ವಿಜಯಪುರ: ಅವರಪ್ಪನಿಗೆ ಹುಟ್ಟಿದ್ದರೆ ಅವರು ಯಾವ ಸಿಡಿ ಇವೆ ಎನ್ನುತ್ತಿದ್ದಾರೆ ಅವುಗಳನ್ನು ಬಿಡುಗಡೆ ಮಾಡಲಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲು ಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ
ಸಿಡಿ ಬಿಡುಗಡೆ ಬೆದರಿಕೆ ಫೋಟೋ ವೈರಲ್ ವಿಚಾರ ವಿರುದ್ಧ ವಿಜಯಪುರ ನಗರ ಯತ್ನಾಳ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದರಲ್ಲಿ ಯಾರ‌್ಯಾರು ಇದ್ದಾರೆ ಎಲ್ಲವೂ ಗೊತ್ತಿದೆ. ದಾಖಲೆ ಸಮೇತ ನಮ್ಮ ಬಳಿ ಮಾಹಿತಿ ಇದೆ. ಅವರಿಗೆಲ್ಲ ಸರಿಯಾಗಿ ತಕ್ಕ ಶಾಸ್ತಿ ಆಗುತ್ತದೆ. ನಮ್ಮ ಪೊಲೀಸರು ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಹೀಗಾಗಿ ತಾವೇನು ಈ ಕುರಿತು ಗೃಹ ಸಚಿವರಿಗೆ ಮಾತನಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಭ್ರಷ್ಟಾಚಾರದ ವಿರುದ್ದ ಮತ್ತು ಹಿಂದುತ್ವದ ಪರವಾಗಿ ನಾನು ಮಾತನಾಡುತ್ತೇನೆ. ಇದರಿಂದ ಅವರಿಗೆ ಸಮಸ್ಯೆಯಾಗುತ್ತಿದೆ. ಈ ಫೋಟೋ ವೈರಲ್ ಪ್ರಕರಣದಲ್ಲಿ ಎಲ್ಲ ಪಕ್ಷದವರಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಬ್ಬರೊಗೆ ಸೇರಿದ ಸಿಡಿ ತಯಾರಿಸುವ ಫ್ಯಾಕ್ಟರಿಗಳಿವೆ. ಈ ಬಗ್ಗೆ ಜನೇವರಿ 14 ರಂದು ಸಂಕ್ರಮಣದ ದಿನವೇ ಹೇಳಿಕೆ ನೀಡಿದ್ದೇನೆ. ಈ ರೀತಿ ಬೆದರಿಕೆ ಗಾಕುವ ಮೂಲಕ ನನಗೆ ಅವಕಾಶ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಸಿಡಿನೇ ಇಲ್ಲ. ಅದು ಇದ್ದರೆ ತಾನೇ ಬಿಡುಗಡೆ ಆಗಬೇಕು ಎಂದು ಯತ್ನಾಳ ಹೇಳಿದರು.
ಯಾರಾದರೂ ವಿಡಿಯೋ ಕಾಲ್ ಮಾಡಿದಾಗ ಕೆಲವೋಮ್ಮೆ ನಾನು ರಿಸೀವ್ ಮಾಡುತ್ತೇನೆ. ಕಾರ್ಯಕರ್ತರು ಕೆಲವೊಮ್ಮೆ ಒತ್ತಾಯ ಮಾಡಿದಾಗ ನಾನು ವಿಡಿಯೋ ಕಾಲ್ ರಿಸೀವ್ ಮಾಡುತ್ತೇನೆ. ಪ್ರತಿನಿತ್ಯ ಹಲವಾರು ಜನ ನಿಮ್ಮ ಮುಖ ನೋಡಬೇಕು ವಿಡಿಯೋ ಕಾಲ್ ಮಾಡಿ ಅಂತಾರೆ. ಇಂಥ ಸಂದರ್ಭದಲ್ಲಿ ನಾನು ಊಟ ಮಾಡುವಾಗ, ಮಲಗಿರುವಾಗ ಮಾತನಾಡಿದ ಸ್ಕ್ರೀನ್ ಶಾಟ್ ತೆಗೆದುಕೊಂಡಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ ಕೆಲವರು ಗಾಕಿರುವ ಬೆದರಿಕೆ ಪೋಸ್ಡ್ ಗಳ ಕುರಿತು ಪೊಲೀಸರು ತನಿಖೆ ನಡೆಸಲು ಸಮರ್ಥರಿದ್ದಾರೆ. ಈ ಕುರಿತು ತನಿಖೆ ಮಾಡುತ್ತಾರೆ. ಈ ಬಗ್ಗೆ ತಾವೇನೂ ಗೃಹ ಸಚಿವರಿಗೆ ಮಾತನಾಡುವುದಿಲ್ಲ ಎಂದು ಅವರು ತಿಳಿಸಿದರು.
