ರಾಜ್ಯದಲ್ಲಿ ಅನೈತಿಕ ಸರಕಾರ ಅಸ್ತಿತ್ವದಲ್ಲಿದೆ- ಸಬ್ ಜಾ ಸಾಥ್ ಸಬ್ ವಿಕಾಸ್ ಅಲ್ಲ ವಿನಾಶ್ ಆಗುತ್ತಿದೆ- ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ವಿಜಯಪುರ: ರಾಜ್ಯದಲ್ಲಿ ಅನೈತಿಕ ಸರಕಾರ ಅಸ್ತಿತ್ವದಲ್ಲಿದೆ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮೊರಟಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಪ್ರಚಾರ ನಡೆಸಿದ ಅವರು, ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಈ ಚುನಾವಣೆ ಬಹಳ ಮಹತ್ಚದ ಚುನಾವಣೆಯಾಗಿದೆ. ‌ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದ ಮತ್ತು ದೇಶದ ಹಿತದೃಷ್ಟಿಯಿಂದ ಈ ಚುನಾವಣೆ ಮಹತ್ವದ್ದಾಗಿದೆ‌. ರಾಜ್ಯದಲ್ಲಿ ಇವತ್ತು ಅನೈತಿಕ ಸರಕಾರ ಅಸ್ತಿತ್ವದಲ್ಲಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಈ ಸರಕಾರಕ್ಕೆ ಜನರು ಬಹುಮತ ಕೊಡದಿದ್ದರೂ ನಮ್ಮ ಪಕ್ಷದಿಂದ ಶಾಸಕರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಂಡು ಹಣದ ಬಲದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ. ಇನ್ ಕಮ್ ಟ್ಯಾಕ್ಸ, ಜಾರಿ ನಿರ್ದೇಶನಾಲಯ ಗಳಿಂದ ನಮ್ಮ ಪಕ್ಷದ ಶಾಸಕರನ್ನು ಹೆದರಿಸಿ ಆ ಪಕ್ಷಕ್ಕೆ ಕರೆದುಕೊಂಡು ಸರಕಾರ ರಚಿಸಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ನಾವು ಕರ್ನಾಟಕ ಅಷ್ಟೇ ಅಲ್ಲ ಆರು ರಾಜ್ಯಗಳಲ್ಲಿ ಗೆದ್ದಿದ್ದೇವೆ. ಗೋವಾ, ಮಣಿಪುರ, ಉತ್ತರಾ ಖಂಡ ಸೇರಿದಂತೆ ಆರೇಳು ರಾಜ್ಯಗಳಲ್ಲಿ ಜನ ಬೆಂಬಲ ನಮಗೆ ಬಂದರೂ ಸಹಿತ ಬಿಜೆಪಿಯವರು ವಾಮ ಮಾರ್ಗ ಬಳಸಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಸಿಬಿಐ, ಇನ್ ಕಮ್ ಟ್ಯಾಕ್ಸ ದುರುಪಯೋಗ ಪಡೆಸಿಕೊಂಡು ಸರಕಾರ ಮಾಡಿದ್ದಾರೆ. ನಮ್ಮ ಶಾಸಕರನ್ನು ಹೆದರಿಸಿ ಅವರು ಸರಕಾರ ರಚನೆ ಮಾಡುತ್ತಿದ್ದಾರೆ. ಇವತ್ತು ಕೂಡಾ ಈ ಸರಕಾರಕ್ಕೆ ಜನ ಒಪ್ಪುತ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಇಂದು ಪೆಟ್ರೋಲ್ ಮತ್ತು ಡಿಸೇಲ್ ಬೆಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಸಾಗಿದೆ. ಸಬ್ ಕಾ ಸಾಥ್ ಸಬ್ ವಿಕಾಸ್ ಎಂದು ಹೇಳಿ ಸಬ್ ಕಾ ವಿನಾಶ್ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೇಕ್ಷನ್ ನಲ್ಲಿ‌ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರನ್ನು ಗೆಲ್ಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವವರಿಗೆ ಎಚ್ಚರಿಕೆ ಗಂಟೆ ನೀಡಿದಂತೆ ಆಗುತ್ತದೆ‌. ಕೇಂದ್ರ ಮತ್ತು ರಾಜ್ಯ ಅವರ ಸರಕಾರ ಇದೆ ಎಂದು ಬಿಜೆಪಿಗೆ ಮತ ಹಾಕಬೇಡಿ ಎಂದು ಮಲ್ಲಿಕಾರ್ಜುನ ಖರ್ಗೆ ಮತದಾರರಲ್ಲಿ ಮನವಿ ಮಾಡಿದರು.

