿದ್ದಾರೆ ಎಂಬುದು ವಿಜಯಪುರ ಜಿಲ್ಲೆಯ ಸಿಂದಗಿ ಮತ್ತು ಹಾವೇರಿ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸಾಬೀತು ಪಡಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಂತೆ ಕಾಂಗ್ರೆಸ್ಸನ್ನೂ ಜನ ಹೋಲಿಕೆ ಮಾಡುತ್ತಾರೆ.  ಕಾಂಗ್ರೆಸ್ಸಿನಲ್ಲಿ ಡಿ. ಕೆ. ಶಿವಕುಮಾರ ಮತ್ತು ಎಸ್. ಸಿದ್ಧರಾಮಯ್ಯ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಎತ್ತುಗಳನ್ನು ಎಳೆದುಕೊಂಡು ಹೋಗುತ್ತಿದ್ದಾರೆ.  ಕಾಂಗ್ರೆಸ್ಸಿನ ಪರಿಸ್ಥಿತಿ ಕಾಂಗ್ರೆಸ್ಸಿನ ಕಾರ್ಯಕರ್ತರಿಗೆ ಆಶ್ಚರ್ಯ ಮೂಡಿಸುತ್ತಿದೆ.  ಮೊನ್ನೆಯವರೆಗೂ ನಾನು ಸಿಎಂ, ನಾನು ಸಿಎಂ ಎಂದು ಬಡಿದಾಡಿಕೊಂಡಿದ್ದರು.  ದೆಹಲಿಯಲ್ಲಿ ಅವರನ್ನು ಕರೆದ ಕಾಂಗ್ರೆಸ್ ಹಿರಿಯ ನಾಯಕರು ಬೈದು ಬುದ್ದಿವಾದ ಹೇಳಿದ ಮೇಲೆ ಡಿ. ಕೆ. ಶಿವಕುಮಾರ ಮತ್ತು ಎಸ್. ಸಿದ್ಧರಾಮಯ್ಯ ವಿಧಿಯಿಲ್ಲದೇ ಒಟ್ಟಾಗಿ ಹೋಗುತ್ತಿದ್ದಾರೆ.  ಇಡೀ ರಾಜ್ಯದಲ್ಲಿ ಸಿದ್ಧರಾಮಯ್ಯ ನವರದು ಒಂದು ಗುಂಪು.  ಡಿ. ಕೆ. ಶಿವಕುಮಾರ ಅವರದು ಒಂದು ಗುಂಪುಗಳಿವೆ. ನನಗನಿಸುತ್ತೆ, ಬರುವ ವಿಧಾನ ಸಭೆ ಚುನಾವಣೆಗೂ ಮುಂಚೆಯೇ ಕಾಂಗ್ರೆಸ್ ಎರಡು ಹೋಳಾದರೂ ಆಶ್ಯರ್ಯವಿಲ್ಲ.  ಇದು ಕಾಂಗ್ರ್ಸಿನ ಪರಿಸ್ಥಿತಿ. ಗುಂಪುಗಾರಿಕೆ ಕಾಂಗ್ರೆಸ್ಸಿನಲ್ಲಿ ಮಿತಿ ಮೀರಿ ಹೋಗಿದೆ.  ಸಂಘಟನೆ ಪ್ರಶ್ನೆಯೇ ಇಲ್ಲ.  ಅಭಿವೃದ್ಧಿ ತೋರಿಸಬೇಕೆಂದರೆ ಇಡೀ ದೇಶದಲ್ಲಿ ಕಾಂಗ್ರೆಸ್ ಇಲ್ಲ.  ಕರ್ನಾಟಕ ರಾಜ್ಯದಲ್ಲಿ ಅವರು ಸೋತಿದ್ದಾರೆ.  ಏನು ಅಭಿವೃದ್ಧಿ ತೋರಿಸುತ್ತಾರೆ? ಅಭಿವೃದ್ಧಿ, ನಾಯಕತ್ವ ಮತ್ತು ಸಂಘಟನೆ ಎಲ್ಲವೂ ಬಿಜೆಪಿಯಲ್ಲಿ ಚನ್ನಾಗಿದೆ.  ಈ ಎರಡು ಬೈ ಎಲೆಕ್ಷನ್ ಗೆದ್ದು, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲು ಸಿಂದಗಿ ಮತ್ತು ಹಾನಗಲ್ ಬೈ ಎಲೆಕ್ಷನ್ ಫಲಿತಾಂಶ ಸ್ಪೂರ್ತಿ ನೀಡುತ್ತದೆ ಎಂದು ಅವರು ತಿಳಿಸಿದರು.

ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ಅಸಮಾಧಾನದ ಪ್ರಶ್ನೆಯೇ ಇಲ್ಲ.  ಯಾರಾದರೂ ಕಾರ್ಯಕರ್ತರಲ್ಲಿ ಬೇಸರವಿದ್ದರೆ, ಅವರ ಬಳಿ ಹೋಗಿ ಅಣ್ಣ-ತಮ್ಮಂದಿರ ರೂಪದಲ್ಲಿ ಕುಳಿತುಕೊಂಡು ಸಿದ್ಧಾಂತ ವಿಚಾರದಲ್ಲಿ ಚರ್ಚೆ ಮಾಡುತ್ತೇವೆ.  ವೈಯಕ್ತಿಕವಾಗಿ ನನಗೇ ಟಿಕೆಟ್ ಬೇಕು ಎಂದು ಹೇಳುವುದಿಲ್ಲ.  ಎಲ್ಲರೂ ಈಗ ಪ್ರಚಾರಕ್ಕೆ ಇಳಿದಿದ್ದಾರೆ.  ಗುಂಪುಗಾರಿಕೆ ಎಂಬುದು ಬಿಜೆಪಿಯಲ್ಲಿ ಬರುವುದೇ ಇಲ್ಲ ಎಂದು ಕೆ. ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ವಿ. ಸೋಮಣ್ಣ, ಗೋವಿಂದ ಕಾರಜೋಳ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