ಯಾರು ಬೆಳೆಯುತ್ತಿದ್ದಾರೆ, ಯಾರು ನೇರವಾಗಿ ಮಾತನಾಡುತ್ತಾರೆ, ಅಂಥವವನ್ನು ತುಳಿಯುವ ಪ್ರಯತ್ನ ಇದಾಗಿದೆ. ಇಂಥ ನೂರು ಆರೋಪ ಬಂದರೂ ಎದುರಿಸುವ ತಾಕತ್ತು ನನಗಿದೆ. ಆ ಕಳ್ಳರು ಇನ್ನೊಂದು ಸ್ವಲ್ಪ ದಿನದಲ್ಲಿ ಸಿಗುತ್ತಾರೆ. ಜನರ ಮುಂದೆ ಬೆತ್ತಲಾಗುತ್ತಾರೆ ಎಂದು ಅವರು ತಿಳಿಸಿದರು.
ಅವರಪ್ಪನಿಗೆ ಹುಟ್ಟಿದ್ರೆ ಸಿಡಿ ಬಿಡುಗಡೆ ಮಾಡಲಿ. ಯತ್ನಾಳನನ್ನು ಕುಗ್ಗಿಸಲು ಯಾರ ಅಪ್ಪನಿಗೂ ಆಗಲ್ಲ. ಅವರ ಅಪ್ಪನಿಗೆ ಹುಟ್ಟಿದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ ಯತ್ನಾಳ, ಯತ್ನಾಳ್ ನನ್ನು ಏನು ಮಾಡಿದರೂ ಕುಗ್ಗಿಸಲು ಆಗುವುದಿಲ್ಲ. ನನ್ನ ಬಾಯಿ ಬಂದ್ ಮಾಡಲು ಯಾರಿಂದಲೂ ಸಾಧ್ಯ ಇಲ್ಲ. ಇಲ್ಲಿ ನಾನಲ್ಲ, ಅವರೇ ಬೆತ್ತಲಾಗುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.
ನಾನು ಜನ ಪರವಾಗಿ ಹೋರಾಟ ಮಾಡುತ್ತೇನೆ. ನೀರಾವರಿ ಇಲಾಖೆಯಲ್ಲಿ ಲಕ್ಷಾಂತರ, ಕೋಟ್ಯಾಂತರ ಅವ್ಯವಹಾರ ಆಗಿದೆ ಎಂದು ಈ ಹಿಂದೆಯೇ ಹೇಳಿದ್ದೆ. ಶೇ. 12 ಪರ್ಸೆಂಟ್ ಕಮಿಷನ್ ಪಡೆಯಲಾಗಿದೆ. ಅದರಲ್ಲಿ ಸರ್ವ ಪಕ್ಷದವರೂ ಹೇಳಿದ್ದು ನಾನೇ. ಇಂಥ ಭ್ರಷ್ಟಾಚಾರಗಳನ್ನು ಹೊರ ತೆಗೆದಿದ್ದಕ್ಕೆ ಭಯ ಪಟ್ಟು ಇಂಥ ಕೃತಕ ಸಿಡಿ ತಯಾರಿಸಿದ್ದಾರೆ. ಈ ಪಿತೂರಿಯಲ್ಲಿ ನಮ್ಮ ಪಕ್ಷದವರು ಸೇರಿದಂತೆ ಸರ್ವ ಪಕ್ಷದವರು ಇದ್ದಾರೆ. ಐಟಿಯವರು ಕಾಂಗ್ರೆಸ್ಸಿನವರಿಗೆ ಸೇರಿದ ಐಟಿ ಕಂಪನಿಯ ಮೇಲೂ ಧಾಳಿ ನಡೆಸಿರುವುದು ಇಲ್ಲಿ ಗಮನಾರ್ಹವಾಗಿದೆ. ಇದಕ್ಕೆಲ್ಲ ನಾನು ಹೆದರಲ್ಲ. ಇದರ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕ್ರಮ ತೆಗೆದುಕೊಳ್ಳುತ್ತದೆ ಎಂದು ಯತ್ನಾಳ ಸ್ಪಷ್ಟಪಡಿಸಿದರು.