ಆಹಾರ ಇಲಾಖೆ ಸಿಬ್ಬಂದಿ ಧಾಳಿ- ನಕಲಿ ಬಯೋ ಡೀಸಲ್ ಮಾರಾಟ ಅಡ್ಡೆ ಪತ್ತೆ

ವಿಜಯಪುರ: ವಿಜಯಪುರ ಆಹಾರ ಇಲಾಖೆ ಅಧಿಕಾರಿಗಳು ಭರ್ಜರಿ ಧಾಳಿ ನಡೆಸಿದ್ದು, ನಕಲಿ ಬಯೋ ಡೀಸೆಲ್ ಮಾರಾಟ ಮಾಡುತ್ತಿದ್ದ ಅಡ್ಡೆಯನ್ನು ಪತ್ತೆ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಝಳಕಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52ರಲ್ಲಿ ಈ ಧಾಳಿ ನಡೆದಿದೆ.  ಈ ಪ್ರದೇಶದಲ್ಲಿ ಶೆಡ್ ನಲ್ಲಿ ನಕಲಿ ಬಯೋ ಡಿಸೈಲ್ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಆಹಾರ ಇಲಾಖೆ ಅಧಿಕಾರಿಗಳ ತಂಡ ಈ ಧಾಳಿ ನಡೆಸಿದೆ.  ಅಧಿಕಾರಿಗಳ ತಂಡ ಧಾಳಿ ನಡೆಸುತ್ತಿದ್ದಂತೆ ನಕಲಿ ಬಯೋ ಡೀಸೆಲ್ ಮಾರಾಟ ಮಾಡುತ್ತಿದ್ದವರು ಪರಾರಿಯಾಗಿದ್ದಾರೆ.

ವಿಜಯಪುರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಎಸ್. ವೈ. ಮಾರಿಹಾಳ ಮತ್ತು ಆಹಾರ ಇಲಾಖೆ ನಿರೀಕ್ಷಕ ಅಮರೇಶ ತಾಂಡೂರ ಅವರ ನೇತೃತ್ವದಲ್ಲಿ ಈ ಧಾಳಿ ನಡೆಸಲಾಗಿದೆ.  ಐಓಸಿ ಮತ್ತು ಎಚ್ ಪಿ ಸಿ, ಬಿಪಿಎಲ್ ತೈ ಕಂಪನಿಗಳ ಅಧಿಕಾರಿಗಳೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಲಸಂಗಿ ಗ್ರಾಮದ ಅನಂತ ರುದ್ರಪ್ಪ ಪೋದ್ದಾರ ಎಂಬುವರ ತೋಟದ ಜಾಗದಲ್ಲಿ ಈ ಶೆಡ್ ಇಟ್ಟುಕೊಂಡು ಖದೀಮರು ನಕಲಿ ಬಯೋ ಡೀಸೆಲ್ ಮಾರಾಟ ಮಾಡುತ್ತಿದ್ದರು.  ಈ ಸಂದರ್ಭದಲ್ಲಿ ನಕಲಿ ಬಯೋ ಡೀಸೆಲ್ ಮಾರಾಟ ಮಾಡಲು ಉಪಯೋಗಿಸಲಾಗುತ್ತಿದ್ದ ನಾನಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.  ಈ ವಸ್ತುಗಳಲ್ಲಿ 1 HP ಪಂಪಸೆಟ್, 3 ಬ್ಯಾರಲ್, ಜನರೇಟರ್, ಚಾರ್ಜಿಂಗ್ ಬ್ಯಾಟರಿ, ಡೀಸೆಲ್ ಹಾಕಲು ಬಳಸುವ 20 ಲೀ. ಸಾಮರ್ಥ್ಯದ ಮೂರು ಕ್ಯಾನ, ಸುಮಾರು 10000 ಲೀ. ಸಾಮರ್ಥ್ಯದ ಮತ್ತು ನೆಲದಲ್ಲಿ ಹುಗಿಯಲಾಗಿರುವ ಡೀಸೆಲ್ ಟ್ಯಾಂಕ್ ಮತ್ತು ಸುಮಾರು ರೂ. 5 ಅಥವಾ ರೂ. 6 ಲಕ್ಷ ಮೌಲ್ಯದ  ನಕಲಿ ಬಯೋ ಡಿಸೇಲ್ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಝಳಕಿ ಪೋಲೀಸ್ ಠಾಣೆಯ ಎ ಎಸ್ ಐ ಅರವತ್ತಿ, ಪೊಲೀಸ್ ಪೇದೆಗಳಾದ ಗೋಡಕರ, ಅರವಿಂದ ಮಾದರ ಮುಂತಾದವರು ಉಪಸ್ಥಿತರಿದ್ದರು.

 

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಝಳಕಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಧಾಳಿ ನಡೆದಿದೆ.

Leave a Reply

ಹೊಸ ಪೋಸ್ಟ್‌