ಸಿಂದಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಬಿರುಸಿನ ಪ್ರಚಾರ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಅವರು ಮತಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಸಿಂದಗಿ ಮತಕ್ಷೇತ್ರದ ಚಿಕ್ಕಸಿಂದಗಿ ಗ್ರಾಮಕ್ಕೆ ತೆರಳಿದ ಅವರು, ತಮಗೆ ಮತ ನೀಡುವಂತೆ ಮನೆಮನೆಗೆ ತೆರಳಿ ಮತಯಾಚಿಸಿದರು.

ಬಳಿಕ ಕೊಕಟನೂರ ಗ್ರಾಮಕ್ಕೆ ತೆರಳಿದ ನಾಜಿಯಾ ಶಕೀಲ ಅಂಗಡಿ ಪಾದಯಾತ್ರೆ ನಡೆಸಿ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಡಿಎಸ್ ಮುಖಂಡರಾದ ಝಹೀರುದ್ದೀನ್, ಇಮಾಮ ನದಾಫ್, ಜಟ್ಟೆಪ್ಪ ಮುಂತಾದವರು ಕೂಡ ನಾಜಿಯಾ ಶಕೀಲ ಅಂಗಡಿ ಅವರ ಜೊತೆ ತೆರಳಿ ಜೆಡಿಎಸ್ ಗೆ ಮತ ಹಾಕುವಂತೆ ಮನವಿ ಮಾಡಿದರು.

Leave a Reply

ಹೊಸ ಪೋಸ್ಟ್‌