ವಿಧಾನಸೌಧಕ್ಕೆ ಬೀಗ ಹಾಕಿಲ್ಲ ಸಚಿವರು ಮೂರು ಮೂರು ದಿನ ಸಚಿವರು ಬಂದು ಹೋಗುತ್ತಿದ್ದಾರೆ- ಸಿಎಂ ಬಸವರಾಜ ಬೊಮ್ಮಾಯಿ

ವಿಜಯಪುರ: ವಿಧಾನಸೌಧಕ್ಕೆ ಬೀಗ ಜಡಿದು ಸಿಎಂ ಮತ್ತು ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗಡ ಮಾತನಾಡಿದ ಅವರು, ಆ ಥರ ಏನಿಲ್ಲ. ಸಚಿವರು ಎರಡೆರಡು ಮೂರು ಮೂರು ದಿನ ವಿಧಾನಸೌಧಕ್ಕೆ ಬಂದು ಕೆಲಸ ಮಾಡಿ ಹೋಗುತ್ತಿದ್ದಾರೆ ಎಂದು ತಿಳಿಸಿದರು.

ಬೈ ಎಲೆಕ್ಷನ್ ಚುನಾವಣೆ ಪ್ರಚಾರ ಹಿನ್ನೆಲಡಯಲ್ಲಿ ಯಾವುದೇ ಸರಕಾರಿ ಕೆಲಸಗಳು ನಿಂತಿಲ್ಲ. ಈ ಹಿಂದೆ ಕಾಂಗ್ರೆಸ್ಸಿನವರು ಏನೇಲ್ಲ ಮಾಡಿದ್ದಾರೆ ಎಂಬುದು ನಮಗೂ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

ನಾನು ಮಂತ್ರಿಗಳಿಗೆ ಏನು ಸೂಚನೆ ಕೊಡಬೇಕೋ ಅದನ್ನೆಲ್ಲ ಕೊಟ್ಟಿದೇನೆ. ಯಾವುದೇ ಸರಕಾರಿ ಕೆಲಸಗಳು ನಿಂತಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಪ್ರಾದೇಶಿಕ ಪಕ್ಷವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಮುಗಿಸಲು ಪ್ರಯತ್ನ ಮಾಡುತ್ತಿವೆ ಎಂದು ಮಾಜಿ ಪ್ರದಾನಿ ಎಚ್. ಡಿ. ದೇವೇಗೌಡ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೆಡಿಎಸ್ ಅನ್ನು ಮುಗಿಸುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದ ಸಂಘಟನೆಯನ್ನು ಮಾತ್ರ ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.

ಇನ್ನೊಂದು ಪಕ್ಷದ ಕಡೆಗೆ ನಾವು ತಿರುಗಿಯೂ ನೋಡೊದಿಲ್ಲ‌ ಎಂದು ಸ್ಪಷ್ಟಪಡಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಜೆಡಿಎಸ್ ಪರವಾಗಿ ಬಿಜೆಪಿ ಹಣ ಹಂಚಿಕೆ ಎಂದು ಜಮೀರ್ ಆರೋಪಕ್ಕೂ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಮಾಜಿ ಸಚಿವ ಜಮೀರ ಅಹ್ಮದಖಾನ ಅವರುದು ವಿಪರೀತ ಕಲ್ಪನೆ ಅಷ್ಟೆ. ಅದಕ್ಕೆ ಯಾವುದೂ ಆಧಾರವಿಲ್ಲ ಎಂದು ವಾಗ್ದಾಳಿ ನಡೆಸಿದರು.

 

ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