ಪ್ಯಾಂಟಿನ ಬೆಲ್ಟಿನಲ್ಲಿಟ್ಟು 804 ಗ್ರಾಂ ಚಿನ್ನದ ಗಟ್ಟಿ ಸಾಗಿಸಲು ಯತ್ನ- ಆರೋಪಿ ಪೊಲೀಸರ ವಶಕ್ಕೆ

ಹುಬ್ಬಳ್ಳಿ: ಬೆಲ್ಟಿನಲ್ಲಿಟ್ಟುಕೊಂಡು 804 ಗ್ರಾಂ ಚಿನ್ನದ ಗಟ್ಟಿ ಸಾಗಿಸಲು ಯತ್ನಿಸುತ್ತಿದ್ದ ಆರೋಪಿಯನ್ನು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದು, ಗಟ್ಟಿಚಿನ್ನ ವಶಪಡಿಸಿಕೊಂಡಿದ್ದಾರೆ.

ಗಟ್ಟಿ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡಲು ದುಷ್ಕರ್ಮಿಗಳು ನಾನಾ ತಂತ್ರಗಳನ್ನು ರೂಪಿಸುತ್ತಿರುತ್ತಾರೆ. ಅಂತಾರಾಷ್ಟ್ರೀಯ ವಿಮಾನಗಳ ಮೂಲ ಆಗಮಿಸುವ ಕೆಲವು ಜನ ಕಳ್ಳರು ದೇಹದ ಯಾವುದಾದರೊಂದು ಭಾಗದಲ್ಲಿ ಅಡಗಿಸಿ ಇಟ್ಟುಕೊಂಡು ವಿದೇಶಗಳಿಂದ ವಿಮಾನದ ಮೂಲಕ ಚಿನ್ನವನ್ನು ಕದ್ದು ತರುವ ಉದಾಹರಣೆಗಳು ಸಾಕಷ್ಠಿವೆ. ಆದರೆ, ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಓರ್ ಬೆಲ್ಟಿನಲ್ಲಿ ಚಿನ್ನದ ಗಟ್ಟಗಳನ್ನು ಅಡಗಿಸಿಟ್ಟುಕೊಂಡು ಅಕ್ರಮವಾಗಿ ಸಾಗಿಸುವಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಸಂದರ್ಭದ ಆರೋಪಿಯ ಬಳಿ ಬರೋಬ್ಬರಿ ಒಟ್ಟು 804 ಗ್ರಾಂ‌ ತೂಕದ ಎರಡು ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಗಾಂಜಾ ಮಾರಾಟದ ಮೂಲಕ ಚರ್ಚೆಗೆ ಗ್ರಾಸವಾಗಿರುವ ಹುಬ್ಬಳ್ಳಿ ಫೊಲೀಸರು ಈಗ ಪ್ರಕರಣದಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹುಬ್ಬಳ್ಳಿ ಪೊಲೀಸರು ಈಗ ಅಕ್ರಮ ಚಿನ್ನ ಸಾಗಾಟಗಾರನನ್ನು ಬಂಧಿಸುವ ಮೂಲಕ‌ಗಮನ ಸೆಳೆದಿದ್ದಾರೆ.

ಅಕ್ರಮ ಚಿನ್ನ ಸಾಗಿಸುತ್ತಿದ್ದ ಆರೋಪಿಯನ್ನು ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಈ ಆರೋಪಿಯ ಬಳಿ 38 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ವಶಕ್ಕೆ ಪಡೆಯಲಾಗಿದೆ.

ಆರೋಪಿಯನ್ನು ಹುಬ್ಬಳ್ಳಿಯ ಕೇಶ್ವಾಪುರದ ಚೇತನ ಎಂದು ಗುರಿಸಲಾಗಿದೆ.

ಅಲ್ಲದೇ ಈ ಪ್ರಕರಣ ಸಂಬಂಧ ಒಟ್ಟು 804 ಗ್ರಾಂ ತೂಕದ ಎರಡು ಚಿನ್ನ ಗಟ್ಟಿಗಳನ್ನು ಜಪ್ತಿ ಮಾಡಿದ್ದಾರೆ. ಈ ಆರೋಪಿ ಹುಬ್ಬಳ್ಳಿಯ ಗಿರಣಿಚಾಳ ಬಳಿ ಚಿನ್ನ ಸಾಗಿಸುವಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ‌ಚೇತನ್ ತನ್ನ ಬೆಲ್ಟ್ ನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ. ಯಾರ ಕಣ್ಣಿಗೂ ಬೀಳಬಾರದೆಂದು ಸದ್ದಿಲ್ಲದೆ ಹೋಗುತ್ತಿದ್ದ ಚೇತನ್ ನನ್ನು ಗಿರಿಣಿ ಚಾಳದ ಏಳುಮಕ್ಕಳ ತಾಯಿ ಗುಡಿಯ ಬಳಿ ಬಂಧಿಸಿದ ಪೊಲೀಸರು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ‌

ಈ ಕುರಿತು ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.

Leave a Reply

ಹೊಸ ಪೋಸ್ಟ್‌