ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರಕ್ಕೆ ಅ. 30 ರಂದು ಬೈ ಎಲೆಕ್ಷನ್ ನಡೆಯುತ್ತಿದ್ದು, ಇದಕ್ಕಾಗಿ ವಿಜಯಪುರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಪಂಚಾಯಿತಿ ವತಿಯಿಂದ ಸ್ವೀಪ್ ಯೋಜನೆ ಅಂಗವಾಗಿ ಮತದಾರರ ಜಾಗೃತಿ ಜಾಥಾ ನಡೆಸಲಾಯಿತು. ಸಿಂದಗಿ ಮತಕ್ಷೇತ್ರದ ನಾನಾ ಗ್ರಮಾಗಳಲ್ಲಿ ನಡೆದ ಈ ಜಾಥಾದಲ್ಲಿ ಮತದಾನದ ಮಹತ್ವ ಮತ್ತು ಮತದಾನದ ಹಕ್ಕಿನ ಕುರಿತು ಕೈಯಲ್ಲಿ ಭಿತ್ತಿಪತ್ರ ಹಿಡಿದು ಯುವಕರು ಪಾಲ್ಗೋಂಡು ಜಾಗೃತಿ ಮೂಡಿಸಿದರು.