ಕಲಾಪದಲ್ಲಿ ಕುಳಿತು ನೀಲಿ ಚಿತ್ರ ನೋಡುವುದನ್ನು ತಾನೆ ಆರ್ ಎಸ್ ಎಸ್ ಕಲಿಸಿದ್ದು- ನನ್ನ ಕಂಡರೆ ಸಿದ್ಧರಾಮಯ್ಯಗೆ ಭಯ- ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ವಾಗ್ದಾಳಿ.

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಕೀಯ ನಾಯಕ ಆರೋಪ, ಪ್ರತ್ಯಾರೋಪ, ಟೀಕೆಗಳೂ ಮುಂದುವರೆದಿವೆ. 

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬೊಮ್ಮನಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಪರ ಪ್ರಚಾರಕ್ಕೆ ಆಗಮಿಸಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಬಿಜೆಪಿ ನಾಯಕರು ತಮಗೆ ಆರ್ ಎಸ್ ಎಸ್ ಗೆ ಆಹ್ವಾನ ನೀಡಿರುವುದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನನಗೆ ಆರ್ ಎಸ್ ಎಸ್ ಸಹವಾಸ ಬೇಡವೇ ಬೇಡ.  ಆರ್ ಎಸ್ ಎಸ್ ಶಾಖೆಗೆ ಬಂದು ಇವರು ಕಲಿಸಿದ್ದು ನೋಡಿಲ್ವಾ? ವಿಧಾನ ಸಭೆ ಕಲಾಪದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ನೋಡಿಲ್ವಾ? ಅಧಿವೇಶನದಲ್ಲಿ ಕುಳಿತು ನೀಲಿ ಚಿತ್ರ ನೋಡುತ್ತ ಕುಳಿಕೊಳ್ಳುವುದು.  ಈ ಥರಹದ್ದು ತಾನೆ ಆರ್ ಎಸ್ ಎಸ್ ಶಾಖೆಯಲ್ಲಿ ಕಲಿಸಿರೋದು.  ಅದನ್ನು ಕಲಿತುಕೊಳ್ಳಲು ನಾನು ಆರ್ ಎಸ್ ಎಸ್ ಗೆ ಹೋಗಬೇಕಾ? ನನಗೆ ಆ ಶಾಖೆ ಬೇಡ.  ಇಲ್ಲಿದೆಯಲ್ಲ ಈ ಬಡವರ ಶಾಖೆಯಲ್ಲಿ ಕಲಿತಿರುವುದು ನನಗೆ ಸಾಕು ಎಂದು ತಮ್ಮ ಸುತ್ತಮುತ್ತ ಸೇರಿದ್ದ ಜನರತ್ತ ಕೈ ಮಾಡಿ ತೋರಿಸಿದ ಅವರು,  ನಾನು ಆ ಶಾಖೆಗೆ ಬಂದು ಕಲಿಯಬೇಕಾದದ್ದು ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಹುಲ್ ಗಾಂಧಿ ಕುರಿತು ಬಿಜೆಪಿ ಟೀಕೆ ವಿಚಾರ

ರಾಹುಲ್ ಗಾಂಧಿ ಡ್ರಗ್ಸ್ ಪೆಡ್ಲರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಎಚ್. ಡಿ. ಕುಮಾರಸ್ವಾಮಿ, ನಾನು ಅಂಥ ಕೀಳು ಮಟ್ಟಕ್ಕೆ ಇಳಿಯುವುದಿಲ್ಲ.  ಅದರ ಅವಶ್ಯಕತೆ ನನಗಿಲ್ಲ ಎಂದು ಹೇಳಿದರು.

ವೈಯಕ್ತಿಕ ವಿಚಾರಗಳನ್ನು ಚರ್ಚೆ ಮಾಡಲು ಹೋಗಬೇಡಿ ಎಂದು ಆ ನಾಯಕರಿಗೆ ಹೇಳುತ್ತೇನೆ ಎಂದು ತಿಳಿಸಿದ ಅವರು, ನಮಗೆ ಅದೆಲ್ಲ ಬೇಕಾಗಿಲ್ಲ.  ಇವತ್ತು ದೇಶದಲ್ಲಿ ಬಡತನ ಹೆಚ್ಚುತ್ತಿದೆ.  ಇದನ್ನು ಹೇಗೆ ಹೋಗಲಾಡಿಸುತ್ತೀರಿ ಎಂಬುದರ ಕುರಿತು ಚರ್ಚೆ ಮಾಡಿ ಎಂದು ಸಲಹೆ ನೀಡಿದರು.

