ಪ್ರತಿಪಕ್ಷಗಳು ಬಾಯಿಗೆ ಬಂದಂತೆ ಮಾತನಾಡಿ ರಾಜಕಾರಣಿಗಳೆಂದರೆ ಹೇಸಿಗೆ ಬರುವಂತೆ ನಾಣ್ಣುಡಿ ಬರೆಯುತ್ತಿವುದು ದುರಂತ ಎಂದ ಸಚಿವ ವಿ. ಸೋಮಣ್ಣ

ವಿಜಯಪುರ: ಪ್ರಸಕ್ತ ಬೈ ಎಲೆಕ್ಷನ್ ಚುನಾವಣೆಯಲ್ಲಿ ಪ್ರತಿಪಕ್ಷಗಳ ನಾಯಕರು ಬಾಯಿಗೆ ಬಂದಂತೆ ಮಾತನಾಡಿ ಜನರಲ್ಲಿ ರಾಜಕಾರಣಿಗಳೆಂದರೆ ಹೇಸಿಗೆ ಬರುವಂತೆ ನಾಣ್ಣುಡಿ ಬರೆಯುತ್ತಿರುವುದು ದೊಡ್ಡ ದುರಂತ ಎಂದು ವಸತಿ ಸಚಿವ ವಿ. ಸೋಮಣ್ಣ ವಿಷಾಧ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ವೈಯಕ್ತಿಕ ಟೀಕೆಗಳಿಗೆ ಚುನಾವಣೆ ಪ್ರಚಾರವನ್ನು ಬಳಸಿಕೊಳ್ಳುತ್ತಿರುವುದು ವಿಷಾಧನೀಯವಾಗಿದೆ ಎಂದು ಹೇಳಿದರು.

ಈ ಚುನಾವಣೆ ಅನಿರಿಕ್ಷಿತವಾಗಿ ಬಂದಿದೆ.  18 ತಿಂಗಳ ಬಳಿಕ ಮತ್ತೆ ಚುನಾವಣೆ ಬರುತ್ತದೆ.  ಹೀಗಾಗಿ ಹಾಗಾಗಿ ಅಭಿವೃದ್ಧಿಗೆ ಪಣ ತೊಟ್ಟಿರುವ ಬಿಜೆಪಿಗೆ ಮತನೀಡಿ.  ಅಭಿವೃದ್ಧಿಗೋಸ್ಕರ ಈ ಚುನಾವಣೆ ನಡಿತಿದೆ.  ಈ ಚುನಾವಣೆಯಲ್ಲಿ ರಮೇಶ ಭೂಸನೂರ ಅವರನ್ನು ಅತ್ಯಂತ ಹೆಚ್ಚು ಮತಗಳನ್ನು ನೀಡಬೇಕು.  ಈಗಾಗಲೇ ಸಿಂದಗಿ ತಾಲೂಕಿಗೆ 5000 ಮನೆ ಕೊಟ್ಟಿದ್ದೇವೆ,  ಸಿಂದಗಿ ಆಲಮೇಲ ಸೇರಿ ಒಂದೂವರೆ ಸಾವಿರ ಮನೆ ಕೊಟ್ಟಿದ್ದೇವೆ.  ಇನ್ನೂ ವಸತಿ, ಸೌಕರ್ಯಗಳು ಬೇಕಾಗಿವೆ ಎಂದು ಹೇಳಿದ ಅವರು, ಪ್ರಚಾರದ ವೇದಿಕೆಯನ್ನು ನಾಯಕರು ತಮ್ಮ ಹೇಳಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ನಾಯಕರುಗಳಿಗೆ ಉತ್ತರ ನೀಡಬೇಕು.  ಹೀಗಾಗಿ ಅಭಿವೃದ್ಧಿಗೂಸ್ಕರ ಮತ ನೀಡಿ.  ಬಿಜೆಪಿಯನ್ನು ಗೆಲ್ಲಿ ಬೊಮ್ಮಾಯಿ ಅವರಿಗೆ ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿದರು.

Leave a Reply

ಹೊಸ ಪೋಸ್ಟ್‌