ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

ಬೆಳಗಾವಿ: ಮುಂಬೈ-ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ.  ಆದ್ದರಿಂದ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು-ಕರ್ನಾಟಕ ಎಂದು ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಿ,ಸಿದ್ದಾರೆ.  ಬೆಳಗಾವಿ ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಕಿತ್ತೂರು ಉತ್ಸವ-2021 ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು […]

ದಶಕಗಳ ಬೇಡಿಕೆ ಈಡೇರಿಸಿ, ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ- ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ತಾರಾಪುರ, ಬ್ಯಾಡಗಿಹಾಳ ಮತ್ತು ತಾವರಖೇಡ ಗ್ರಾಮಗಳ ಜನರ ದಶಕಗಳ ಬೇಡಿಕೆಯಾಗಿದ್ದ ಪುನರ್ವಸತಿ ಮತ್ತು ಹಕ್ಕು ಪತ್ರ ನೀಡಿ ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದು ಮುಜರಾಯಿ, ವಕ್ಫ್.ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.  ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಸಿಂದಗಿ ಬೈ ಎಲೆಕ್ಷನ್ ಪ್ರಚಾರದಲ್ಲಿರುವ ಅವರು, ಭೀಮಾ ಏತನೀರಾವರಿಯಿಂದ ತಾರಾಪುರ, ಬ್ಯಾಡಗಿಹಾಳ ಹಾಗೂ ತಾವರಖೇಡ ಗ್ರಾಮಗಳು ಮುಳುಗಡೆಯಾಗಿ ಪುನರ್ವಸತಿಗಾಗಿ ಕಳೆದ 10 ವರ್ಷಗಳಿಂದ ಹೋರಾಟ […]

ಜಾತಿ ಹೆಸರಲ್ಲಿ ವಿಭಜನೆಯಾದರೆ 25 ವರ್ಷಗಳಲ್ಲಿ ದೇಶದ ಸ್ಥಿತಿ ಗಂಭೀರವಾಗಲಿದೆ- ಬಸವರಾಜ ರಾಯರೆಡ್ಡಿ

ವಿಜಯಪುರ- ಜಾತಿ ಆಧಾರದಲ್ಲಿ ದೇಶ ವಿಭಜನೆಯಾಗುತ್ತಿದೆ. ಇದು ಇದೇ ರೀತಿ ಮುಂದುವರೆದರೆ ಮುಂದಿನ 20-25 ವರ್ಷಗಳ ನಂತರ ಭಾರತದ ಸ್ಥಿತಿ ಗಂಭೀರವಾಗುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು. ವಿಜಯಪುರ ನಗರದ ಎಂ. ಬಿ. ಪಾಟೀಲ್ ನಗರದಲ್ಲಿ ಡಾ. ಮಹಾಂತೇಶ ಬಿರಾದಾರ ಅವರ ಮನೆಯಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಇಂದು ಜಾತಿ, ಉಪಜಾತಿ ಮೂಲಕ ಆಳುವ ಪಕ್ಷಗಳೇ ಜನರನ್ನು ವಿಭಜನೆ ಮಾಡುತ್ತಿವೆ. ಆರಂಭದಲ್ಲಿ ಇದು ನಮಗೆ ಸುಂದರವಾಗಿ ಕಂಡರೂ ಮುಂಬರುವ ದಿನಗಳಲ್ಲಿ […]