ನಾನು ರಾಜಕೀಯಕ್ಕೆ ಬಂದುಬೀಗ ನನ್ನ ರಾಜಕೀಯ 49 ವರ್ಷ ಆಯಿತು. ಮೋದಿ ಅವರು ಒಮ್ಮೆ ನನಗೆ ಖರ್ಗೆ ಅವರೇ ನಿಮಗೆ 50 ವರ್ಷ ಆಯಿತು ಎಂದು ಹೇಳಿದರು. ಆಗ ನಾನು ಹೇಳಿದೆ 50 ವರ್ಷ ಆಗತಿತ್ತು. ನೀವು ಹಾಗೂ ಆರ್ ಎಸ್ ಎಸ್ ನವರು ಸೇರಿ ನನ್ನನ್ನು ಸೋಲಿಸಿದ್ದೀರಿ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಾನು ಚುನಾವಣೆಯಲ್ಲಿ ಸೋತಿರಬಹುದು. ಮತದಾರ ಪ್ರಭುಗಳ ಮನದಲ್ಲಿ ಅಲ್ಲ ಎಂದು ನಾನು ಮೋದಿ ಅವರಿಗೆ ಹೇಳಿದ್ದೇನೆ. ಈ ಸರಕಾರದಿಂದ ಯಾವುದೇ ಹೋಸ ಯೋಜನೆ ರೂಪಿಸಲು ಆಗಲಿಲ್ಲ. ನಮ್ಮ ಕಾಂಗ್ರೆಸ್ ಸರಕಾರ ಮಾಡಿದ ಕೆಲಸಗಳನ್ನು ಇವರು ಹೆಸರು ಬದಲಿಸಿ ತಮ್ಮ ಯೋಜನೆಗಳು‌ ಎಂದು ಹೇಳಿಕೊಳ್ಳುತ್ತಿದ್ದಾರೆ‌ ಎಂದು ಅವರು ಆರೋಪಿಸಿದರು.

ಧರ್ಮದ ಹೆಸರಿನಲ್ಲಿ ನಮ್ಮನ್ನು ಇಬ್ಬಾಗ ಮಾಡುತ್ತಿರುವ ಜನರನ್ನು ನೀವು ಬೆಂಬಲಿಸಬೇಡಿ. ‌ದೇಶ ಒಡೆಯುವವರನ್ನು ದೂರ ಇಡಿ. ಮುಂಜಾನೆ ಎದ್ದ ತಕ್ಷಣ ನೀವು ನೋಡುವದು ಕೈ. ಆ ಕೈಗೆ ಈ ಬಾರಿ ನೀವು ಮತ ಹಾಕಬೇಕು ಎಂದು ಹೇಳಿದ ಅವರು, ಈ ಬಾರಿ ಅಶೋಕ‌ ಮನಗೂಳಿ ಅವರಿಗೆ ಮತ ಕೊಟ್ಟು ಗೆಲ್ಲಿಸಿಬೇಕು ಎಂದು ಮನವಿ ಮಾಡಿದರು.

ಅಶೋಕ ಮನಗೂಳಿ ಅವರಿಗೆ ಮತ ಕೊಟ್ಟು ಅಸೆಂಬ್ಲಿಯಲ್ಲಿ ನಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಹೋರಾಡಲು ಇನ್ನೊಂದು ಹುಲಿಯನ್ನು ಕಳುಹಿಸಿ ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ‌ ಮಾಡಿದರು.

Leave a Reply

ಹೊಸ ಪೋಸ್ಟ್‌