ಕಾಂಗ್ರೆಸ್ ತಾನಾಗಿಯೇ ನಶಿಸಿ ಹೋಗುವ ಕಾಲ ಬಂದಿದೆ- ಮಾಜಿ ಸಚಿವ ಎಚ್. ಡಿ. ರೇವಣ್ಣ

ವಿಜಯಪುರ: ಇಂದು ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ಸನ್ನು ನಾವ್ಯಾರು ತೆಗೆಯಬೇಕಾಗಿಲ್ಲ.  ಅದು ತಾನಾಗಿಯೆ ನಶಿಸಿ ಹೋಗುವ ಕಾಲ ಬಂದಿದೆ ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಭವಿಷ್ಯ ನುಡಿದಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಪ್ರಚಾರದಲ್ಲಿರುವ ಅವರು ಸಿಂದಗಿಯಲ್ಲಿ ಸುದ್ದಿಗೋಷ್ಛಿಯಲ್ಲಿ ಮಾತನಾಡಿ, ಇಡೀ ದೇಶದಲ್ಲಿ ನಂಬಿಕೆದ್ರೋಹ ಪಕ್ಷವೆಂದರೆ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.

ಈ ಬೈ ಎಲೆಕ್ಷನ್ ನಲ್ಲಿಯೂ ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ಒಳಒಪ್ಪಂದ ಮಾಡಿಕೊಂಡಿವೆ.  ಆದರೆ, ಜೆಡಿಎಸ್ ನವರು ಹಣ ಪಡೆದು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.  ಸೂಟಕೇಸ್ ಸಂಸ್ಕೃತಿ ಕಾಂಗ್ರೆಸ್ಸಿನಲ್ಲಿದೆಯೇ ಜೆಡಿಎಸ್ ನಲ್ಲಿ ಇಲ್ಲ.  ರಾಜ್ಯಸಭೆ, ವಿಧಾನಸಭೆ ಚುನಾವಣೆಯಲ್ಲಿ ಮೊದಲು ಸೂಟಕೇಸ್ ಇಡಣ್ಣ.  ಆಮೇಲೆ ಮಾತಾಡೋಣ ಎನ್ನುವುದು ಕಾಂಗ್ರೆಸ್ಸಿಗನರಿಗೆ ಆಭ್ಯಾಸವಾಗಿದೆ.  ನಾನೇನಾದರೂ ರಾಜ್ಯಸಭೆ ಚುನಾವಣೆಯಲ್ಲಿ ಎಂದಾದರೂ ಹಣ ಪಡೆದಿದ್ದೇವಾ? ಎಂದು ಪ್ರಶ್ನಿಸಿದ ಅವರು, ಈ ಹಿಂದೆ ರಾಜ್ಯಸಭೆಗೆ ಸ್ಪರ್ಧಿಸಿದ್ದ ಮುಸ್ಲಿಂ ಅಭ್ಯರ್ಥಿ ಫಾರೂಖ್ ಅವರನ್ನು ರೂ. 5 ಕೋ. ಹಣ ಪಡೆದು ಸೋಲಿಸಿದರು.  ಅಂದು ಸಾಬರನ್ನು ಸೋಲಿಸಿದ ನಿಮಗೆ ನಾಚಿಕೆಯಾಗಲ್ವಾ? ಅಂದು ಫಾರೂಖ ವಿರುದ್ಧ ಮತ ಚಲಾಯಿಸಿ ಕಾಂಗ್ರೆಸ್ಸಿಗೆ ಸೇರ್ಪಡೆಯಾದವರನ್ನು ಮತದರಾರರು 2018ರ ಚುನಾವಣೆಯಲ್ಲಿ 50 ರಿಂದ 60 ಸಾವಿರ ಮತಗಳ ಅಂತರದಿಂದ ಸೋಲಿಸಿದರು ಎಂದು ತಿಳಿಸಿದರು.

ರಾಜ್ಯಸಭೆ ಮತ್ತು ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ನಾನೇನಾದರೂ ಯಾವತ್ತಾದರೂ ಯಾರಿಂದಲಾದರೂ ಹಣ ಪಡೆದಿರುವುದಾಗಿ ಕಾಂಗ್ರೆಸ್ ನಾಯಕುರು ಹೇಳಿಸಿಬಿಟ್ಟರೆ ಇವತ್ತೇ ರಾಜಕೀಯ ಬಿಟ್ಟು ಹೋಗುತ್ತೇನೆ. ಎಂದು ಸವಾಲು ಹಾಕಿದ ಎಚ್. ಡಿ. ರೇವಣ್ಣ, ಕಾಂಗ್ರೆಸ್ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದ್ದರಿಂದ ತುಮಕೂರಿನಲ್ಲಿ ದೇವೇಗೌಡ ಸೋತರು.  ಮಂಡ್ಯ ಮತ್ತು ಕೆ. ಆರ್. ಪೇಟೆಯಲ್ಲಿ ಜೆಡಿಎಸ್ ಸೋಲಬೇಕಾಯಿತು.  ಮಾಜಿ ಪ್ರಧಾನಿ ಚರಣಸಿಂಗ್, ದೇವೇಗೌಡ ಮತ್ತು ಚಂದ್ರಶೇಖರ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ಇದೇ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.