ಯಾವುದೋ ನಾಯಕರ ಬಗ್ಗೆ ವೈಯಕ್ತಿಕವಾಗಿ ಚರ್ಚೆ ಮಾಡುವುದಲಿಂದ ಅದಕ್ಕೆ ಮಿತಿ ಎಂಬುದು ಇರುವುದಿಲ್ಲ.  ಆರ್ ಎಸ್ ಎಸ್ ನಿಂದ ಬಂದಿರುವ ಹಲವಾರು ನಾಯಕರ ಬಗ್ಗೆ ಮತ್ತು ಬಿಜೆಪಿ ನಾಯಕರ ಬಗ್ಗೆ ಚರ್ಚೆ ಮಾಡುವುದಾದರೆ ದಿನವೆಲ್ಲ ಚರ್ಚೆ ಮಾಡಬಹುದು ಎಂದು ಅವರು ಹೇಳಿದರು.

ಎರಡೂ ಪಕ್ಷಗಳ ನಾಯಕರಿಗೆ ಹೇಳುತ್ತೇನೆ.  ವೈಯಕ್ತಿಕ ಚರ್ಚೆ ಮಾಡುವುದು ಬೇಡ.  ಕಾರ್ಯಕ್ರಮಗಳ ಆಧಾರದ ಮೇಲೆ ಚರ್ಚೆ ಮಾಡೋಣ ಎಂಬುದು ನನ್ನ ಅಭಿಪ್ರಾಯ ಎಂದು ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯ ಜೆಡಿಎಸ್ ಅಧ್ಯಕ್ಷರೂ ಆಗಿರುವ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

 

ದಿ. ಎಂ. ಸಿ. ಮನಗೂಳಿ ಅವರಿಂದ ಕಾಂಗ್ರೆಸ್ ನಾಯಕರಿಗೆ ತಮ್ಮ ಪುತ್ರನಿಗೆ ಅವಕಾಶ ಕೇಳಿದ ವಿಚಾರ

ಮಾಜಿ ಸಚಿವ ದಿ. ಎಂ. ಸಿ. ಮನಗೂಳಿ ತಮ್ಮ ಪುತ್ರ ಅಶೋಕ ಮನಗೂಳಿ ಅವರನ್ನು ಕಾಂಗ್ರೆಸ್ಸಿಗೆ ಸೇರಿಸುವಂತೆ ಡಿ. ಕೆ. ಶಿವಕುಮಾರ ಮತ್ತು ಎಸ್. ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಹೇಳಿದ್ದಾರೆ ಎಂದು ಕಾಂಗ್ರೆಸ್ ನಾಯಕುರ ಪ್ರಚಾರ ನಡೆಸುತ್ತಿರುವ ಕುರಿತು ಎಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.  ಸಿಂದಗಿ ಮತಕ್ಷೇತ್ರಕ್ಕೆ ಎಚ್. ಡಿ. ದೇವೇಗೌಡ ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ ಮತ್ತು ನಾನು ಮುಖ್ಯಮಂತ್ರಿಯಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ.  ಈ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಜನತೆ ನೀವು ಕೆಲಸ ಮಾಡಿದ್ದೀರಿ.  ನಿಮ್ಮ ಪಕ್ಷವನ್ನು ಉಳಿಸಿಕೊಡುತ್ತೇವೆ ಎಂದು ಮತದಾರರು ಹೇಳುತ್ತಿದ್ದಾರೆ.  ಕಾಂಗ್ರೆಸ್ , ಬಿಜೆಪಿ ಯಾವುದೇ ಅಪಪ್ರಚಾರ ಮಾಡಿದರೂ, ಯಾವುದೇ ರೀತಿಯ ಚುನಾವಣೆ ತಂತ್ರ ನಡೆಸಿದರೂ ಜೆಡಿಎಸ್ ಗೆಲುವು ಇಲ್ಲಿದೆ.  ಈ ಹಿಂದೆ ಸಾರ್ವತ್ರಿಕ ಚುನಾವಣೆಯಲ್ಲಿಯೂ ಕಾಂಗ್ರೆಸ್ 3ನೇ ಸ್ಥಾನದಲ್ಲಿತ್ತು.  ಇಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಸ್ಪರ್ಧೆ ಇತ್ತು.  ಕಾಂಗ್ರೆಸ್ 3ನೇ ಸ್ಥಾನದಲ್ಲಿ ಇದ್ದುದರಿಂದಲೇ ಮನಗೂಳಿ ಅವರ ಮಗನನ್ನು ಕರೆದುಕೊಂಡು ಹೋಗಿದ್ದಾರೆ ಪಾಪ.  ಅದೆಂಥ ಮಡಿಲಿಗೆ ಹಾಕಿದ್ದಾರಂಥಲ್ಲ, ಅದನ್ನು ಮಡಿಲಿಗೆ ಹಾಕುತ್ತಾರೋ ಅಥವಾ ಮೇಲೆತ್ತುತ್ತಾರೋ ಅಥವಾ ಮಡಿಲಿನಿಂದ ಕೆಳಗೆ ಬೀಳಿಸುತ್ತಾರೋ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಸಿಎಂ ವಾಗ್ದಾಳಿ ನಡೆಸಿದರು.