ಕೆಲಸಗಾರರನ್ನು ಪ್ರೋತ್ಸಾಹಿಸಬೇಕೆ ಹೊರತು ಕಾಲೆಳೆಯಬಾರದು- ಯರನಾಳ ಶ್ರೀಗಳು

ವಿಜಯಪುರ: ಕೆಲಸ ಮಾಡುವವರನ್ನು ಬೆಂಬಲಿಸಿ ಪ್ರೊತ್ಸಾಹಿಸಬೇಕೇ ಹೊರತು ಕಾಲೆಳೆಯುವ ಕೆಲಸ ಮಾಡಬಾರದು ಎಂದು ಯರನಾಳ ಶ್ರೀ ಗುರುಸಂಗನಬಸವ ಮಹಾಸ್ವಾಮೀಜಿ ಹೇಳಿದ್ದಾರೆ. ಇಂದು ವಿಜಯಪುರದಲ್ಲಿ ನಡೆದ ಬಿಎಲ್‍ಡಿಇ ಸಂಸ್ಥೆಯ ಸಂಸ್ಥಾಪನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಕಾಲೆಳೆಯುವ ಘಟನೆಗಳು ನಡೆಯುತ್ತಿವೆ. ಇದು ವಿಪರ್ಯಾಸ.‌‌ ಅಭಿವೃದ್ಧಿ ಕೆಲಸ ಮಾಡುವವರನ್ನು ಪ್ರೊತ್ಸಾಹಿಸಬೇಕು ಎಂದು ಅವರು ಕರೆ ನೀಡಿದರು. 111 ವರ್ಷಗಳ ಹಿಂದೆ ಆರಂಭವಾದ ಬಿಎಲ್‍ಡಿಇ ಸಂಸ್ಥೆ ಅಜ್ಞಾನ, ಮೌಡ್ಯ, ದಾರಿದ್ರ್ಯವನ್ನು ಹೊಗಲಾಡಿಸಲು ಜ್ಞಾನದ ದೀವಿಗೆಯಂತೆ ಕೆಲಸ ಮಾಡಿದೆ. ಈ […]

ಎಚ್. ಡಿ. ದೇವೇಗೌಡ ಕೋಮುವಾದಿಗಳನ್ನು ದೂರ ಇಡಲು ಹೋರಾಟ ಮಾಡುತ್ತಿರುವ ವ್ಯಕ್ತಿ- ಮಾಜಿ ಸಚಿವ ಎಚ್. ಡಿ. ರೇವಣ್ಣ

ವಿಜಯಪುರ: ರಾಜ್ಯ ಮತ್ತು ದೇಶದಲ್ಲಿ ಕೋಮವಾದಿಗಳನ್ನು ದೂರ ಇಡಲು ಹೋರಾಟ ಮಾಡುತ್ತಿರುವ ವ್ಯಕ್ತಿ ಯಾರಾದರೂ ಇದ್ದಲಿ ಅದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾತನಾಡಿದ ಅವರು, ಎಚ್. ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಮನಸ್ಸು ಮಾಡಿದ್ದರೆ ಅಧಿಕಾರದಲ್ಲಿ ಮುಂದುವರೆಯಬಹುದಾಗಿತ್ತು.  ಅಂದು ಪ್ರತಿಪಕ್ಷದಲ್ಲಿದ್ದ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ಮುಂದುವರೆಯಿರಿ.  ನಾವು ನಿಮ್ಮ ಪರವಾಗಿ ಕೈ ಎತ್ತುತ್ತೇವೆ ಎಂದು ಚೀಟಿ ಬರೆದು […]

ಗುಲಾಂ ನಬಿ ಆಜಾದರನ್ನು ಎಐಸಿಸಿ ಅಧ್ಯಕ್ಷರಾಗಿ ನೇಮಿಸಲಿ- ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಸಚಿವ ಗೋವಿಂದ ಕಾರಜೋಳ ಸವಾಲು

ವಿಜಯಪುರ: ಕಾಂಗ್ರೆಸ್ಸಿಗೆ ನಿಜವಾಗಿಯೂ ಅಲ್ಪಸಂಖ್ಯಾತರ ಮೇಲೆ ಕಾಳಜಿ ಇದ್ದರೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಿಸಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ ಗಾಂಧಿ ಅವರಿಗೆ ಸವಾಲು ಹಾಕಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾತನಾಡಿದ ಅವರು,: ಚುನಾವಣೆ ಬಂದಾಗ ಕಾಂಗ್ರೆಸ್ ನಾಯಕರು ದೀನ-ದಲಿತರ ಬಗ್ಗೆ ಅಲ್ಪಸಂಖ್ಯಾತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ.  ಬಿಜೆಪಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಾರೆ.  ಆದರೆ, ನಿಜವಾಗಿಯೂ […]