ಅಲ್ಪಸಂಖ್ಯಾತರು ಮತ್ತು ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ದೇವೇಗೌಡ ಮಾಡಿದಷ್ಟು ಕೆಲಸವನ್ನು ಬೇರೆ ಯಾರೂ ಮಾಡಿಲ್ಲ.  ದೇವೇಗೌಡರು ಹಣದ ಬೆನ್ನು ಹತ್ತಿದ್ದರೆ ಪ್ರಧಾನಿ ಸ್ಥಾನ ಬಿಡುತ್ತಿರಲಿಲ್ಲ.  ಮೋದಿಯವರು ಕಾಂಗ್ರೆಸ್ ದ್ರೋಹ ಬಗೆಯು ಸಂಸ್ಕತಿ ಇವರನ್ನು ನಂಬಲು ಹೋಗಬೇಡಿ ಎಂದು ಹೇಳಿದ್ದರು ಎಂದು ಅವರು ತಿಳಿಸಿದ ಅವರು, ಸಿಂದಗಿ ಬೈ ಎಲೆಕ್ಷನ್ ಚುನಾವಣೆ ಪ್ರಚಾರ ಸಂದರ್ಭದಲ್ಲಿ ರೈತನೊಬ್ಬ ಹೇಳಿದ್ದಾನೆ.  ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಅವರ ಮಾವ ಈ ಮುಂಚೆಯಿಂದಲೂ ಎಂ. ಸಿ. ಮನಗೂಳಿ ಅವರ ಪರ ಪ್ರಚಾರ ಮಾಡುತ್ತಿದ್ದರು.  20 ರಿಂದ 30 ವರ್ಷ ಮುಸ್ಲಿಮ ಸಮಾಜದವರು ಎಂ. ಸಿ. ಮನಗೂಳಿ ಅವರಿಗೆ ಪ್ರತಿ ಬಾರಿ ಚುನಾವಣೆಯಲ್ಲಿ 20 ರಿಂದ 25 ಸಾವಿರ ಮತಗಳನ್ನು ಹಾಕಿದ್ದಾರೆ.  ರೈತನೊಬ್ಬ ಹೇಳುತ್ತಿದ್ದ.  ಅಂಗಡಿ ಅವರ ಮಾವ ಕಳೆದ 20 ರಿಂದ 30 ವರ್ಷ ಪಕ್ಷಕ್ಕಾಗಿ ದುಡಿದಿದ್ದಾರೆ.  ಪ್ರತಿ ಬಾರಿ ಮನಗೂಳಿ ಅವರಿಗೆ 20 ರಿಂದ 25 ಸಾವಿರ ಮುಸ್ಲಿಮರು ಮತ ಹಾಕುತ್ತಿದ್ದರು.  ಅದನ್ನು ನೆನೆಯಲೇಬೇಕು.  ಈಗ ಮನಗೂಳಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಸಿಂದಗಿ ಬೈ ಎಲೆಕ್ಷನ್ ನಲ್ಲಿ ಮುಸ್ಲಿಂ ಸಮುದಾಯದ ಎಂ. ಎ. ಪದವೀಧರೆ ನಾಜಿಯಾ ಶಕೀಲ ಅಂಗಡಿ ಅವರಿಗೆ ಟಿಕೆಟ್ ನೀಡಿದ್ದೇವೆ.  ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ 108 ಜನ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡಿದ್ದಾರೆ.  ಅಲ್ಪಸಂಖ್ಯಾತರಿಗೂ ಶೇ. 4ರಷ್ಟು ಮೀಸಲಾತಿ ನೀಡಿದ್ದಾರೆ.  ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಲು ಹೋರಾಟ ನಡೆಸಿ ತಮ್ಮ ಸಚಿವ ಸ್ಥಾನವನ್ನು ಧಿಕ್ಕರಿಸಿದ್ದರು.  ದೇವೇಗೌಡರು ಅಂದು ಮಾಡಿದ ಹೋರಾಟದ ಫಲ ಇಂದು ರಾಜ್ಯದಲ್ಲಿ 18 ಜನ ನಾಯಕ ಸಮುದಾಯದ ಜನ ಶಾಸಕರಾಗಿದ್ದಾರೆ ಎಂದು ಅವರು ತಿಳಿಸಿದರು.