ಮನಗೂಳಿ ಆಸ್ಪತ್ರೆಗೆ ಸೇರಿದ ಮೇಲೆ ಹೊರಗೆ ಬರಲು ಆಗಿಲ್ಲ.  ಬಹುಷಃ ಈ ಹಿಂದೆ ಚರ್ಚೆ ಮಾಡಿರುವ ಕುರಿತು ನನಗೆ ಗೊತ್ತಿಲ್ಲ.  ಆದರೆ, ಆಸ್ಪತ್ರೆಗೆ ಅವರು ದಾಖಲಾದ ಮೇಲೆ ಎಂದೂ ಹೊರಗೆ ಬರಲು ಆಗಲೇ ಇಲ್ಲ.  ನಮ್ಮ ಮಗನನ್ನು ಮಡಿಲಿಗೆ ಹಾಕುತ್ತೇನೆ ಎಂದು ನನ್ನ ಮಕ್ಕಳನ್ನು ಕಾಪಾಡಿ ಎಂದು ಅವರು ಹೇಳಿದ್ದಾರೆ ಎಂದು ಹೇಳುತ್ತಿದ್ದಾರೆ.  ಈ ಬಗ್ಗೆ ಮಾತನಾಡಲು ಅವರು ಪಾಪ ಅವರು ಬದುಕಿಲ್ಲ.  ಅವರ ಹೆಸರನ್ನು ಈ ರೀತಿ ದುರುಪಯೋಗ ಪಡಿಸಿಕೊಳ್ಳುವುದು, ಅವರ ಹೆಸರನ್ನು ತರುವುದು ನಮಗೂ ಶೋಭೆ ತರುವುದಿಲ್ಲ.  ಅವರಿಗೂ ಶೋಭೆ ತರುವುದಿಲ್ಲ.  ಚುನಾವಣೆ ಘೋಷಣೆಯಾಗಿದೆ.  ಚುನಾವಣೆ ನಡೆಸೋಣ. ಎಂದು ಅವರು ಹೇಳಿದರು.

 

