ಬಿರುಗಾಳಿ ಸಹಿತ ಮಳೆಗೆ ಇಳೆಗುರುಳಿದ ಬೆಳೆ- ಸಿಹಿಯ ನಿರೀಕ್ಷೆಯಲ್ಲಿದ್ದ ರೈತನಿಗೆ ಕಹಿಯಾದ ಕಬ್ಬು

ವಿಜಯಪುರ: ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಅನ್ನದಾತರ ಕೈಗೆ ಬರಬೇಕಿದ್ದ ತುತ್ತು ಬಾಯಿಗೆ ಬರದಂತಾದ ಘಟನೆ ಗುಮ್ಮಟ ನಗರಿ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ನಡೆದಿದೆ.

ಬರಕ್ಕೆ ಹೆಸರಾಗಿದ್ದ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ನೀರಾವರಿ ಸೌಲಭ್ಯ ಲಭ್ಯವಾಗಿದೆ.  ರೈತರು ವಾಣಿಜ್ಯ ಬೆಳೆಗಳತ್ತ ಮುಖ‌ ಮಾಡಿದ್ದಾರೆ.  ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.  ಇಂಥದ್ದೆ ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ತಿಕೋಟಾ ತಾಲೂಕಿನ ಕೆಲವು ಗ್ರಾಮಗಳಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಹಲವಾರು ರೈತರ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

 

ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಕೃಷ್ಣಪ್ಪ ಅಟಪಳಕರ ಎಂಬುವ ರೈತನ ತೋಟದಲ್ಲಿ ಕಟಾವಿಗೆ ಬಂದಿದ್ದ ಎರಡು ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆಯಲಾಗಿದ್ದ ಮತ್ತು ಭರಪೂರ ಇಳುವರಿ ನಿರೀಕ್ಷೆ ಇಟ್ಟುಕೊಂಡಿದ್ದ ಕಬ್ಬು ಧರೆಗೆ ಉರುಳಿದೆ. ‌ಇಡೀ ತೋಟದಲ್ಲಿ ಆಗಸಕ್ಕೆ ಮುಖ ಮಾಡಿ ನಿಂತಿದ್ದ ಮತ್ತು ರೈತನ ಬಾಳಿಗೆ ಸಿಹಿಯಾಗಬೇದ್ದ ಕಬ್ಬು ತಲೆ ಕೆಳಗಾಗಿ ಬಿದ್ದಿದೆ.  ಈ ತೋಟದಲ್ಲಿ ಎಲ್ಲಿ ನೋಡಿದರೂ ಮಲಗಿದಂತಿರುವ ಕಬ್ಬಿನ ಬೆಳೆ ಎಂಥವರಲ್ಲೂ ಮರುಕ ಹುಟ್ಟಿಸುತ್ತಿದೆ.

 

ರೂ. 1.50 ಲಕ್ಷ ಸಾಲ ಮಾಡಿ ಬೆಳೆಗೆ ಗೊಬ್ಬರ ಹಾಕಿ, ಹರಗಿ, ಔಷಧಿ ಹಾಕಿ ನೀರುಣಿಸಿದ್ಧ ಉತ್ತಮ ಬೆಳೆಯ ನಿರೀಕ್ಷೆ ಇಟ್ಟುಕೊಂಡಿದ್ದ.  ಸುಮಾರು ರೂ. 4 ರಿಂದ ರೂ. 5 ಲಕ್ಷ ಆದಾಯ ನಿರೀಕ್ಷಿಸಿದ್ದ.  ಆದರೆ, ಆದರೆ, ನಿರೀಕ್ಷೆಗೂ ಮೀರಿ ಬೀಸಿದ ಬಿರುಗಾಳಿ ಮತ್ತು ಸುರಿದ ಮಳೆ ಈ ರೈತನ ಶ್ರಮವನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ.

ತಿಕೋಟಾ ಭಾಗದಲ್ಲಿ ಬಹುತೇಕ ರೈತರು ದ್ರಾಕ್ಷಿ ಬೆಳೆಗಾರರು ಆಗಿದ್ದಾರೆ.  ದ್ರಾಕ್ಷಿಗೆ ಖರ್ಚು ಗೆಚ್ಚಾಗಿರುವುದರಿಙದ ಈ ರೈತ ಕಡಿಮೆ ಕರ್ಚಿನಲ್ಲಿ ಬೆಳೆಯಬಹುದಾದ ಕಬ್ಬನ್ನು 2.50 ಎಕರೆಯಲ್ಲಿ ಬೆಳೆದಿದ್ದ.  ಆಳೆತ್ತರ ಬೆಳೆಷ ಕಬ್ಬಿನಿಂಸ ಈ ರೈತ ಉತ್ತಮ ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದ.  ಆದರೆ, ಬಿರುಗಾಳಿ ಸಹಿತ ಭಾರಿ ಮಳೆ ರೈತನಿಗೆ ಬಾಯಿಗೆ ಬರಬೇಕಿದ್ದ ತುತ್ತನ್ನು ಕೈಗೆ ಸಿಗದಂತೆ ಮಾಡಿದೆ.