ದೇಶದಲ್ಲಿ ನಂಬಿಕೆ ದ್ರೋಹ ಪಕ್ಷ ದೇಶದಲ್ಲಿ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್.  ಉತ್ತರ ಪ್ರದೇಶದಲ್ಲಿ ಶೇ. 35 ರಷ್ಟು ಜನ ಮುಸ್ಲಿಮರಿದ್ದರೂ ಅಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ.  ಪಶ್ಚಿಮ ಬಂಗಾಳದಲ್ಲಿಯೂ ಹೀನಾಯ ಸ್ಥಿತಿಗೆ ತಲುಪಿದೆ.  ಮನಗೂಳಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರನ್ನು ಸೋಲಿಸಿ ಮನಗೂಳಿ ಅವರ ಅವರ ಜೊತೆ ಕೆಲಸ ಮಾಡಿದ ವ್ಯಕ್ತಿಯ ಸೊಸೆ ನಾಜಿಯಾ ಅಂಗಡಿ ಅವರನ್ನು ಗೆಲ್ಲಿಸಬೇಕು ಎಂದು ಎಚ್. ಡಿ. ರೇವಣ್ಣ ಹೇಳಿದರು.

ಕಾಂಗ್ರೆಸ್ಸಿಗೆ ಈಗ ದುಸ್ಥಿತಿ ಬಂದಿದೆ.  ಜೆಡಿಎಸ್ ಅಭ್ಯರ್ಥಿಯ ಮನೆಗೆ ಹೋಗಿ ಅಭ್ಯರ್ಥಿಯನ್ನಾಗಿ ಮಾಡುವ ಪರಿಸ್ಥಿತಿ ಬಂದಿದೆ.  ತಾಕತ್ತಿದ್ದರೆ ಸಿಂದಗಿ ಮತಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ದಾಖಲೆ ನೀಡಲಿ.  ಕಾಂಗ್ರೆಸ್ಸಿನ ಪರಿಸ್ಥಿತಿ ಈಗ ಹೇಗಾಗಿದೆ ಎಂದರೆ ಆ ಪಕ್ಷವನ್ನು ನಾವ್ಯಾರು ತೆಗೆಯಬೇಕಾಗಿಲ್ಲ.  ಅದಾಗಿಯೇ ನಶಿಸಿ ಹೋಗಲಿದೆ.  ಇಂದು ರಾಜ್ಯ ಮತ್ತು ರಾಷ್ಟ್ರದಲ್ಲಿ ನೆಹರೂ, ಗಾಂಧಿ ಕಾಂಗ್ರೆಸ್ ಇಲ್ಲ ಎಂದು ಎಚ್. ಡಿ. ರೇವಣ್ಣ ವಾಗ್ದಾಳಿ ನಡೆಸಿದರು.

ಸೋಲಿನ ಭೀತಿಯಿಂದಾಗಿ ಕಾಂಗ್ರೆಸ್ ಮುಖಂಡರು ಪ್ರತಿದಿನ ಬಿಜೆಪಿ ಬದಲು ಜೆಡಿಎಸ್ ವಿರುದ್ಧ ಮಾತನಾಡುತ್ತಾರೆ.  ಇಂದು ಕಾಂಗ್ರೆಸ್ ಮತ್ತು ಬಿಜೆಪಿಗೆ ನೈತಿಕತೆ ಇಲ್ಲ.  ಇವರು ರಾಜ್ಯಕ್ಕೆ ನೀಡಿದ ಕೊಡುಗೆ ಏನು? ಇಡೀ ರಾಜ್ಯದಲ್ಲಿ ರೂ. 3 ಕೆಜಿ ಅಕ್ಕಿ ಕೊಡುವ ವ್ಯವಸ್ಥೆ ಜಾರಿಗೆ ತಂದಿದ್ದು ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ.  ಪ್ರಧಾನಿಯಾಗಿದ್ದಾಗ ಈ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತಂದಿದ್ದರು ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕ ಬಂಡೆಪ್ಪ ಕಾಶೆಂಪೂರ, ಸಿಂದಗಿ ಬೈ ಎಲೆಕ್ಷನ್ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.

 

 

 

 

Leave a Reply

ಹೊಸ ಪೋಸ್ಟ್‌