ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಸಿಂದಗಿ ತಾಲೂಕಿನಲ್ಲಿ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ- ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಪ್ರಚಾರಕ್ಕಾಗಿ ಎರಡನೇ ಬಾರಿ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೊದಲಿಗೆ ಕನ್ನೊಳ್ಳಿ, ನಂತರ ಕೊಕಟನೂರ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಜೆಡಿಬಿಗಳ ಮೇಲೆ ನಿಂತು ಸಿಎಂ ರೋಡ್ ಶೋ ನಡೆಸುತ್ತಿದ್ದ ವಾಹನಗಳ ಮೇಲೆ ಹೂಮಳೆ ಸುರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ಸಿನವರು ಸೋಲಿನ ಹತಾಶೆಯಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

ಸಿಂದಗಿ ಮತಕ್ಷೇತ್ರದದಲ್ಲಿ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು.  ಜನರ ಆಶೀರ್ವಾದದಿಂದ ರಾಜ್ಯದಲ್ಲಿ ರಾಜಕೀಯದ ಚಿತ್ರಣವೇ ಬದಲಾಗಿದೆ.  ಈ ಬಾರಿ ಬಿಜೆಪಿ ಗೆ ಮತ ನೀಡಿ ಬೆಂಬಲಿಸಿ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ಸಿಂದಗಿ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಇ ರಮೇಶ ಭೂಸನೂರ 25 ಸಾವಿರ ಮತಗಳಿಂದ ಗೆಲ್ಲುವುದು ಅಷ್ಟೆ ಸತ್ಯವಾಗಿದೆ ಎಂದು ಅವರು ತಿಳಿಸಿದರು.

ಕಳೆದ ಬಾರಿ ದಿವಂಗತ ಎಂ ಸಿ ಮನಗೂಳಿ ಕಾಕಾ ಇದ್ದರು.  ಅವರ ಮೇಲಿನ ಅನುಕಂಪದಿಂದ ನಿವೆಲ್ಲ ಅವರನ್ನು ಗೆಲ್ಲಿಸಿದ್ದೀರಿ.  ಈ ಬಾರಿ ಅವರು ಇಲ್ಲ,  ಬಿಜೆಪಿಗೆ ಗೆಲ್ಲಿಸಿ ಎಂದು ಮನವಿ ಮಾಡಿದ ಮುಖ್ಯಮಂತ್ರಿಗಳು, ನಾನು ಸಿಎಂ ಆದ ಮೇಲೆ ಮೊದಲ ಕೈಗೊಂಡ ನಿರ್ಧಾರದಂತೆ ನಿರ್ಧಾರ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ರೂ. 1000 ಕೋ. ಅನುದಾನ ನೀಡಿದ್ದೇನೆ.  ನಾನು ಬಡವರು ಮತ್ತು ದೀನ ದಲಿತರ ಪರವಾಗಿದ್ದೇನೆ.  ಸಂದ್ಯಾ ಸುರಕ್ಷಾ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಬಡವರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಅವಕಾಶ ಕೊಟ್ಟಿದ್ದೇವೆ ಎಂದು ಹೇಳಿದರು.

 

ನಂತರ ಕೊಕಟನೂರನಲ್ಲಿ ಮಾತನಾಡಿದ ಅವರು, ಕಂಬಳಿ‌ಹಾಕಿಸಿಕೊಳ್ಳೋಕು ಯೋಗ್ಯತೆ ಬೇಕು.  ಯೊಗ್ಯತೆ ಇದ್ದವರು ಹಾಕಿಕೊಂಡ್ರೆ ಕಂಬಳಿಗೆ ಬೆಲೆ ಬರುತ್ತದೆ ಎಂದು ತಮ್ಮನ್ನು ಹೇಳುವ ಮೂಲಕ ಕಂಬಳಿ ಹಾಕಿ ಸ್ವಾಗತಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಹಾಲುಮತ ಸಮಾಜದ ಮತಗಳನ್ನು ಸೆಳೆಯುವುದು ಅಲ್ಲ.  ಹಾಲುಮತ ಸಮಾಜಕ್ಕೆ ಸೌಲಭ್ಯ ಕೊಡಬೇಕು.  ಕನಕದಾಸರು ಹುಟ್ಟಿದ್ದು ನನ್ನ ಕ್ಷೇತ್ರವಾದ ಶಿಗ್ಗಾಂವಿಯ ಬಾಡ ಗ್ರಾಮದಲ್ಲಿ.  ಯಾರೂ ಆ ಸ್ಥಳವನ್ನು ತಿರುಗಿ ನೋಡಿದ್ದಿಲ್ಲ.  ನಾನು ಕೋಟೆಯನ್ನು ಕಟ್ಟಿಸಿ ಸೌಲಭ್ಯ ಕಲ್ಪಿಸಿದ್ದೇನೆ.  ಚುನಾವಣೆ ಮುಗಿದ ಮೇಲೆ ಎಲ್ಲರೂ ಅಲ್ಲಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಕಟನೂರ ಗ್ರಾಮಸ್ಥರನ್ನು ಆಹ್ವಾನಿಸಿದರು.

 

ಪ್ರತಿದಿನ ನಿತ್ಯ ಸಾವಿರಾರು ಜನರು ಬಾಡ ಗ್ರಾಮಕ್ಕೆ ಭೇಟಿ ನೀಡಿ ಕನಕದಾಸರ ಬಗ್ಗೆ ಮತ್ತು ಅವರ ವೈಚಾರಿಕತೆಯ ಕುರಿತು ತಿಳಿದುಕೊಳ್ಳುವಂತೆ ಮಾಡಿದ್ದೇವೆ.  ಈ‌ ಸಿಂದಗಿಯಲ್ಲಿ ಬಿಜೆಪಿ ಗೆಲ್ಲಿಸಿ.  2023ಕ್ಕೆ ನಾವು ಬರುವಾಗ ಖಾಲಿ ಕೈಯಲ್ಲಿ ಬರುವುದಿಲ್ಲ.  ಸಾಧನೆ ಮಾಡಿ ನಿಮ್ಮ ಮುಂದೆ ಬರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಶಶಿಕಲಾ ಜೊಲ್ಶಾಲೆ, ಶಾಸಕ ಎನ್. ಮಹೇಶ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