ವಿಜಯಪುರ: ಆಯುಧ ಪೂಜೆ ಸಂದರ್ಭದಲ್ಲಿ ಕರಾವಳಿಯ ರಾಜ್ಯದ ಕಾಪು ಮತ್ತು ವಿಜಯಪುರ ಜಿಲ್ಲೆಯ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಕೇಸರಿ ಬಟ್ಟೆ ಧರಿಸಿರುವುದಕ್ಕೆ ಮಾಜಿ ಸಿಎಂ ಮತ್ತು ವಿಧಾಸಭೆ ಪ್ರತಿಒಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಮತ್ತೋಮ್ಮೆ ಕಿಡಿ ಕಾರಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿಬ ಪರ ಪ್ರಚಾರಕ್ಕಾಗಿ ಸಿಂದಗಿ ತಾಲೂಕಿನ ಮೊರಟಗಿ ಗ್ರಾಮಕ್ಕೆ ಆಗಮಿಸಿದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಕಾಪು ಮತ್ತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ದಿನ ಪೊಲೀಸರು ಕೇಸರಿ ಬಟ್ಟೆ ಧರಿಸಿರುವದನ್ನು ನಾನು ವಿರೋಧ ಮಾಡಿದ್ದೇನೆ. ಅದನ್ನು ಬಿಟ್ಟು ಬೇರೇನೂ ಹೇಳಿಲ್ಲ.
ಆರ್ ಎಸ್ ಎಸ್ ಏನು ಬೇಕಾದರೂ ಮಾಡಿಕೊಳ್ಳಲಿ. ಸರಜಾರಿ ಅಧಿಕಾರಿಗಳಾಗಿ ಪೊಲೀಸ್ ಠಾಣೆಯಲ್ಲಿ ಕೇಸರಿ ಬಟ್ಟೆ, ಶಾಲು ಧರಿಸಿದ್ದು ತಪ್ಪು. ಅದರ ಬದಲಿಗೆ ಬೇರೆ ಯಾವುದೇ ಬಟ್ಟೆ ಹಾಕಿಕೊಂಡಿದ್ದರೆ ತಾವು ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ ಎಂದು ಹೇಳಿದತು.
ಯಾರಾದರೂ ಒಬ್ಬರು ಕೇಸರಿ ಬಟ್ಟೆ ಅಥವಾ ಶಾಲು ಹಾಕಿಕೊಂಡರೆ ಏನು ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ. ಆದರೆ, ಎಲ್ಲರೂ ಕೇಸರಿ ನಟ್ಟೆ ಹಾಕಿಕೊಂಡಿದ್ದು ಸರಿಯಲ್ಲ ಎಂದು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಹೇಳಿದರು.
ಪೊಲೀಸರನ್ನು ಕೇಸರಿಕರಣ ಮಾಡಲು ಹೊರಟಿದ್ದಾರೆ. ಹಾಗೆ ಮಾಡಲು ಬರುವದಿಲ್ಲ. ಆರ್ ಎಸ್ ಎಸ್ ನವರು ಏನಾದರೂ ಮಾಡಿಕೊಳ್ಳಲಿ. ಆದರೆ ಸರಕಾರಿ ನೌಕರರನ್ನು ಈ ರೀತಿ ಕೇಸರಿಕರಣ ಮಾಡಲು ಬರುವದಿಲ್ಲ ಎಂದು ತಿಳಿದಿದರು.
ಈ ಹಿನ್ನೆಲೆಯಲ್ಲಿ ಒಂದು ತ್ರಿಶೂಲ ಕೊಡಿ ಅವರನ್ನು ಆರ್ ಎಸ್ ಎಸ್ ಗೆ ಸೇರಿಸಿಕೊಳ್ಳಲಿ ಎಂದು ಹೇಳಿದ್ದೇನೆ. ನಾನು ಹಾಗೆ ಹೇಳಿದ್ದು ತ್ರಿಶೂಲ ಕೊಟ್ಟು ಬಿಡಿ ಅಂತಲ್ಲ. ವ್ಯಂಗ್ಯವಾಗಿ ಹಾಗೆ ಹೇಳಿದ್ದೇನೆ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.
ಬಳಿಕ ಎಸ್. ಸಿದ್ಧರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಮೊರಟಗಿಯಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಅವರು ಎರಡು ದಿನ ಸಿಂದಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಪ್ರಚಾರ ನಡೆಸಲಿದ್ದು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂಜೀತಸಿಂಗ್ ಸುರ್ಜೆವಾಲಾ ಕೂಡ ಸಿಂದಗಿಗೆ ಪ್ರಚಾರ ನಡೆಸಲಿದ್ದಾರೆ.