ಸೋಮದೇವರಹಟ್ಟಿ ಬಳಿ ಭೂಕಂಪದ ಕೇಂದ್ರಬಿಂದು- ಎರಡು ಬಾರಿ ಕಂಪಿಸಿದ ಭೂಮಿ

ವಿಜಯಪುರ: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಸಂಜೆ ಉಂಟಾದ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.

ಸೋಮದೇವರಹಟ್ಟಿ ಗ್ರಾಮದಿಂದ ಆಗ್ನೆಯ ದಿಕ್ಕಿನಲ್ಲಿ 3.60 ಕಿ. ಮೀ. ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ದೃಢಪಟ್ಟಿದೆ.

ಸಂ. 6.47ಕ್ಕೆ 1.5 ತೀವ್ರತೆ ಮತ್ತು ಸಂ. 7.03ಕ್ಕೆ ಎರಡನೇ ಬಾರಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 1.2 ರಷ್ಟು ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರದ ಮೂಲಗಳು ಬಸವ ನಾಡಿಗೆ ತಿಳಿಸಿವೆ.

Leave a Reply

ಹೊಸ ಪೋಸ್ಟ್‌