ಸಿಂದಗಿ ಬೈ ಎಲೆಕ್ಷನ್ ಬಿ. ವೈ. ವಿಜಯೇಂದ್ರ ಎಂಟ್ರಿ- ಬಿಜೆಪಿ ರಾಜ್ಯ ಉಪಾಧ್ಯಕ್ಷ ಹೇಳಿದ್ದೇನು ಗೊತ್ತಾ?

ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಎರಡು ದಿನ ಪ್ರಚಾರ ನಡೆಸಿ ತೆರಳಿದ ನಂತರ ಅವರ ಪುತ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಎರಡು ದಿನ ಪ್ರಚಾರ ನಡೆಸಲು ಆಗಮಸಿದ್ದಾರೆ.

ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆ. ಆರ್. ಪೇಟೆ ಮತ್ತು ಶಿರಾ ಬೈ ಎಲೆಕ್ಷನ್ ವಿಶೇಷ ಚುನಾವಣೆಯಾದ್ದವು.  ಆ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಎಂದೂ ಗೆದ್ದಿರಲಿಲ್ಲ.  ಅಲ್ಲಿ ಬಿಜೆಪಿ ಸಂಘಟನೆಯೂ ದೊಡ್ಡ ಮಟ್ದದಲ್ಲಿ ಇರಲಿಲ್ಲ.  ಈ ಹಿನ್ಹೀನೆಲೆಯಲ್ಗಾಲಿ ಸುಮಾರು 20 ರಿಂದ 25 ದಿನಗಳ ಕಾಲ ಶಿರಾ ಮತ ಕ್ಷೇತ್ರದಲ್ಲಿದ್ದು ಭೂತ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಉತ್ಸಾಹ ತುಂಬುವ ಕೆಲಸವನ್ನು ಮಾಡಿದ್ದೇವೆ.  ಆದರೆ, ಸಿಂದಗಿ ಮತಕ್ಷೇತ್ರದಲ್ಲಿ ಬಿಜೆಪಿ ಮತ್ತು ಸಂಘಟನೆ ಬಹಳ ಸದೃಢವಾಗಿದೆ.  ಎರಡು ಬಾರಿ ರಮೇಶ ಭೂಸನೂರ ಶಾಸಕರಾಗಿ ಕೆಲಸ ಮಾಡಿದ್ದಾರೆ.  ಹೀಗಾಗಿ ಮೇಲ್ನೋಟಕ್ಕೆ ಅಂಥ ಸಮಸ್ಯೆ ಕಾಣಿಸುತ್ತಿಲ್ಲ.  ಹೀಗಾಗಿ ಪ್ರತಿ ಭೂತ ಮಟ್ಟದಲ್ಲಿ ಕೂಡ ಬಿಜೆಪಿ ಕಾರ್ಯಕರ್ತರಿದ್ದಾರೆ.  ಭೂತ ಪ್ರಮುಖರಿದ್ದಾರೆ.  ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ ಎಂದು ತಿಳಿಸಿದರು.

ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ ಎರಡು ದಿನ ಪ್ರಚಾರ ಮಾಡಲಿದ್ದೇನೆ.  ಸಿಂದಗಿಯ ಮತದಾರರು ಈ ಬಾರಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರನ್ನು ಗೆಲ್ಲಿಸಲಿದ್ದಾರೆ.  ಮೇಲ್ನೋಟಕ್ಕೆ ಸಿಂದಗಿ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಗೆಲ್ಲುವುದು ಖಚಿತವಾಗಿದೆ ಎಂದು ಬಿ. ವೈ. ವಿಜಯೇಂದ್ರ ಅವರು ತಿಳಿಸಿದರು.

ಕೆಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆಗಳಲ್ಲಿ ಬಿಜೆಪಿ ಸರಕಾರ ಇರುವುದರಿಂದ ಸಿಂದಗಿ ಮತಕ್ಷೇತ್ರ ಅಭಿವೃದ್ಧಿ ಆಗುತ್ತದೆ.  ಈ ಹಿನ್ನೆಲೆಯಲ್ಲಿ ಸಿಂದಗಿ ಮತಕ್ಷೇತ್ರದ ಜನತೆ ಈ ಬಾರಿ ಬಿಜೆಪಿಗೆ ಮತ ಹಾಕಲು ನಿರ್ಧರಿಸಿದ್ದಾರೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿವೆ.  ಮತ ಎಣಿಕೆ ಕೆಂದ್ರದಲ್ಲಿ ಬಹಳ ಹೊತ್ತು ಅವರು ಇರುವುದಿಲ್ಲ.  ಸಿಂದಗಿಯಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಸದೃಢವಾಗಿದೆ,  ಇಲ್ಲಿ ಗೆಲ್ಲಲು ಸಮಸ್ಯೆ ಇಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಆರ್ ಎಸ್ ಎಸ್ ಬಗ್ಗೆ ಮಾತನಾಡುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇಂಥ ಬೇಜವಾಬ್ದಾರಿ ಹೇಳಿಕೆಗಳಿಗೆ ಉತ್ತರ ಕೊಡಲು ತಾವು ಇಷ್ಟ ಪಡುವುದಿಲ್ಲ.  ಬೈ ಎಲೆಕ್ಷನ್ ಬಂದಿದೆ,  ಅಭಿವೃದ್ಧಿ ಕೆಲಸಗಳನ್ನು ಮಾಡಿರುವದನ್ನು ಮುಂದಿಟ್ಟುಕೊಂಡು ಮತ ಕೇಳಿ ಎಂದು ಹೇಳಲು ಇಷ್ಟಪಡುತ್ತೇನೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಇದಾದ ಬಳಿಕ ಬಿ. ವೈ. ವಿಜಯೇಂದ್ರ ಮಧ್ಯಾಹ್ನ ಆಲಮೇಲದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದೆ.  ಅಲ್ಲದೇ, ನಾನಾ ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸಲಿದ್ದಾರೆ. ಅಲ್ಲದೇ, ಶನಿವಾರ ಕೂಡ ನಾನಾ ಬಹಿರಂಗ ಸಭೆ, ರೋಡ್ ಶೋಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಬಿರುಸಿನ ಪ್ರಚಾರ ನಡೆಸಲಿದ್ದಾರೆ.

Leave a Reply

ಹೊಸ ಪೋಸ್ಟ್‌