ಪ್ರತಿ ವರ್ಷ ಈ ಭಾಗದ ರೈತರಿಗೆ ಅತೀವೃಷ್ಠಿ ಮತ್ತು ಅನಾವೃಷ್ಠಿಯಿಂದಾಗಿ ಒಂದಲ್ಲ ಒಂದು ತೊಂದರೆ ಉಂಟಾಗಿ ಹಾನಿಯಾಗುತ್ತಲೆ ಇದೆ.  ಈ ಮೊದಲು ಈ ಭಾಗದ ರೈತರು ನೀರಿಲ್ಲದ ಬರಗಾಲದಲ್ಲಿ ಟ್ಯಾಂಕರ ಮೂಲಕ ನೀರನ್ನು ಖರೀದಿಸಿ ತಂದು ಬೆಳೆಗಳಿಗೆ ಹಾಕುತಿದ್ದರು.  ಆಗ ಸಾಲ ಮಾಡಿ ಬೆಳೆ ಉಳಿಸಿಕೊಂಡರೂ ಉತ್ತಮ ಆದಾಯ ಇರಲಿಲ್ಲ.  ಎರಡು ವರ್ಷದಿಂದ ಉತ್ತಮ ಮಳೆ ಹಾಗೂ ಕಾಲುವೆ ನೀರು ಬರುತ್ತಿರುವುದರಿಂದ ಈ ಪ್ರದೇಶದಲ್ಲಿ ಉತ್ತಮವಾದ ಬೆಳೆ ಬೆಳೆದಿದೆ.  ಈಗಾಗಲೇ ಕೊರೊನಾ ಹೊಡೆತಕ್ಕೆ ನಲುಗಿರುವ ಅನ್ನದಾತರಿಗೆ ಬೆಳೆದ ಬೆಳೆಗೆ ಉತ್ತಮ ದರ ಸಿಗದೇ ನಷ್ಟ ಅನುಭವಿಸಿದ್ದಾರೆ. ಈ ಬಾರಿ ಬಿರುಗಾಳಿ ಸಹಿತ ಸುರಿದ ದಾರಾಕಾರ ಮಳೆಗೆ ಬೆಳೆ ಹಾನಿ‌ ಉಂಟು ಮಾಡಿದೆ ಎನ್ನುತ್ತಾರೆ ಈ ಭಾಗದ ರೈತ ಮತ್ತು ಶಿಕ್ಷಕ ಪರಮೇಶ್ವರ ಗದ್ಯಾಳ.

ಈ ಮಳೆಯಿಂದ ಕೇವಲ‌ ಕಳ್ಳಕವಟಗಿ ಮಾತ್ರವಲ್ಲ, ಈ ಭಾಗದ ಹುಬನೂರ, ಟಕ್ಕಳಕಿ, ಘೋಣಸಗಿ, ಬಾಬಾನಗರ, ಸೋಮದೇವರಹಟ್ಟಿ ಭಾಗಗಳಲ್ಲಿಯೀ ರೈತರು ಬೆಳೆದ ತೊಗರಿ, ಕಬ್ಬು ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳಿಗೆ ಹಾನಿ ಉಂಟಾಗಿದೆ.

ಅಕ್ಕರೆಯಿಂದ ಬೆಳೆದ ಮತ್ತು ರೈತರ ಬಾಳಿಗೆ ಸಕ್ಕರೆಯ ಸಿಹಿ ನೀಡಬೇಕಿದ್ದ ಕಬ್ಬು ಈಗ ಹಾನಿಗೀಡಾಗಿದ್ದು, ಸರಕಾರ ಸೂಕ್ತ ನೆರವು ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಅಧಿಕಾರಿಗಳ ಭೇಟಿ, ಪರಿಶೀಲನೆ

ಈ ಮಧ್ಯೆ ಕಬ್ಬು ಧರೆಗುರುಳಿರುವ ರೈತನ ಹೊಲಕ್ಕೆ ಕಳ್ಳಕವಟಗಿ ಗ್ರಾಮ ಲೆಕ್ಕಾಧಿಕಾರಿ ಎಂ. ಬಿ. ಕಾಜಿ ಮತ್ತು ಸಹಾಯಕ ಕೃಷಿ ಅಧಿಕಾರಿ ಎ. ಬಿ. ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

One Response

  1. ನಾನು ಕೂಡ 2 ಎಕರೆ ವಿಸ್ತೀರ್ಣದಲ್ಲಿ ಬೆಳೆದಿರುವ ಕಬ್ಬು ಸಹ ನೆಲಕಚ್ಚಿದೆ ಸರ್, ನನ್ನ ಪರಿಸ್ಥಿತಿಯೂ ಇದೇ ರೀತಿ ಆಗಿದೆ. ದಯವಿಟ್ಟು ಪರಿಹಾರ ಕಲ್ಪಿಸಲು ಸಹಕರಿಸಿ. ಈ ಮೂಲಕ ತೋಟಗಾರಿಕೆ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ.
    ಧನ್ಯವಾದಗಳು.
    ಶ್ರೀಧರ್ ವಠಾರ. ದನರ್ಗಿ. ತಾಲೂಕ ತಿಕೋಟಾ. ಜಿಲ್ಲೆ ವಿಜಯಪುರ 9902057732.

Leave a Reply

ಹೊಸ ಪೋಸ್ಟ್‌