ನನ್ನನ್ನು ಕಂಡರೆ ಎಸ್. ಸಿದ್ಧಾರಮಯ್ಯಗೆ ಭಯ

ತಮ್ಮನ್ನು ಕಂಡರೆ ಕುಮಾರಸ್ವಾಮಿ ಅವರಿಗೆ ಭಯ ಎಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ, ನನ್ನ ಕಂಡರೆ ಸಿದ್ಧಾಮಯ್ಯಗೆ ಭಯ.  ನನಗೇನೂ ಅವರನ್ನು ಕಂಡರೆ ಭಯವಿಲ್ಲ.  ನಾನೇಕೆ ಭಯಪಡಲಿ.  ಭಯ ಇರುವುದರಿಂದಲೇ ಅವರು ಪದೇ ಪದೇ ಜೆಡಿಎಸ್ ಬಗ್ಗೆ ಮತನಾಡುತ್ತಾರೆ.  ಅವರು ಮಾತನಾಡದಿದ್ದರೆ ನಾನೇಕೆ ಮಾತನಾಡಲಿ? ಅವರು ಬೇರೆ ವಿಷಯ ಪ್ರಸ್ತಾಪಿಸಿದರೆ ನಾವು ನೀಡಿರುವ ಕಾರ್ಯಕ್ರಮಗಳ ಮೇಲೆ ನಾವೂ ಹೋಗುತ್ತೇವೆ.  ಪದೇ ಪದೇ ನಮ್ಮ ಹೆಸರು ಕೆದಕುವುದೂ ಅವರೇ.  ಹೀಗಾಗಿ ವಿಧಿಯಿಲ್ಲದೆ ಮತನಾಡಬೇಕಾಗಿದೆ.  ಸ್ಪಷ್ಟೀಕರಣವಾದರೂ ಕೊಡಬೇಕಲ್ವಾ? ಅದಕ್ಕಾಗಿ ಮಾತನಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಮತ್ತು ಸಿದ್ಧರಾಮಯ್ಯ ಭೇಟಿ ವಿಚಾರ ಕುರಿತು ನಾನು ಸ್ಪಷ್ಠೀಕರಣ ಕೊಡುವ ಅಗತ್ಯವಿಲ್ಲ.  ಅದನ್ನು ಬ್ಯಾಟರಿ ಹಿಡಿದುಕೊಂಡು ಫೋಟೋ ತೆಗೆದುಕೊಂಡಿರಲು ಸಾಧ್ಯವೇ? ಯಾರಾರನ್ನು ಯಾವಾಗ ಭೇಟಿ ಮಾಡಿದ್ದಾರೆ ಎಂಬ ಮಾಹಿತಿಗಳು ಇರುತ್ತವೆ.  ಇದನ್ನು ಮುಂದಿನ ದಿನಗಳಲ್ಲಿ ಪರದೆಯ ಮೇಲೆ ನೋಡೋಣ ಬನ್ನಿ ಎಂದು ಅವರು ಹೇಳಿದರು.

ಮುಸ್ಲಿಮಪ ಕುರಿತು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರ

ಮುಸ್ಲಿಮರು ಬುದ್ದಿವಂತರಿದ್ದಾರೆ.  ಕಾಂಗ್ರೆಸ್ಸಿಗೆ ಮತ ಹಾಕುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಮರಿಗೆ ಕಾಂಗ್ರೆಸ್ಸಿಗರ ಕೊಡುಗೆ ಏನು ಎಂಬುದನ್ನು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಲಿ.  ಮುಸ್ಲಿಂ ಮತಗಳನ್ನು ಇವರು ಸಂಪೂರ್ಣವಾಗಿ ಪೇಟೆಂಟ್ ಪಡೆದಿದ್ದಾರಾ? ಈ ಸಮಾಜಕ್ಕೆ ನಮ್ಮದೂ ಕೊಡುಗೆ ಇದೆ.  ನಮ್ಮ ಪಕ್ಷದ ಬಗ್ಗೆ ನಿರಂತರ ಅಪಪ್ರಚಾರ ಮಾಡಿದ್ದರಿಂದ ಮುಸ್ಲಿಂ ಸಮಾಜದವರು ಸ್ವಲ್ಪ ದೂರ ಇದ್ದರು.  ಈಗ ಕಾಂಗ್ರೆಸ್ಸಿಗರ ಈ ಡ್ರಾಮಾಗಳು ಮುಸ್ಲಿಂ ಸಮುದಾಯಕ್ಕೂ ಅರ್ಥವಾಗುತ್ತಿದೆ.  ನಾವು ಕಾಟಾಚಾರಕ್ಕೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ.  ಓರ್ವ ಎಂ.ಎ. ಪದವೀಧರೆಗೆ ಟಿಕೆಟ್ ನೀಡಿದ್ದೇವೆ.  ಬೈ ಎಲೆಕ್ಷನ್ ನಡೆಸುವುದು ಸುಲಭವಲ್ಲ.  ಈಗಿನ ಕಾಲದಲ್ಲಿ ಇದು ಹುಡುಕಾಟವಲ್ಲ.  ಇಂಥ ಪರಿಸ್ಥಿತಿಯಲ್ಲಿ ಓರ್ವ ಹೆಣ್ಣು ಮಗಳನ್ನು ಚುನಾವಣೆಗೆ ನಿಲ್ಲಿಸುವ ಮೂಲಕ ಸಿಂದಗಿ ಜನತೆಯ ಆಶೀರ್ವಾದದೊಂದಿಗೆ ಕರ್ನಾಟಕದಲ್ಲಿ ಒಂದು ಹೊಸ ಪರಿವರ್ತನೆ ತರಲು ನಾಜಿಯಾ ಅಕೀಲ ಅಂಗಡಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ವಿಧಾನ ಪರಿಷತ ಮಾಜಿ ಸದಸ್ಯ ಬಿ. ಜಿ. ಪಾಟೀಲ ಹಲಸಂಗಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